ಕರ್ನಾಟಕ

karnataka

ETV Bharat / state

ಕೊಡಗಿಗೆ ಯಾತ್ರೆ ಹೋಗಿದ್ದರೆ ರಾಹುಲ್ ಗಾಂಧಿಗೆ ಟಿಪ್ಪುವಿನ ಕ್ರೌರ್ಯ ಗೊತ್ತಾಗುತ್ತಿತ್ತು : ಕಟೀಲ್ - ಈಟಿವಿ ಕನ್ನಡ ಭಾರತ್

ಟಿಪ್ಪುವಿನ ಮತಾಂಧತೆ ಗೊತ್ತಾಗಬೇಕಾದರೆ ಕೊಡಗಿಗೆ ಯಾತ್ರೆ ಹೋಗಬೇಕಿತ್ತು. ಆದರೆ ಅಲ್ಲಿಗೆ ಕರೆದೊಯ್ಯದೇ ಬೇರೆ ಕಡೆ ಕರೆದೊಯ್ಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಹೇಳಿದ್ದಾರೆ.

bjp-state-president-nalinkumar-kateel-spoke-against-siddaramaiah
ಕೊಡಗಿಗೆ ಯಾತ್ರೆ ಹೋಗಿದ್ದರೆ ರಾಹುಲ್ ಗಾಂಧಿಗೆ ಟಿಪ್ಪುವಿನ ಕ್ರೌರ್ಯ ಗೊತ್ತಾಗುತ್ತಿತ್ತು : ಕಟೀಲ್

By

Published : Oct 9, 2022, 5:58 PM IST

ಬೆಂಗಳೂರು :ಕೊಡಗು ಕರಾವಳಿ ಭಾಗಕ್ಕೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರನ್ನು ಯಾತ್ರೆಗೆ ಕರೆದೊಯ್ದಿದ್ದರೆ ಟಿಪ್ಪುವಿನ ಮತಾಂಧತೆ, ಅವನ‌ ಸಮಾಜಘಾತಕ ಶಕ್ತಿಯ ಪರಿಚಯ ರಾಹುಲ್ ಗಾಂಧಿಗೆ ಆಗುತ್ತಿತ್ತು. ಅದಕ್ಕಾಗಿಯೇ ಆ ಭಾಗಕ್ಕೆ ಕರೆದೊಯ್ಯದೆ ಬೇರೆ ಕಡೆ ಕರೆದೊಯ್ಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ : ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರನ್ನು ಬದಲಾವಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಮತಾಂಧ ಟಿಪ್ಪುವಿನ ಮತಾಂಧತೆ ಗೊತ್ತಾಗಬೇಕಾದರೆ ಕೊಡಗು ಜಿಲ್ಲೆಗೆ ಯಾತ್ರೆ ಹೋಗಬೇಕಿತ್ತು. ರಾಹುಲ್ ಗಾಂಧಿ ಅವರನ್ನು ಕೊಡಗು, ಕರಾವಳಿ ಭಾಗಕ್ಕೆ ಕರೆದೊಯ್ದಿದ್ದರೆ ಟಿಪ್ಪುವಿನ ಕ್ರೌರ್ಯ, ಮತಾಂಧತೆ ಎಲ್ಲವೂ ಅವರಿಗೆ ತಿಳಿಯುತ್ತಿತ್ತು. ಅದಕ್ಕಾಗಿಯೇ ರಾಹುಲ್ ಗಾಂಧಿಯನ್ನು ಬೇರೆ ಕಡೆ ಪ್ರವಾಸಕ್ಕೆ ಕರೆದೊಯ್ದಿದ್ದಾರೆ ಎಂದರು.

ಕೊಡಗಿಗೆ ಯಾತ್ರೆ ಹೋಗಿದ್ದರೆ ರಾಹುಲ್ ಗಾಂಧಿಗೆ ಟಿಪ್ಪುವಿನ ಕ್ರೌರ್ಯ ಗೊತ್ತಾಗುತ್ತಿತ್ತು : ಕಟೀಲ್

ಆದರೂ ಈಗ ನಮ್ಮ ಸರ್ಕಾರ ಒಳ್ಳೆಯ ಕೆಲಸ ಮಾಡಿದೆ. ಬೆಂಗಳೂರು- ಮೈಸೂರು ನಡುವಿನ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್‌ ಹೆಸರು ತೆಗೆದು ಒಡೆಯರ್ ಹೆಸರಿಟ್ಟಿದೆ. ಹೊಸ ಯೋಜನೆ ಕಲ್ಪನೆ ಹಾಕಿಕೊಟ್ಟಿದ್ದ ಒಡೆಯರ್ ಹೆಸರಿಟ್ಟು ಗೌರವ ಕೊಡುವ ಕೆಲಸವನ್ನು ಮಾಡಿದೆ ಎಂದು ಕಟೀಲ್​ ಸಮರ್ಥಿಸಿಕೊಂಡರು.

ಅಕ್ಟೋಬರ್​ 11ರಿಂದ ರಾಜ್ಯ ಪ್ರವಾಸ: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಅ. 11 ರಿಂದ ರಾಜ್ಯ ಪ್ರವಾಸ ಆರಂಭವಾಗಲಿದೆ. ನಾನು ಈಗಾಗಲೇ ಬೆಳಗಾವಿಯಿಂದ ಪ್ರವಾಸ ಆರಂಭಿಸಿದ್ದು, ಅರುಣ್ ಸಿಂಗ್ ಬೀದರ್ ನಿಂದ ಪ್ರವಾಸ ಆರಂಭಿಸಲಿದ್ದಾರೆ. ರಾಜಕೀಯ ಯಾತ್ರೆ ಮತ್ತು ಸಂಘಟನಾತ್ಮಕ ಯಾತ್ರೆ ಮೂಲಕ ಮೊದಲ ಹಂತದಲ್ಲಿ 100 ಕ್ಷೇತ್ರಗಳ ಪ್ರವಾಸ ಕೈಗೊಳ್ಳುತ್ತಿದ್ದು, ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ :ರಾಹುಲ್ ಗಾಂಧಿ ಅಪ್ರಯೋಜಕ ಎಂದು ಬಿಂಬಿಸುವ ಅವಶ್ಯಕತೆ ಬಿಜೆಪಿಗಿಲ್ಲ.. ಪ್ರಹ್ಲಾದ್ ಜೋಶಿ

ABOUT THE AUTHOR

...view details