ಕರ್ನಾಟಕ

karnataka

ETV Bharat / state

ಬಿಜೆಪಿಯ ಒಳಗೆ ಬಂದು ನೋಡಿ ತಿಳಿದು ಮಾತಾಡಿದರೆ ಒಳಿತು: ವಿಶ್ವನಾಥ್​ಗೆ ರವಿಕುಮಾರ್ ಟಾಂಗ್

ಡ್ರಗ್ಸ್ ದಂಧೆ ವಿಚಾರದಲ್ಲಿ ಹೆಚ್. ವಿಶ್ವನಾಥ್ ಹೇಳಿರುವುದರಲ್ಲಿ ಯಾವುದೇ ಅರ್ಥವಿಲ್ಲ, ಟಿಪ್ಪು ವಿಚಾರದಲ್ಲಿಯೂ ಅದೇ ರೀತಿ ಗೊಂದಲಕಾರಿ ಹೇಳಿಕೆ ನೀಡಿದ್ದರು. ಈಗಲೂ ಅಂತಹ ಹೇಳಿಕೆ ಕೊಡುತ್ತಿದ್ದಾರೆ, ಬಿಜೆಪಿಯ ಒಳಗಡೆ ಬಂದು ಅವರು ತಿಳಿದುಕೊಳ್ಳುವುದು ಒಳ್ಳೆಯದು ಎಂದು ರವಿಕುಮಾರ್ ಟಾಂಗ್ ನೀಡಿದ್ದಾರೆ.

Ravikumar
ರವಿಕುಮಾರ್

By

Published : Sep 17, 2020, 4:48 PM IST

ಬೆಂಗಳೂರು:ಮಾಜಿ ಸಚಿವ ಹೆಚ್. ವಿಶ್ವನಾಥ್ ಬಿಜೆಪಿಯ ಒಳಗಡೆ ಬಂದು ಸ್ವಲ್ಪ ನೋಡಿ ತಿಳಿದುಕೊಂಡು ಮಾತನಾಡಿದರೆ ಒಳಿತು ಎಂದು ಡ್ರಗ್ಸ್ ವಿಚಾರ ಸಂಬಂಧದ ವಿಶ್ವನಾಥ್ ಹೇಳಿಕೆಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಟಾಂಗ್ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ಕಾಂಗ್ರೆಸ್‌ ಸರ್ಕಾರ ಡ್ರಗ್ಸ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಯಿತು. ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಕೂಡ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಆದರೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದ ನಂತರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಡ್ರಗ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಬಹಳ ಉತ್ತಮವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಹಾಕಿಕೊಂಡವರ ಬಂಧಿಸಲಾಗಿದ್ದು, ಕೆಲವರ ವಿಚಾರಣೆ ನಡೆಯುತ್ತಿದೆ. ಭಾಗಿಯಾದವರ ಬಗ್ಗೆ ಆಳವಾಗಿ ತನಿಖೆ, ಅಧ್ಯಯನ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ಅನ್ಯಾಯ ಮಾಡದೆ ರಾಜ್ಯದಲ್ಲಿ ಡ್ರಗ್ಸ್ ದಂಧೆಯ ಬೇರು ಕತ್ತರಿಸುವ ಕೆಲಸ ಮಾಡಲಿದೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ರವಿಕುಮಾರ್

ಡ್ರಗ್ಸ್ ದಂಧೆ ವಿಚಾರದಲ್ಲಿ ಹೆಚ್. ವಿಶ್ವನಾಥ್ ಹೇಳಿರುವುದರಲ್ಲಿ ಯಾವುದೇ ಅರ್ಥವಿಲ್ಲ, ಟಿಪ್ಪು ವಿಚಾರದಲ್ಲಿಯೂ ಅದೇ ರೀತಿ ಗೊಂದಲಕಾರಿ ಹೇಳಿಕೆ ನೀಡಿದ್ದರು. ಈಗಲೂ ಅಂತಹ ಹೇಳಿಕೆ ಕೊಡುತ್ತಿದ್ದಾರೆ, ಬಿಜೆಪಿಯ ಒಳಗಡೆ ಬಂದು ಏನು ಆಗುತ್ತಿದೆ, ಏನು ನಡೆಯುತ್ತಿದೆ, ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಸ್ವಲ್ಪ ಅವರು ತಿಳಿದುಕೊಳ್ಳುವುದು ಒಳ್ಳೆಯದು ಎಂದು ಟಾಂಗ್ ನೀಡಿದರು.

ವಿಶ್ವನಾಥ್ ನಮ್ಮ ಹಿರಿಯ ರಾಜಕಾರಣಿ, ಅವರ ಮೇಲೆ ಗೌರವ ಇದೆ, ಶಿಕ್ಷಣ ಸಚಿವರಾಗಿದ್ದರು, ಡ್ರಗ್ಸ್ ದಂಧೆಯಲ್ಲಿ ಬರೀ ಸಿನಿಮಾದವರು ಮಾತ್ರವಲ್ಲ ಬೇರೆಯವರೂ ಇರಬಹುದು. ಆದರೆ ಈ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕು, ಸುಮ್ಮ‌ಸುಮ್ಮನೇ ದಾಖಲೆ ಇಲ್ಲದೇ ಯಾರ ಯಾರನ್ನೋ ಬಂಧಿಸಲು ಸಾಧ್ಯವಿಲ್ಲ. ಯಾವುದೇ ಕ್ಷೇತ್ರವಾಗಲಿ, ರಾಜಕಾರಣಿ ಇರಲಿ, ದೊಡ್ಡವರು ಚಿಕ್ಕವರು ಯಾರೇ ಇರಲಿ. ತಪ್ಪು ತಪ್ಪೆ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಇದನ್ನು ಯಡಿಯೂರಪ್ಪ ಸರ್ಕಾರ ಬಹಳ ಉತ್ತಮವಾಗಿ ಮಾಡುತ್ತಿದೆ ಎಂದು ತಿಳಿಸಿದರು.

ABOUT THE AUTHOR

...view details