ಬೆಂಗಳೂರು: ಕೆಂಪುಕೋಟೆಗೆ ಖಲಿಸ್ತಾನಿಗಳು, ನಗರ ನಕ್ಸಲರು ದಾಳಿ ನಡೆಸಿದ ರೀತಿ ಬೆಳಗಾವಿ ಅಧಿವೇಶನಕ್ಕೆ ಟ್ರ್ಯಾಕ್ಟರ್ ಮೂಲಕ ಪ್ರವೇಶಿಸಲು ಕಾಂಗ್ರೆಸ್ಸಿಗರು ಯತ್ನಿಸಿದರು. ಒಂದೊಮ್ಮೆ ನಾಡದ್ರೋಹಿ ಕಾಂಗ್ರೆಸ್ ಪ್ರಯತ್ನ ಸಫಲವಾಗಿ, ಕಾಂಗ್ರೆಸ್ ಕಾರ್ಯಕರ್ತರ ಮುಖವಾಡ ಧರಿಸಿ ಸಮಾಜ ವಿಘಟಕರು ಗುಂಪಿನಲ್ಲಿ ಸೇರಿಸಿದ್ದರೆ ಅಧಿವೇಶನದ ಕತೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿ ಬಿಜೆಪಿ ಟ್ವೀಟ್ ಮಾಡಿದೆ.
ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆಯಾಮಗಳಲ್ಲಿ ಅಪಪ್ರಚಾರದ ಸಂಚು ನಡೆಸುವುದಕ್ಕಾಗಿಯೇ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಸಮಯ ಬಳಸಿಕೊಳ್ಳುತ್ತಿದೆ. ಮೊದಲ ದಿನದಿಂದ ಈವರೆಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಹಾಗೂ ಘಟನಾವಳಿಗಳು ಇದನ್ನೇ ಹೇಳುತ್ತಿವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಆಯೋಜಿಸಲಾಗಿತ್ತು.
ಆದರೆ, ನಾಡದ್ರೋಹಿ ಕಾಂಗ್ರೆಸ್ ಒಂದು ದಿನವೂ ಕಲಾಪ ನಡೆಯುವುದಕ್ಕೂ ಅವಕಾಶ ನೀಡಲಿಲ್ಲ. ಪ್ರಶ್ನೋತ್ತರ ಕಲಾಪವನ್ನೂ ತಮ್ಮ ಪ್ರತಿಷ್ಠೆಗೆ ಬಲಿ ಪಡೆಯಲು ಮುಂದಾದರು. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಬದ್ಧತೆಯೇ ಪ್ರಶ್ನಾರ್ಹವಾಗಿದೆ ಎಂದು ಬಿಜೆಪಿ ಟೀಕಿಸಿದೆ.