ಬೆಂಗಳೂರು: 12 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರ ನೇಮಕಗೊಳಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
12 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿದ ಬಿಜೆಪಿ ! - Latest District President news For bjp
12 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜಿಪಿ ನೂತನ ಜಿಲ್ಲಾಧ್ಯಕ್ಷರನ್ನು ನೇಮಕಗೊಳಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.
![12 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಿದ ಬಿಜೆಪಿ ! bjp-selected-the-new-district-presidents](https://etvbharatimages.akamaized.net/etvbharat/prod-images/768-512-5871537-thumbnail-3x2-dr.jpg)
ಇತ್ತೀಚೆಗಷ್ಟೇ 20 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರ ಅವಿರೋಧ ಆಯ್ಕೆ ಮಾಡಲಾಗಿತ್ತು, ಅದರ ಬೆನ್ನಲ್ಲೇ ಇದೀಗ 12 ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಬಿಬಿಎಂಪಿ ಅಕ್ರಮಗಳ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ, ದಾಖಲೆಗಳನ್ನು ಬಿಡುಗಡೆ ಮಾಡಿ ಅಕ್ರಮಗಳನ್ನು ಬಯಲಿಗೆಳೆದು ಗಮನ ಸೆಳೆದಿರುವ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಎನ್.ಆರ್.ರಮೇಶ್ ಅವರನ್ನು ಬೆಂಗಳೂರು ದಕ್ಷಿಣದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಮೈಸೂರ ನಗರ : ಶ್ರೀವತ್ಸ
ಮೈಸೂರು ಗ್ರಾಮಾಂತರ : ಎಸ್.ಟಿ. ಮಹೇಂದ್ರ
ಚಾಮರಾಜನಗರ : ಆರ್.ಸುಂದರ್
ಉಡುಪಿ : ಕುಯ್ಲಾಡಿ ಸುರೇಶ್ ನಾಯಕ್
ಉತ್ತರ ಕನ್ನಡ : ವೆಂಕಟೇಶ ನಾಯಕ್
ಬಾಗಲಕೋಟೆ : ಶಾಂತಪ್ಪಗೌಡ ತೀರ್ಥಪ್ಪಗೌಡ ಪಾಟೀಲ್
ರಾಯಚೂರು : ರಮಾನಂದ ಯಾದವ್
ಬಳ್ಳಾರಿ : ಚನ್ನಬಸವನಗೌಡ ಪಾಟೀಲ್
ದಾವಣಗೆರೆ : ವೀರೇಶ್ ಹನಗವಾಡಿ
ಬೆಂಗಳೂರು ಗ್ರಾಮಾಂತರ : ಎ.ವಿ ನಾರಾಯಣಸ್ವಾಮಿ
ಬೆಂಗಳೂರು ಕೇಂದ್ರ : ಜಿ ಮಂಜುನಾಥ
ಬೆಂಗಳೂರು ದಕ್ಷಿಣ : ಎನ್.ಆರ್.ರಮೇಶ್