ಕರ್ನಾಟಕ

karnataka

ETV Bharat / state

ಮಹಿಳೆಯರ ಮೇಲೆ ಹಲ್ಲೆ ಆರೋಪ: ಬಿಜೆಪಿ ಎಸ್ ಸಿ ಮೋರ್ಚಾದ ವೆಂಕಟೇಶ್ ಮೌರ್ಯ ಬಂಧನ - ಈಟಿವಿ ಭಾರತ ಕನ್ನಡ

ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಿಜೆಪಿ ಎಸ್​​ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.

bjp-sc-morcha-leader-attack-allegation-on-women-in-bengaluru
ಮಹಿಳೆಯರ ಮೇಲೆ ಹಲ್ಲೆ ಆರೋಪ: ಬಿಜೆಪಿ ಎಸ್ ಸಿ ಮೋರ್ಚಾದ ವೆಂಕಟೇಶ್ ಮೌರ್ಯ ಬಂಧನ

By

Published : Dec 18, 2022, 3:11 PM IST

ಬೆಂಗಳೂರು : ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಿಜೆಪಿ ಎಸ್ ಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಮೌರ್ಯ ಬಂಧಿತ ಆರೋಪಿ. ಭೋವಿ ಸಮುದಾಯದ ಮಹಿಳೆಯರ ವಿರುದ್ಧ ಅಪಪ್ರಚಾರದ ಪೋಸ್ಟ್ ಮಾಡಿದ ಆರೋಪ ಹಿನ್ನೆಲೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಗಲಾಟೆ ನಡೆದಿತ್ತು. ಈ ಬಗ್ಗೆ ಪ್ರಶ್ನಿಸಿದ ಮಹಿಳೆಯರಿಗೆ ಒದ್ದು, ಹಲ್ಲೆ ಮಾಡಿದ‌ ಬಗ್ಗೆ ದೂರು ದಾಖಲಾಗಿತ್ತು.

ಭೋವಿ ಸಮುದಾಯದ ಮಹಿಳೆಯರ ವಿರುದ್ಧ ಅಪಪ್ರಚಾರ ನಡೆಸಿ ತೇಜೋವಧೆ ಮಾಡಿದ ಆರೋಪದಡಿ ನಿನ್ನೆ ರಾತ್ರಿ ಮಹಿಳೆಯರು ವೆಂಕಟೇಶ್​ ಮೌರ್ಯ ಅವರನ್ನು ತರಾಟೆ ತೆಗೆದುಕೊಂಡಿದ್ದರು. ಅಶ್ಲೀಲ ಮೆಸೇಜ್ ಕಳಿಸುತ್ತಿರುವ ಆರೋಪದ ಜೊತೆಗೆ ಮಹಿಳೆಯೋರ್ವರಿಗೆ ಸ್ವಾಮೀಜಿ ಕೇಕ್ ತಿನ್ನಿಸುತ್ತಿರುವ ಫೋಟೋವನ್ನು ವೈರಲ್ ಮಾಡಿದ್ದರು. ಇದರ ಜೊತೆಗೆ ಭೋವಿ ಸಮಾಜದ ವಾಟ್ಸಾಪ್ ಗ್ರೂಪ್ ಗಳಲ್ಲಿ ಹರಿಬಿಟ್ಟು, ಮಹಿಳೆಯ ಬಗ್ಗೆ ಅಪಪ್ರಚಾರ ಮಾಡಿದ್ದರು ಆರೋಪ ಕೇಳಿಬಂದಿತ್ತು.

ಈ ಬಗ್ಗೆ ಮಾತುಕತೆ ನಡೆಸಲೆಂದು ಶನಿವಾರ ರಾತ್ರಿ ಅರಮನೆ ಮೈದಾನದ ಬಳಿ ಮಹಿಳೆಯರು ಹೋಗಿದ್ದರು. ಈ ವೇಳೆ ವಾಗ್ವಾದ ನಡೆದು ಆರೋಪಿ ವೆಂಕಟೇಶ್, ದೀಪಾ ಎಂಬವರಿಗೆ ಕಾಲಿನಿಂದ ಒದ್ದು, ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ‌. ಬಳಿಕ ಸ್ಥಳಕ್ಕಾಗಮಿಸಿದ ಸದಾಶಿವನಗರ ಪೊಲೀಸರು ವೆಂಕಟೇಶ್ ಮೌರ್ಯರನ್ನು ವಶಕ್ಕೆ ಪಡೆದಿದ್ದರು. ಈ ಮಧ್ಯೆ ಇಬ್ಬರಿಂದಲೂ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿತ್ತು. ಆದರೆ ತುಳಸಿ ರಮೇಶ್ ಮತ್ತು ದೀಪಾ ಎಂಬುವರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ದೂರುದಾರರಾದ ತುಳಸಿ ಮಾತನಾಡಿದ್ದು, ಸ್ವಾಮೀಜಿ ಒಬ್ಬರು ನನಗೆ ಕೇಕ್ ತಿನ್ನಿಸುವ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡಿದ್ದರು. ಅವರ ಜೊತೆ ಲಿಂಕ್ ಇರುವ ತರ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಅದನ್ನು ನಮ್ಮ ಸಮುದಾಯದ ಗ್ರೂಪ್ ಗಳಲ್ಲಿ ಶೇರ್ ಮಾಡಿ ನನ್ನ ಮರ್ಯಾದೆ ತೆಗೆದಿದ್ದಾರೆ. ಇದರಿಂದ ನನ್ನ ಗಂಡ ನನ್ನ ಜೊತೆ ಜಗಳ ಆಡುತ್ತಿದ್ದಾರೆ. ಇದನ್ನು ಕೇಳಲು ಹೋಗಿದ್ದಕ್ಕೆ ನಮ್ಮ ಮೇಲೆನೇ ಹಲ್ಲೆಗೆ ಬಂದಿದ್ದಾರೆ. ಹೆಣ್ಣು ಮಕ್ಕಳು ಅಂತ ನೋಡದೆ ನಮ್ಮ ಮೇಲೆ ಹಲ್ಲೆ ಮಾಡೋಕೆ ಮುಂದಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ವೆಂಕಟೇಶ್ ವೌರ್ಯರಿಂದಲೂ ಸದಾಶಿವ ನಗರ ಠಾಣೆಗೆ ದೂರು ದಾಖಲಾಗಿದೆ. ದೂರಿನಲ್ಲಿ ಚಂದ್ರಕಲಾ, ತುಳಸಿ, ಪದ್ಮ ನಯನ ಸೇರಿ ಹಲವರು ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಟ್ಟಿಗೆ, ಕಲ್ಲು ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ವೆಂಕಟೇಶ್ ಮೌರ್ಯರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ :ಬೆಳಗಾವಿ: ಖಾಸಗಿ ಹೋಟೆಲ್ ಸಿಬ್ಬಂದಿಗೆ ಯತೀಂದ್ರ ಸಿದ್ದರಾಮಯ್ಯ ತರಾಟೆ

ABOUT THE AUTHOR

...view details