ಕರ್ನಾಟಕ

karnataka

ETV Bharat / state

ಮಳೆ ಆತಂಕ.. ಬಿಜೆಪಿ ಸಾಧನಾ ಸಮಾವೇಶ ಮುಂದೂಡಲ್ಲ: ಬಿಜೆಪಿ ಸ್ಪಷ್ಟನೆ

ಈ ಬಾರಿ ಬಿಜೆಪಿ ಸಾಧನಾ ಸಮಾವೇಶವಾದ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಸಾಧನಾ ಸಮಾವೇಶ
ಬಿಜೆಪಿ ಸಾಧನಾ ಸಮಾವೇಶ

By

Published : Sep 6, 2022, 5:30 PM IST

ಬೆಂಗಳೂರು: ದೊಡ್ಡಬಳ್ಳಾಪುರದಲ್ಲಿ ಆಯೋಜನೆ ಮಾಡಿರುವ ಸರ್ಕಾರದ ಸಾಧನಾ ಸಮಾವೇಶವಾದ ಜನೋತ್ಸವ ಕಾರ್ಯಕ್ರಮವನ್ನು ಮತ್ತೊಮ್ಮೆ ಮುಂದೂಡಿಕೆ ಮಾಡುವುದಿಲ್ಲ. ಆದರೆ ರಾಜ್ಯ ಕಾರ್ಯಕಾರಿಣಿ ಕುರಿತು ಮಾತ್ರ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಲ್ಲ: ಈಗಾಗಲೇ ದೊಡ್ಡಬಳ್ಳಾಪುರದಲ್ಲಿ ಸಮಾವೇಶಕ್ಕೆ ಎಲ್ಲಾ ಸಿದ್ಧತೆಗಳು ನಡೆದಿವೆ. ಸೆಪ್ಟೆಂಬರ್ 8 ರಂದು ನಡೆಯುವ ಸಮಾವೇಶಕ್ಕೆ ಪೂರ್ವ ಸಿದ್ಧತೆಯೂ ಮುಕ್ತಾಯವಾಗಿದೆ. ಈ ಹಿಂದೆ ಜುಲೈ 28 ರಂದು ಜನೋತ್ಸವ ಕಾರ್ಯಕ್ರಮ ನಿಗದಿಯಾಗಿತ್ತು. ಪ್ರವೀಣ್ ನೆಟ್ಟಾರು ಹತ್ಯೆಯಿಂದ ಕಾರ್ಯಕರ್ತರು ಆಕ್ರೋಶಗೊಂಡ ಹಿನ್ನೆಲೆಯಲ್ಲಿ ಮುಂದೂಡಿಕೆ ಮಾಡಲಾಗಿತ್ತು. ನಂತರ ಮತ್ತೊಮ್ಮೆ ಆಗಸ್ಟ್ 28 ರಂದು ಸಮಾವೇಶ ಮಾಡಬೇಕು ಎಂದುಕೊಳ್ಳಲಾಯಿತು. ಗಣೇಶ ಚತುರ್ಥಿ ಕಾರಣಕ್ಕೆ ಮತ್ತೆ ದಿನಾಂಕ ಪರಿಷ್ಕರಿಸಿ ಇದೀಗ ಸೆಪ್ಟೆಂಬರ್ 8 ಕ್ಕೆ ನಿಗದಿಪಡಿಸಿದ್ದೇವೆ. ತಯಾರಿಯೂ ಮುಗಿದಿದ್ದು, ಈಗ ಮತ್ತೊಮ್ಮೆ ಮುಂದೂಡಿಕೆ ಮಾಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಈಟಿವಿ ಭಾರತಕ್ಕೆ ರವಿಕುಮಾರ್ ಮಾಹಿತಿ ನೀಡಿದ್ದಾರೆ.

ಸದ್ಯ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಆದರೂ ಸಮಾವೇಶಕ್ಕೆ ಮಳೆ ಬಿಡುವು ಕೊಡುವ ನಿರೀಕ್ಷೆಯಲ್ಲಿದ್ದೇವೆ. ಮಂಗಳೂರು ಮೋದಿ ಸಮಾವೇಶಕ್ಕೂ ಮಳೆ ಭೀತಿ ಇತ್ತು. ಆದರೂ ಯಶಸ್ವಿಯಾಗಿ ಮುಗಿಸಿದ್ದೇವೆ. ಹಾಗಾಗಿ ಈ ಬಾರಿ ಸೆಪ್ಟೆಂಬರ್ 8 ರಂದು ನಡೆಯಲಿರುವ ಸಾಧನಾ ಸಮಾವೇಶವನ್ನು ಮತ್ತೆ ಮುಂದೂಡಲ್ಲ ಎಂದು ಸ್ಪಷ್ಟಪಡಿಸಿದರು.

ಸೆಪ್ಟೆಂಬರ್ 11 ರಂದು ಬೆಂಗಳೂರಲ್ಲಿ ರಾಜ್ಯ ಕಾರ್ಯಕಾರಿಣಿ ಇದೆ. ಇದರ ಬಗ್ಗೆ ನಾಳೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಕಾರ್ಯಕಾರಿಣಿ ಮಾಡಬೇಕಾ? ಮಳೆ ಹಾನಿ, ನಿರ್ವಹಣೆ ಕುರಿತ ಚರ್ಚೆಗೆ ಸೀಮಿತ ಸಭೆ ನಡೆಸಬೇಕಾ? ಸದ್ಯಕ್ಕೆ ಮುಂದೂಡಿಕೆ ಮಾಡಿ ಮತ್ತೊಂದು ದಿನಾಂಕ ನಿಗದಿಪಡಿಸಬೇಕಾ ಎಂದು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪುಂಗಿದಾಸನ ಬರ್ತಡೇ ಮಾಡಲ್ಲ:ಇನ್ನು, ಮಳೆ ಅನಾಹುತ ಸಮಯದಲ್ಲಿಯೂ ಸಾಧನಾ ಸಮಾವೇಶ ಆಯೋಜನೆ ಮಾಡುವುದನ್ನು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡಿದ್ದಾರೆ. ಪ್ರತಿಪಕ್ಷ ಕಾಂಗ್ರೆಸ್ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ, ನಾವೇನು ಪುಂಗೀದಾಸನ ಬರ್ತಡೇ ಮಾಡುತ್ತಿಲ್ಲ. ಜನರಿಗಾಗಿ ಜನೋತ್ಸವ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್​​ಗೆ ತಿರುಗೇಟು ನೀಡಿದರು.

(ಇದನ್ನೂ ಓದಿ: ಬಿಜೆಪಿ ಸಾಧನಾ ಸಮಾವೇಶ ರದ್ದು, ರಾಜ್ಯದಲ್ಲಿ ಭಯೋತ್ಪಾದಕ ನಿಗ್ರಹ ದಳ ರಚನೆಗೆ ಸರ್ಕಾರ ನಿರ್ಧಾರ)

ABOUT THE AUTHOR

...view details