ಕರ್ನಾಟಕ

karnataka

ETV Bharat / state

ರಾಜ್ಯ ರಾಜಧಾನಿಯಲ್ಲಿ ಮೊಳಗಿದ ಕೇಸರಿ ಕಹಳೆ: ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ರೋಡ್ ಶೋ - ETV Bharat kannada News

ಬೆಂಗಳೂರಿನಲ್ಲಿ ರೋಡ್ ಶೋ, ಸಮಾವೇಶಗಳ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಾಪಕ ಟೀಕೆ ಮಾಡಿದೆ.

BJP road show
ಬಿಜೆಪಿ ರೋಡ್ ಶೋ

By

Published : Mar 19, 2023, 8:29 PM IST

ಬೆಂಗಳೂರು :ರಾಜ್ಯಾದ್ಯಂತ ನಡೆಯುತ್ತಿರುವ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆ ಇದೀಗ ರಾಜಧಾನಿ ಬೆಂಗಳೂರು ತಲುಪಿದ್ದು, ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಶಕ್ತಿ ಪ್ರದರ್ಶನ ನಡೆಸಿತು. ರೋಡ್ ಶೋ, ಸಮಾವೇಶಗಳ ಮೂಲಕ ಪ್ರಚಾರ ಕಾರ್ಯ ಕೈಗೊಂಡಿತು. ಸಮಾವೇಶದ ಉದ್ದಕ್ಕೂ ಕಾಂಗ್ರೆಸ್ ವಿರುದ್ಧ ಬಿಜೆಪಿ ವ್ಯಾಪಕ ಟೀಕೆ ಮಾಡಿತು.

ಗಾಂಧಿನಗರದಲ್ಲಿ ರಥಯಾತ್ರೆ :ಗಾಂಧಿನಗರ ವಿಧಾನಸಭೆ ಕ್ಷೇತ್ರದಲ್ಲಿ ನಡೆದ ರಥಯಾತ್ರೆ ಶ್ರೀರಾಮಪುರದ ಆಂಜನೇಯ ದೇವಸ್ಥಾನದಿಂದ ಆರಂಭಗೊಂಡು ಒಕಳಿಪುರಂನಲ್ಲಿ ರಥಯಾತ್ರೆ ಮುಕ್ತಾಯಗೊಂಡಿತು. ಈ ವೇಳೆ ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿ.ವಿ. ಸದಾನಂದ ಗೌಡ, ಬಿಜೆಪಿ ರಾಜಕೀಯ ಇಚ್ಛಾಶಕ್ತಿ ಇರುವ ಪಕ್ಷವಾಗಿದ್ದು, ಕಾಂಗ್ರೆಸ್ ಗ್ಯಾರಂಟಿ ಕೊಡುವ ಬೋರ್ಡ್ ಹಾಕಿ ಮತ ಕೇಳುತ್ತಿದ್ದಾರೆ. ಅವರು ಇನ್ನೊಂದು ಬೋರ್ಡ್ ಹಾಕಲು ಮರೆತಿದ್ದಾರೆ. ನಾವು ಸೋಲುವುದೂ ಗ್ಯಾರಂಟಿ, ಹಾಗಾಗಿ ನಾವು ಭರವಸೆ ಈಡೇರಿಸುವುದೂ ಗ್ಯಾರಂಟಿ ಇಲ್ಲ ಎಂದು ಅವರು ಬೋರ್ಡ್ ಹಾಕಬೇಕಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದವರು ಇನ್ನೂ ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ. ಈಗ ಕೋಲಾರದಿಂದಲೂ ಅವರನ್ನು ಎತ್ತಂಗಡಿ ಮಾಡಿಸುವ ಕೆಲಸ ಆಗುತ್ತಿದೆ ಎಂದರು.

ಬ್ಯಾಟರಾಯನಪುರದಲ್ಲಿ ರಥಯಾತ್ರೆ :ಬೆಂಗಳೂರಿನಲ್ಲಿ ಬಿಜೆಪಿ ಯುವ ಸಂಕಲ್ಪ ಸಮಾವೇಶ ನಡೆಯಿತು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಹಕಾರನಗರದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬ್ಯಾಟರಾಯನಪುರದಲ್ಲಿ ಕೃಷ್ಣನ ಹೆಸರಿರುವ ಕಂಸ ಸೋಲುತ್ತಾನೆ, ಯಡಿಯೂರಪ್ಪ ನಾಯಕತ್ವದಲ್ಲಿ ಬ್ಯಾಟರಾಯನಪುರ ಗೆಲ್ಲುವ ಮೂಲಕ ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರಸ್​ ಭಯೋತ್ಪಾದಕರ ಬೆಂಗಾವಲು - ಕಟೀಲ್​ :ಬಳಿಕ ಬಿಜೆಪಿ ರಥಯಾತ್ರೆಯಲ್ಲಿ ಭಾಗಿಯಾಗಿ ಮಾತನಾಡಿದ ನಳೀನ್​ ಕುಮಾರ್​ ಕಟೀಲ್​, ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ಭಯೋತ್ಪಾದಕರ, ಭ್ರಷ್ಟಾಚಾರಿಗಳ ರಾಷ್ಟ್ರವಾಗಿ ಕುಟುಂಬವಾದಕ್ಕೆ ಮನ್ನಣೆ ಕೊಡುವ ಕೆಲಸ ಆಯಿತು. ಆದರೆ ಇಂದು ಪಾಕಿಸ್ತಾನದ ಜನರು ಮಸೀದಿಯ ಮುಂದೆ ನಿಂತು ಪಾಕಿಸ್ತಾನ ಉಳಿಯಲು ನರೇಂದ್ರ ಮೋದಿ ಬೇಕು ಎಂದು ಪ್ರಾರ್ಥನೆ ಮಾಡುತ್ತಾರೆ.

ಕಾಂಗ್ರೆಸ್ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವಂತಿರಲಿಲ್ಲ, ಕಾಶ್ಮೀರದಲ್ಲಿ ಭಯೋತ್ಪಾದಕರು ನಮ್ಮ ಸೈನಿಕರಿಗೆ ಗುಂಡು ಹೊಡೆದಾಗ ಪಾರ್ಥಿವ ಶರೀರ ತರಲು ಮನಮೋಹನ್ ಸಿಂಗ್​ಗೆ ಆಗಲಿಲ್ಲ. ಭಯೋತ್ಪಾದಕರಿಗೆ ಪ್ರೇರಣೆಯಾಗಿ, ಬೆಂಗಾವಲಾಗಿ ಕಾಂಗ್ರೆಸ್ ನಿಂತಿತ್ತು. ಖಲಿಸ್ತಾನ್​ ಭಯೋತ್ಪಾದಕ ಭಿಂದ್ರನ್ ವಾಲೆಯ ಸೃಷ್ಟಿ ಇಂದಿರಾ ಗಾಂಧಿಯಿಂದ ಆಯಿತು ಎಂದು ನಳೀನ್​ ಕುಮಾರ್​ ಕಟೀಲ್​ ಆರೋಪಿಸಿದರು.

ಡಿ.ಕೆ.ಶಿವಕುಮಾರ್​ಗೆ ಎರಡು ಕುಕ್ಕರ್ ಮೇಲೆ ಪ್ರೀತಿ- ಕಟೀಲ್​ ಕಿಡಿ :ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಆದಾಗ ಡಿ.ಕೆ. ಶಿವಕುಮಾರ್ ಕಣ್ಣಲ್ಲಿ ನೀರು ಬಂತು. ಅದೇ ರೈತರ ಆತ್ಮಹತ್ಯೆಯಾದಾಗ, ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಣ್ಣಲ್ಲಿ ನೀರು ಬರಲಿಲ್ಲ. ಡಿ.ಕೆ. ಶಿವಕುಮಾರ್​ಗೆ ಎರಡು ಕುಕ್ಕರ್ ಮೇಲೆ ಪ್ರೀತಿ ಇದೆ. ಒಂದು ಬೆಳಗಾವಿ ಕುಕ್ಕರ್, ಮತ್ತೊಂದು ಮಂಗಳೂರು ಕುಕ್ಕರ್ ಎಂದು ನಳಿನ್​​ ಕುಮಾರ್​ ಕಟೀಲ್​ ಕಿಡಿಕಾಡಿದರು

ಕಾಂಗ್ರೆಸ್ ಭಯೋತ್ಪಾದಕರ ಪಾರ್ಟಿ - ನಳಿನ್​ ಕುಮಾರ್​ ಗಂಭೀರ ಆರೋಪ:ಕಾಂಗ್ರೆಸ್​ಗೆ ಇನ್ನೊಂದು ಹೆಸರೇ ಭಯೋತ್ಪಾದನೆ, ಭಯೋತ್ಪಾದಕರ ಪಾರ್ಟಿ ಕಾಂಗ್ರೆಸ್. ಡಿ.ಜೆ. ಹಳ್ಳಿ ಪ್ರಕರಣದಲ್ಲಿ ಸ್ವ ಪಕ್ಷೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಾಕಿದ ಸಂಪತ್ ರಾಜ್ ನನ್ನು ಇನ್ನೂ ಕಾಂಗ್ರೆಸ್ ನಿಂದ ಉಚ್ಛಾಟನೆ ಮಾಡಿಲ್ಲ ಎಂದು ನಳಿನ್​ ಕುಮಾರ್​ ಕಟೀಲ್​ ವಾಗ್ದಾಳಿ ನಡೆಸಿದರು.

ಚಾಮರಾಜಪೇಟೆ ರಥ ಯಾತ್ರೆ :ಬಳಿಕನಂಜಾಂಬ ಅಗ್ರಹಾರದಿಂದ ಬಿಜೆಪಿ ವಿಜಯ ಸಂಕಲ್ಪ ಯಾತ್ರ ನಡೆಯಿತು. ಚಾಮರಾಜಪೇಟೆಯ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡಿ ಯಾತ್ರೆ ಆರಂಭಿಸಲಾಯಿತು. ಪಂಚಮುಖಿ ಆಂಜನೇಯ ದೇವಸ್ಥಾನದಿಂದ ಪಂಡೀತ್ ದಿನದಯಾಳ್ ಉಪಾಧ್ಯ ರಸ್ತೆಯ ಮೂಲಕ ಮಲೆ ಮಹದೇಶ್ವರ ದೇಗುಲದವರೆಗೂ ಭರ್ಜರಿಯಾಗಿ ಯಾತ್ರೆ ನಡೆಯಿತು.

ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? ನಳಿನ್​ಕುಮಾರ್​ ಪ್ರಶ್ನೆ :ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ,‌ ಮನಮೋಹನ್ ಸಿಂಗ್ ಕಾಲದಲ್ಲಿ ನೀರು, ಗಾಳಿ ಸೇರಿ ಪಂಚ ಭೂತಗಳಲ್ಲೂ ಹಗರಣ ಆಗಿತ್ತು. 40% ಎಂದು ಕಾಂಗ್ರೆಸ್ ಹೇಳುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ವಾದ್ರಾ ಯಾಕೆ ಬೇಲ್​ನಲ್ಲಿ ಇದ್ದಾರೆ? ಕೆಪಿಸಿಸಿ ಅಧ್ಯಕ್ಷರು ಕರ್ನಾಟಕದ ಇತಿಹಾಸದ ಕಥೆ ಬರೆಯಲು ತಿಹಾರ್ ಜೈಲಿಗೆ ಹೋದ್ರಾ? ಡಿ.ಕೆ. ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ರೈತರ ಪಂಪ್ ಸೆಟ್​ಗೆ 10 ಸಾವಿರ ರೂ. ಫೈನ್ ಹಾಕಲಾಗಿತ್ತು. ಸುಳ್ಯದಲ್ಲಿ ರೈತರೊಬ್ಬರು ಡಿ.ಕೆ. ಶಿವಕುಮಾರ್ ಗೆ ಕರೆ ಮಾಡಿ ಕರೆಂಟ್ ಕೇಳಿದಾಗ ಭಯೋತ್ಪಾದಕನ ಮನೆಗೆ ನುಗ್ಗುವಂತೆ ಪೊಲೀಸರು ನುಗ್ಗಿ ಎಳೆದೊಯ್ದು ಜೈಲಿಗೆ ಹಾಕಿದರು.

ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೆ ಚುನಾವಣೆಯಲ್ಲಿ ನಿಲ್ಲುವ ಯೋಗ್ಯತೆ ಇಲ್ಲ, ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲ್ಲುವುದೇ ಗ್ಯಾರಂಟಿ ಇಲ್ಲ, ಹೀಗಿದ್ದಾಗ ಇನ್ನೇನು ಗ್ಯಾರಂಟಿ ಕಾರ್ಡ್ ನೀಡುತ್ತೀರಿ ನೀವು? ಕಾಂಗ್ರೆಸ್ ಕಚೇರಿಯಲ್ಲಿ ಬರೀ ಜಯಂತಿಗಳ ಆಚರಣೆ ಅಷ್ಟೇ ನಡೆಯುತ್ತಿದ್ದು, ಬೇರೆ ಯಾವುದೇ ಕಾರ್ಯಕ್ರಮಗಳು ಪಕ್ಷದಲ್ಲಿ ನಡೆಯುತ್ತಿಲ್ಲ. ಕಾಂಗ್ರೆಸ್​ನಲ್ಲಿ ಯುವಕರ ತಂಡ ಇಲ್ಲದೇ 80 ವರ್ಷದ ಮಲ್ಲಿಕಾರ್ಜುನ್​ ಖರ್ಗೆ ಕಾಂಗ್ರೆಸ್ ಮುನ್ನಡೆಸುತ್ತಿದ್ದಾರೆ. ಕಾಂಗ್ರೆಸ್ ಮುದುಕರ ಪಾರ್ಟಿ, ಕಾಂಗ್ರೆಸ್ ವೃದ್ಧಾಶ್ರಮಕ್ಕೆ ಸೇರುವ ಪಕ್ಷ ಎಂದು ಕಟೀಲ್​ ಟೀಕಿಸಿದರು.

ಇದನ್ನೂ ಓದಿ :ಬಿಜೆಪಿಯ 'ಸಾಮ್ರಾಟ'ನ ಭದ್ರಕೋಟೆ.. ಪದ್ಮನಾಭನಗರ ವಶಕ್ಕೆ ಕೈ-ತೆನೆ ಕಸರತ್ತು

ABOUT THE AUTHOR

...view details