ಕರ್ನಾಟಕ

karnataka

ETV Bharat / state

ಬಿಜೆಪಿ ಸ್ಟಾರ್ ಪ್ರಚಾರಕರ‌ ಪಟ್ಟಿ ರಿಲೀಸ್: ಸಿಎಂ‌ ಬಿಎಸ್​ವೈಗೆ ಎರಡನೇ ಸ್ಥಾನ, ಕಟೀಲ್​ಗೆ ಮೊದಲ ಸ್ಥಾನ! - BJP releases list of star campaigners

ಉಪಚುನಾವಣೆಗೆ ಬಿಜೆಪಿ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ್ದು, ನಂಬರ್ 1 ಸ್ಥಾನದಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದು, ಪಟ್ಟಿಯಲ್ಲಿ ಸಿಎಂ ಬಿಎಸ್​ವೈ ಎರಡನೇ ಸ್ಥಾನದಲ್ಲಿದ್ದಾರೆ.

ಬಿಜೆಪಿ ಸ್ಟಾರ್ ಪ್ರಚಾರಕರ‌ ಪಟ್ಟ ರಿಲೀಸ್

By

Published : Nov 17, 2019, 2:16 PM IST

ಬೆಂಗಳೂರು: ಉಪ ಚುನಾವಣೆಗೆ ಬಿಜೆಪಿ 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದ್ದು, 40 ಜನ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಯಾಗಿದ್ದು, ಮೊದಲ ಸ್ಥಾನದಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದ್ದರೆ, ಪಟ್ಟಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಎರಡನೇ ಸ್ಥಾನದಲ್ಲಿದ್ದಾರೆ.

ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ನಟ ಜಗ್ಗೇಶ್, ಸಂಸದ ಅನಂತ್ ಕುಮಾರ್ ಹೆಗಡೆ, ಬಸನಗೌಡ ಪಾಟೀಲ್ ಯತ್ನಾಳ್, ಸಿ.ಪಿ .ಯೋಗೀಶ್ವರ್, ನಟಿ ಮಾಳವಿಕಾಗೆ ಕೊಕ್ ನೀಡಲಾಗಿದೆ.

ಕಳೆದ ಸಲ ಅನಂತ್ ಕುಮಾರ್ ಹೆಗಡೆ ಸ್ಟಾರ್ ಪ್ರಚಾರಕರಾಗಿದ್ದರು. ಆದ್ರೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುವ ಹಿನ್ನೆಲೆಯಲ್ಲಿ ಹೆಗಡೆ ಹೆಸರು ಕೈಬಿಡಲಾಗಿದೆ. ಪಟ್ಟಿಯಲ್ಲಿ ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ, ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೆಸರನ್ನೂ ಬಿಜೆಪಿ ಕೈಬಿಟ್ಟಿದೆ.

ಬಿಜೆಪಿ ಸ್ಟಾರ್ ಪ್ರಚಾರಕರ‌ ಪಟ್ಟಿ ರಿಲೀಸ್

ಕೇಂದ್ರ ಸಚಿವರು ಮತ್ತು ರಾಜ್ಯ ಸಚಿವರಿಗಿಂತ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ​ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ. ಪಟ್ಟಿಯಲ್ಲಿ 26 ನೇ ಸ್ಥಾನ ಸುರಾನಾ​ಗೆ 27ನೇ ಸ್ಥಾನ ಸಚಿವೆ ಶಶಿಕಲಾ ಜೊಲ್ಲೆಗೆ, 28ನೇ ಸ್ಥಾನ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಗೆ ನೀಡಲಾಗಿದೆ. ಸರ್ಕಾರ ರಚನೆ ವೇಳೆ ಸದನದಲ್ಲಿ ಸಮರ್ಥವಾಗಿ ಮಾತನಾಡಿದ್ದ ಸಚಿವ ಮಾಧುಸ್ವಾಮಿಗೆ ಕಡೆಯ ಸ್ಥಾನ ನೀಡಲಾಗಿದೆ.

ಇನ್ನು ಮೂವರು ಡಿಸಿಎಂ, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಸೇರಿ 40 ಜನರನ್ನು ತಾರಾ ಪ್ರಚಾರಕರನ್ನಾಗಿ ಮಾಡಲಾಗಿದೆ.

ಬಿಎಸ್​ವೈಗೆ 2ನೇ ಸ್ಥಾನ:

ರಾಜ್ಯ ಬಿಜೆಪಿ ಮಟ್ಟಿಗೆ ಬಿಎಸ್ ಯಡಿಯೂರಪ್ಪ ಪ್ರಶ್ನಾತೀತ ನಾಯಕ, ಸರ್ಕಾರ ರಚನೆಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಿದ್ದೂ ತಾರಾ ಪ್ರಚಾರಕರ ಪಟ್ಟಿಯಲ್ಲಿ ಎರಡನೇ ಸ್ಥಾನ ನೀಡಿರುವುದು ಬಿಎಸ್‌ವೈ ಬೆಂಬಲಿಗರಿಗೆ ತೀವ್ರ ಅಸಮಾಧಾನ ಮೂಡಿಸಿದೆ. ಪಕ್ಷದಲ್ಲಿ ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಅವರ ಆಪ್ತರಿಗೊ ಕೊಕ್ ನೀಡಲಾಗುತ್ತಿದೆ ಎನ್ನುವ ಆರೋಪಗಳ ನಡುವೆ ತಾರಾ ಪ್ರಚಾರಕರ ಪಟ್ಟಿಯಲ್ಲಿ, ಅದರಲ್ಲೂ ಮುಖ್ಯಮಂತ್ರಿಗೆ ಎರಡನೇ ಸ್ಥಾನ ನೀಡಿರುವುದು ತೀವ್ರ ಚರ್ಚೆಗೆ‌ ಗ್ರಾಸವಾಗಿದೆ.

ಕೇಂದ್ರ ನಾಯಕರ ಹೆಸರಿಲ್ಲ:

ಸ್ಟಾರ್ ಪ್ರಚಾರಕರಲ್ಲಿ ಬಿಜೆಪಿ ರಾಜ್ಯ ನಾಯಕರೇ ಹೈಲೈಟ್ ಆಗಿದ್ದಾರೆ. ಪ್ರಧಾನಿ ಮೋದಿ, ಅಮಿತ್ ಷಾ, ಜೆ.ಪಿ. ನಡ್ಡಾ, ಸ್ಮೃತಿ ಇರಾನಿ, ಪ್ರಕಾಶ್ ಜಾವಡೇಕರ್, ಪಿಯೂಶ್ ಗೋಯಲ್ ಹೆಸರು ಪಟ್ಟಿಯಲ್ಲಿಲ್ಲ. ರಾಜ್ಯದಿಂದ ಆಯ್ಕೆಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನೂ ಸ್ಟಾರ್ ಪ್ರಚಾರಕ ಪಟ್ಟಿಯಿಂದ ಕೈ ಬಿಡಲಾಗಿದೆ.

ಬಿಜೆಪಿ ಸ್ಟಾರ್​ ಪ್ರಚಾರಕರು:
1. ನಳಿನ್ ಕುಮಾರ್ ಕಟೀಲ್
2. ಬಿ.ಎಸ್.ಯಡಿಯೂರಪ್ಪ
3. ಡಿ.ವಿ. ಸದಾನಂದಗೌಡ
4. ಪ್ರಹ್ಲಾದ್ ಜೋಷಿ
5.ಬಿ.ಎಲ್. ಸಂತೋಷ್
6. ಮುರುಳೀಧರ ರಾವ್
7. ಅರುಣ್ ಕುಮಾರ್
8. ಜಗದೀಶ್ ಶೆಟ್ಟರ್
9. ಲಕ್ಷ್ಮಣ ಸವದಿ
10. ಗೋವಿಂದ ಕಾರಜೋಳ
11. ಡಾ.ಸಿ.ಎನ್. ಅಶ್ವತ್ಥನಾರಾಯಣ್
12. ಕೆ.ಎಸ್.ಈಶ್ವರಪ್ಪ
13. ಅರವಿಂದ ಲಿಂಬಾವಳಿ
14. ಸಿ.ಟಿ. ರವಿ
15. ಶೋಭಾ ಕರಂದ್ಲಾಜೆ
16. ಎನ್.ರವಿಕುಮಾರ್
17. ಮಹೇಶ್ ತೆಂಗಿನಕಾಯಿ
18.ಆರ್.ಅಶೋಕ್
19. ಪಿ.ಸಿ. ಮೋಹನ್
20. ಶ್ರೀರಾಮುಲು
21. ಪ್ರತಾಪ್ ಸಿಂಹ
22. ವಿ.ಸೋಮಣ್ಣ
23. ಬಸವರಾಜ ಬೊಮ್ಮಾಯಿ
24. ರಮೇಶ್ ಜಿಗಜಿಣಗಿ
25. ಪ್ರಭಾಕರ ಕೋರೆ
26. ನಿರ್ಮಲ್ ಕುಮಾರ್ ಸುರಾನಾ
27. ಶಶಿಕಲಾ ಜೊಲ್ಲೆ
28. ಸುರೇಶ್ ಅಂಗಡಿ
29. ಚಲವಾದಿ ನಾರಾಯಣಸ್ವಾಮಿ
30. ಶ್ರುತಿ
31. ತಾರಾ ಅನೂರಾಧ
32. ರಾಜೂಗೌಡ
33. ಭಾರತಿ ಶೆಟ್ಟಿ
34. ಸಿ.ಸಿ. ಪಾಟೀಲ್
35. ಬಿ.ಜೆ. ಪುಟ್ಟಸ್ವಾಮಿ
36.ಉಮೇಶ್ ಕತ್ತಿ
37. ಕೋಟಾ‌ ಶ್ರೀನಿವಾಸ ಪೂಜಾರಿ
38. ಪ್ರಭು ಚೌಹಾನ್
39. ಎಸ್.ಆರ್.ವಿಶ್ವನಾಥ್
40. ಮಾಧುಸ್ವಾಮಿ

For All Latest Updates

TAGGED:

ABOUT THE AUTHOR

...view details