ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​​ನಲ್ಲಿ ಜಾತ್ರೆ ಶುರುವಾಗಿಲ್ಲ, ಬದಲಾಗಿ ಅಂತಿಮ ಯಾತ್ರೆಗೆ ರೆಡಿಯಾಗುತ್ತಿದೆ: ಕಟೀಲ್ - ಬಿಜೆಪಿ ಕಚೇರಿಯಲ್ಲಿ ಯೋಗ ರಮೇಶ್ ಪಕ್ಷ ಸೇರ್ಪಡೆ

ಯಾರೋ ಒಬ್ರು ಕಾಂಗ್ರೆಸ್ ಜಾತ್ರೆ ಶುರುವಾಗಿದೆ ಅಂತಾ ಹೇಳುತ್ತಿದ್ದರು‌. ಕಾಂಗ್ರೆಸ್​​​ನಲ್ಲಿ ಜಾತ್ರೆ ಶುರುವಾಗಿಲ್ಲ, ಬದಲಾಗಿ ಕಾಂಗ್ರೆಸ್ ಅಂತಿಮ ಯಾತ್ರೆಗೆ ರೆಡಿಯಾಗುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

By

Published : Dec 4, 2021, 9:46 PM IST

ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೀದಿಯಲ್ಲಿ ಎರಡು ಹೋಳಾಗಲಿದೆ ಎಂದು ಹೆಸರು ಪ್ರಸ್ತಾಪ ಮಾಡದೇ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ನಾಯಕತ್ವ ಫೈಟ್​​​​ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದರು.

ಬಿಜೆಪಿ ಕಚೇರಿಯಲ್ಲಿ ಯೋಗ ರಮೇಶ್ ಪಕ್ಷ ಸೇರ್ಪಡೆ ಕಾರ್ಯಕ್ರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ವಿಭಿನ್ನವಾಗಿ ದೊಡ್ಡದಾಗಿ ಬೆಳೆದಿದೆ. ಇಂದಿರಾಗಾಂಧಿ ಆಳ್ವಿಕೆಯಲ್ಲಿ ಲೈಟ್ ಕಂಬ ನಿಲ್ಲಿಸಿದರೆ ಕಾಂಗ್ರೆಸ್ ಗೆಲ್ಲುತ್ತೆ ಅಂತಾ ಇತ್ತು. ಆದರೆ, ಈಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ನಿಂತ್ರೆನೇ ಕಾಂಗ್ರೆಸ್ ಗೆಲ್ಲೋದಿಲ್ಲ. ಇವತ್ತು ಕರ್ನಾಟಕದ ಕಾಂಗ್ರೆಸ್ ನಲ್ಲಿ ಮತ್ತೆ ಸಿಎಂ ಆಗಲು ಮ್ಯೂಸಿಕಲ್ ಚೇರ್​ ಹಾಗೂ, ಟವಲ್ ಹಾಕ್ತಿದ್ದಾರೆ. ಕಾಂಗ್ರೆಸ್ ಇವತ್ತು ವಿರೋಧ ಪಕ್ಷ ಆಗಲು ನಾಲಾಯಕ್ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಮುನ್ನಡೆಯಲು ಅಸಾಧ್ಯ ವಾದ ಪಾರ್ಟಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ಯಾರೋ ಒಬ್ರು ಕಾಂಗ್ರೆಸ್ ಜಾತ್ರೆ ಶುರು ಆಗಿದೆ ಅಂತಾ ಹೇಳುತ್ತಿದ್ದರು‌. ಕಾಂಗ್ರೆಸ್ ನಲ್ಲಿ ಜಾತ್ರೆ ಶುರುವಾಗಿಲ್ಲ, ಬದಲಾಗಿ ಕಾಂಗ್ರೆಸ್ ಅಂತಿಮ ಯಾತ್ರೆಗೆ ರೆಡಿಯಾಗುತ್ತಿದೆ. ಬೇರೆ ಬೇರೆ ಪಾರ್ಟಿಯಿಂದ ಹತ್ತಾರು ಜನ ಬಿಜೆಪಿಗೆ ಸೇರಲು ಬರ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​​​ಗೆ ಅಭ್ಯರ್ಥಿ ಕೊರತೆ ಕಂಡಿದೆ‌. ಕಾಂಗ್ರೆಸ್ ಮುಳುಗುವ ಹಡಗು, ಬಿಜೆಪಿ ಬೆಳಗುವ ಹಡಗು ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಅಲ್ಲಿರುವ ಜಗಳ ಬೀದಿ ಜಗಳ ವಾಗಿದೆ. ಕಾಂಗ್ರೆಸ್​​ನಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಆಗಿ ಒಂದೂವರೆ ವರ್ಷ ಆಗಿದೆ. ಆದರೆ ಇನ್ನೂ ಕೂಡ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಆಗಿಲ್ಲ. ಯಾರು ಯಾರು ಇದ್ದಾರೆ ಇನ್ನೂ ಕೂಡ ಪೆವಿಕಾಲ್ ಹಾಕಿಕೊಂಡು ಕೂತಿದ್ದಾರೆ. ಕಾಂಗ್ರೆಸ್​​ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಆದರೆ, ಬಿಜೆಪಿಯಲ್ಲಿ ಎಲ್ಲವೂ ಕೂಡ ಬದಲಾವಣೆ ಆಗಿದೆ. ಬಿಜೆಪಿ ಇವತ್ತು ಶಕ್ತಿಯುತ ಪಾರ್ಟಿಯಾಗಿದೆ. ಕಾಂಗ್ರೆಸ್ ರಾಜ್ಯದ ಪದಾಧಿಕಾರಿಗಳ ಆಯ್ಕೆ ಆಗದ ಸ್ಥಿತಿಯಲ್ಲಿ ಇದೆ. ಒಬ್ಬನ ಜಿಲ್ಲಾಧ್ಯಕ್ಷರ ಬದಲಾವಣೆ ಆದರೆ, ಅಲ್ಲಿ ಗಲಾಟೆ ಆಗುತ್ತದೆ‌ ಎಂದು ಟಾಂಗ್ ನೀಡಿದರು.

ಯೋಗಾ ರಮೇಶ್ ಬಿಜೆಪಿ ಸೇರ್ಪಡೆ:

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಹಾಸನ ಮುಖಂಡ ಯೋಗಾ ರಮೇಶ್ ಇದೀಗ ಮತ್ತೆ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಗೋಪಾಲಯ್ಯ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಮಾಜಿ ಶಾಸಕ ಎ.ಮಂಜು ಬಿಜೆಪಿ ಪಕ್ಷದಿಂದ ದೂರವಾದ ಹಿನ್ನೆಲೆ, ಅವರ ಎದುರಾಳಿಯಾಗಿದ್ದ ಯೋಗಾ ರಮೇಶ್ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಎ ಮಂಜು ಬಿಜೆಪಿ ಸೇರಿದ್ದಾಗ, ಅಸಮಾಧಾನಗೊಂಡು ಯೋಗಾ ರಮೇಶ್ ಕಾಂಗ್ರೆಸ್ ಸೇರಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಿಂದ‌ ಬಿಜೆಪಿ ಟಿಕೆಟ್ ಆಕಾಂಕ್ಷಿ ಯಾಗಿದ್ದಾರೆ.

ಬಿಜೆಪಿ ಸೇರಿದ ನಂತರ ಮಾತನಾಡಿದ ಯೋಗ ರಮೇಶ್, ಹಾಸನದಲ್ಲಿ ಜೆಡಿಎಸ್ ಸಂಘಟನೆ ಮೀರಿ ಪಕ್ಷ ಬೆಳೆಸುವ ಕೆಲಸ ಮಾಡಿದೆವು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಗೆ ಪಕ್ಷ ನನಗೆ ಅವಕಾಶ ಮಾಡಿಕೊಡ್ತು. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಸಮಬಲ ಹೋರಾಟ ಮಾಡಿದ್ವಿ. ಎಂಪಿ ಚುನಾವಣೆ ವೇಳೆ ಎ.ಮಂಜು ಬಿಜೆಪಿಗೆ ಬಂದ್ರು. ಆವಾಗ ನಾನು ಕಾಂಗ್ರೆಸ್​​ಗೆ ಸೇರಿ ತಪ್ಪು ಮಾಡಿದೆ ಅನ್ನಿಸುತ್ತೆ. ಆವತ್ತು ನಾನು ಪಕ್ಷದಲ್ಲಿ ಉಳಿದಿದ್ರೆ, ನೂರಕ್ಕೆ ನೂರು ಎಂಪಿ ಸ್ಥಾನ ಗೆಲ್ಲಬಹುದಿತ್ತು ಎಂದರು.

ಇಷ್ಟು ದಿನ ಯಾವುದೇ ರಾಜೀ ಮಾಡಿಕೊಳ್ಳದೇ, ಕಾಂಗ್ರೆಸ್, ಜೆಡಿಎಸ್ ಎದುರಿಸಿದ್ದೇವೆ. ಕಾಂಗ್ರೆಸ್ ಸೇರಿದ್ದು, ನನ್ನ ಜೀವನದ ಕಹಿ ಘಟನೆ. ನಂತರ ನನಗೆ ಅರಿವು ಆಗಿ ಮತ್ತೆ ಬಿಜೆಪಿ ಸೇರುವ ನಿರ್ಧಾರ ಮಾಡಿದೆ. ಎಲ್ಲರ ಸಹಕಾರದಿಂದ ಪಕ್ಷ ಸೇರಿದ್ದೇನೆ, ಮುಂದೆ ಪಕ್ಷ ಬಲಪಡಿಸುವ ಕೆಲಸ ಮಾಡ್ತೇನೆ‌. ಮುಂದೆ ಎಂಎಲ್​​ಸಿ, ಜಿ.ಪಂ, ತಾ.ಪಂ. ಹಾಗೂ ವಿಧಾನಸಭೆ ಚುನಾವಣೆ ಬರುತ್ತದೆ. ಹೀಗಾಗಿ ಅಧ್ಯಕ್ಷರು ಸೇರಿದಂತೆ ಎಲ್ಲರು ಮಾರ್ಗದರ್ಶನದಲ್ಲಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ವಹಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ, ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details