ಬೆಂಗಳೂರು: ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಹೊಂದಾಣಿಕೆ ರಾಜಕಾರಣದ ಪಿತಾಮಹರಾದ ನೀವು ಕನ್ನಡಿಗರ ಹೆಸರನ್ನೇಕೆ ದುರ್ಬಳಕೆ ಮಾಡಿಕೊಳ್ಳುತ್ತೀರಿ?. ಕಿತ್ತು ಹಾಕುವುದಕ್ಕೆ ಬಿಜೆಪಿ ನಿಮ್ಮ ಒತ್ತುವರಿ ಜಮೀನಿನಲ್ಲಿ ಬೆಳೆದ ಕಳೆಯೂ ಅಲ್ಲ, ಅಪ್ಪ ಮಕ್ಕಳ ಪಕ್ಷವೂ ಅಲ್ಲ.ಭಾರತೀಯ ಜನತಾ ಪಾರ್ಟಿ ಜಗತ್ತಿನ ಅತ್ಯಂತ ದೊಡ್ಡ ರಾಜಕೀಯ ಪಕ್ಷ ಎನ್ನುವುದನ್ನು ನೆನಪಿಡಿ ಎಂದು ಹೆಚ್ಡಿಕೆಗೆ ಬಿಜೆಪಿ ಟಾಂಗ್ ನೀಡಿದೆ.
ರಾಜ್ಯದಲ್ಲಿ ಬಿಜೆಪಿ ಬೆಳೆದು ನಿಂತಿದ್ದು ಸಾಂದರ್ಭಿಕ ಶಿಶುವಿನ ರೀತಿಯಲ್ಲ. ದಶಕಗಳ ಹೋರಾಟದ ಇತಿಹಾಸ ನಮಗಿದೆ. ಮಾಜಿ ಲಕ್ಕಿ ಡಿಪ್ ಸಿಎಂ ಹೆಚ್ಡಿಕೆ ಅವರೇ ಕಿತ್ತು ಹಾಕುತ್ತೇನೆ. ಗುಡ್ಡೆ ಹಾಕುತ್ತೇನೆ ಎಂಬ ಹರಕು ಬಾಯಿಯ ಪದಗಳಿಗಾಗಿ ಮಂಡ್ಯದ ಕನ್ನಡಿಗರು ಪುತ್ರರತ್ನನಿಗೆ ನೀಡಿದ ಉಡುಗೊರೆ ನೆನಪಿಸಿಕೊಳ್ಳಿ. ಉಡಾಫೆ ಮಾತಾಡುವ ಮುನ್ನ ಎಚ್ಚರವಿರಲಿ ಎಂದು ಹೆಚ್ಡಿಕೆ ಕಾಲೆಳೆದಿದೆ.