ಬೆಂಗಳೂರು: ಕೋವಿಡ್ ಎಲ್ಲೆಡೆ ಹೆಚ್ಚಾಗುತ್ತಿದೆ. ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನದ ಕೊರತೆ ನಗರದಲ್ಲಿ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಆ್ಯಂಬುಲೆನ್ಸ್, ಶವಪೆಟ್ಟಿಗೆ ಹಾಗೂ ಔಷಧ ಸಿಂಪಡಿಸುವ ವಾಹನಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಎಸ್ ಮುನಿರಾಜು ದಾಸರಹಳ್ಳಿಯಲ್ಲಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ಮಾಜಿ ಸದಸ್ಯ ಎನ್ ಲೋಕೇಶ್, ಕಳೆದ ವರ್ಷ ಕೋವಿಡ್ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಬಿಎಸ್‌ವೈ ಕ್ಯಾಂಟೀನ್ ತೆರೆಯುವ ಮೂಲಕ ಸಾವಿರಾರು ಜನರಿಗೆ ಪ್ರತಿನಿತ್ಯ ಆಹಾರ ವಿತರಿಸಲಾಯಿತು ಎಂದರು.