ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಆತ್ಮ ನಿರ್ಭರ್ ಯೋಜನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ವಿಡಿಯೋ ಸಂವಾದದ ಮೂಲಕ ಮಾತುಕತೆ ನಡೆಸಿದರು.
ಆತ್ಮ ನಿರ್ಭರ್ ಯೋಜನೆ.. ಸಿಎಂ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿಡಿಯೋ ಸಂವಾದ.. - JP Nadda video conversation with CM
ಆತ್ಮ ನಿರ್ಭರ್ ನಿಧಿ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಯಾವ ರೀತಿ ಉತ್ತೇಜನ ನೀಡಬಹುದು ಎನ್ನುವ ಕುರಿತು ಸಂವಾದ ನಡೆಸಿದರು..
ವೀಡಿಯೋ ಸಂವಾದ
ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆದ ವಿಡಿಯೋ ಸಂವಾದದಲ್ಲಿ ಗೃಹ ಕಚೇರಿ ಕೃಷ್ಣಾದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾದರು. ಆತ್ಮ ನಿರ್ಭರ್ ನಿಧಿ ಬಳಕೆ ಕುರಿತು ಜೆ ಪಿ ನಡ್ಡಾ ಮಾಹಿತಿ ಪಡೆದುಕೊಂಡರು. ಆತ್ಮ ನಿರ್ಭರ್ ನಿಧಿ ಮೂಲಕ ಬೀದಿ ಬದಿ ವ್ಯಾಪಾರಿಗಳಿಗೆ ಯಾವ ರೀತಿ ಉತ್ತೇಜನ ನೀಡಬಹುದು ಎನ್ನುವ ಕುರಿತು ಸಂವಾದ ನಡೆಸಿದರು.
ಸಂವಾದ ಕೇವಲ ಆತ್ಮ ನಿರ್ಭರ್ ಯೋಜನೆ ಕುರಿತು ಚರ್ಚೆಗೆ ಸೀಮಿತವಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದರೂ ಪಕ್ಷ ಹಾಗೂ ರಾಜಕೀಯ ವಿಚಾರ ಸಂಬಂಧ ಯಾವುದೇ ಚರ್ಚೆ ನಡೆಯಲಿಲ್ಲ ಎನ್ನಲಾಗಿದೆ.