ಬೆಂಗಳೂರು:ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ಶಾಸಕರು ಯಲಹಂಕದ ಹೊನ್ನೆನಹಳ್ಳಿಯಲ್ಲಿರುವ ರಮಾಡ ರೆಸಾರ್ಟ್‌ಗೆ ಬಂದಿಳಿದಿದ್ದು, ಇನ್ನು ಮೂರು ದಿನಗಳ ಕಾಲ ಶಾಸಕರು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ರಮಾಡ ಹೋಟೆಲ್ಗೆ 82 ಶಾಸಕರ ದಂಡು:
ಬೆಂಗಳೂರು:ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ಶಾಸಕರು ಯಲಹಂಕದ ಹೊನ್ನೆನಹಳ್ಳಿಯಲ್ಲಿರುವ ರಮಾಡ ರೆಸಾರ್ಟ್‌ಗೆ ಬಂದಿಳಿದಿದ್ದು, ಇನ್ನು ಮೂರು ದಿನಗಳ ಕಾಲ ಶಾಸಕರು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.
ರಮಾಡ ಹೋಟೆಲ್ಗೆ 82 ಶಾಸಕರ ದಂಡು:
ವಿ. ಸೊಮಣ್ಣ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಸುರಪುರ ಶಾಸಕ ರಾಜುಗೌಡ ಕಾರಿನಲ್ಲಿ ಬಂದರು. ಸಂಜೆ 7ಗಂಟೆ ಸುಮಾರಿಗೆ ಆಗಮಿಸಿದ ಮೊದಲ ಬಸ್ನಲ್ಲಿ 25ಕ್ಕೂ ಹೆಚ್ಚು ಶಾಸಕರು ಆಗಮಿಸಿದರು. ರೆಸಾರ್ಟ್ ಒಳಗೆ ರಾಜಕೀಯ ಮುಖಂಡರನ್ನು ಹೊರತುಪಡಿಸಿ, ಯಾರೊಬ್ಬರಿಗೂ ಪ್ರವೇಶವಿಲ್ಲ. ಆಪ್ತರಿಗೂ ನೋ ಎಂಟ್ರಿ. ರಮಾಡ ರೆಸಾರ್ಟ್ ಸುತ್ತಮುತ್ತ ಬಿಜೆಪಿ ಮುಖಂಡರು ಲವಲವಿಕೆಯಿಂದ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಇನ್ನುಳಿದ ಬಿಜೆಪಿ ಶಾಸಕರನ್ನು ಸಾಯಿಲೀಲಾ ಹೋಟೆಲ್ನಲ್ಲಿ ಉಳಿಸಲಾಗಿದೆ.
ಬಿಜೆಪಿ ಮುಖಂಡರಿಗೆ ಹಾಗೂ ಶಾಸಕರುಗಳ ಆಪ್ತರಿಗೆ ಶಾಮಿಯಾನ, ಚೇರ್ ವ್ಯವಸ್ಥೆ ಮಾಡಲಾಗಿದೆ. ಇನ್ನು ರೆಸಾರ್ಟ್ ಸುತ್ತಮುತ್ತ ಎಸ್.ಆರ್.ವಿಶ್ವನಾಥ್ ಬೆಂಬಲಿಗರು ಹದ್ದಿನ ಕಣ್ಣಿಟ್ಟಿದ್ದು ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಿಕ್ಕಿರಿದು ಸೇರಿರುವ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ. ಇನ್ನು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜಿನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್ನಲ್ಲಿ ಬಿಜೆಪಿ ಹಿಡಿದಿಟ್ಟುಕೊಂಡಿದೆ.