ಕರ್ನಾಟಕ

karnataka

ETV Bharat / state

ಮಾಧ್ಯಮದಲ್ಲಿ ಹೀರೋ ಆಗಲು ಹೆಚ್‌ ವಿಶ್ವನಾಥ್​ ಹುಚ್ಚುಚ್ಚಾಗಿ ಮಾತಾಡ್ತಾರೆ : ರಾಜುಗೌಡ - Raju Gowda

ವಿಶ್ವನಾಥ್ ಅವರು ಪಕ್ಷಕ್ಕೆ ಬರುವಾಗ ಯಡಿಯೂರಪ್ಪ ಏನು ಯಂಗ್ ಆಗಿದ್ರಾ..? ಸಚಿವ ಸ್ಥಾನ ಸಿಗಲಿಲ್ಲ ಅಂತ ಈ ರೀತಿ ಹೇಳಿಕೆ ನೀಡಬಾರದು. ವಿಶ್ವನಾಥ್ ಹಿರಿಯರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಬುದ್ದಿ ಹೇಳುವಷ್ಟು ನಾನು ದೊಡ್ಡವನಲ್ಲ. ಅವರ ಅನುಭವದಷ್ಟು ನಮಗೆ ವಯಸ್ಸಾಗಿಲ್ಲ..

bjp-mla-raju-gowda-outrage-against-h-vishwanath
ವಿಶ್ವನಾಥ್ ವಿರುದ್ಧ ಬಿಜೆಪಿ ಶಾಸಕ ರಾಜುಗೌಡವಾಗ್ದಾಳಿ

By

Published : Jun 18, 2021, 5:20 PM IST

ಬೆಂಗಳೂರು : ಮಾಧ್ಯಮದ ಎದುರು ಹೀರೋ ಆಗಲು ಹುಚ್ಚುಚ್ಚು ಹೇಳಿಕೆ ನೀಡಬೇಡಿ ಎಂದು ಹೆಚ್ ವಿಶ್ವನಾಥ್​ ವಿರುದ್ಧ ಬಿಜೆಪಿ ಶಾಸಕ ರಾಜುಗೌಡ ಹರಿಹಾಯ್ದಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು,ಬಿಜೆಪಿಯನ್ನು ಕಟ್ಟಲು ಲಕ್ಷಾಂತರ ಜನರ ಬೆವರಿದೆ. ಪಕ್ಷಕ್ಕೆ ಡ್ಯಾಮೇಜ್ ನೀಡುವ ಹೇಳಿಕೆ ನೀಡಬೇಡಿ. ಯಡಿಯೂರಪ್ಪ ಅವರಿಗೆ ವಯಸ್ಸಾಯ್ತು ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರು ಪಕ್ಷಕ್ಕೆ ಬರುವಾಗ ಯಡಿಯೂರಪ್ಪ ಏನು ಯಂಗ್ ಆಗಿದ್ರಾ..? ಸಚಿವ ಸ್ಥಾನ ಸಿಗಲಿಲ್ಲ ಅಂತ ಈ ರೀತಿ ಹೇಳಿಕೆ ನೀಡಬಾರದು.

ವಿಶ್ವನಾಥ್ ಹಿರಿಯರು ಅರ್ಥ ಮಾಡಿಕೊಳ್ಳಬೇಕು. ಅವರಿಗೆ ಬುದ್ದಿ ಹೇಳುವಷ್ಟು ನಾನು ದೊಡ್ಡವನಲ್ಲ. ಅವರ ಅನುಭವದಷ್ಟು ನಮಗೆ ವಯಸ್ಸಾಗಿಲ್ಲ ಎಂದರು.

ಹೆಚ್‌ ವಿಶ್ವನಾಥ್ ಅವರೇ ಚುನಾವಣೆಗೆ ನಿಲ್ಲಬೇಡಿ, ಎಂಎಲ್‌ಸಿ ಮಾಡಿ ಸಚಿವರನ್ನಾಗಿ ಮಾಡುವುದಾಗಿ ಸಿಎಂ ಹೇಳಿದ್ದರು. ಅವರು ಸೋತ ಬಳಿಕ ನಾವೆಲ್ಲ ಮನವಿ ಮಾಡಿ ಎಂಎಲ್‌ಸಿ ಮಾಡಿಸಿದೆವು. ನಾನು ವಕ್ತಾರನಾಗಿ ಹೇಳುತ್ತಿದ್ದೇನೆ. ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ತಪ್ಪು ಮಾಹಿತಿ ಪಡೆದು ಮಾತನಾಡಬೇಡಿ. ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಅನುಮತಿ ನೀಡಿದೆ.

ಶಾಸಕ ರಾಜುಗೌಡ

ಇಂತಹ ಕೋವಿಡ್ ಸಂದರ್ಭದಲ್ಲಿ ಟೆಂಡರ್ ಕರೆದು ನೀರಾವರಿ ಯೋಜನೆ ನೀಡುತ್ತಿರುವುದಕ್ಕೆ ಖುಷಿಪಡಬೇಕು. ಮೈಸೂರಿನಲ್ಲಿ ಮಹಾರಾಜರು ಕೆಲಸ ಮಾಡಿದ್ದಾರೆ. ವಿಶ್ವನಾಥ್​ಗೆ ನೀರಿನ ಸಮಸ್ಯೆ ಬಗ್ಗೆ ಇರುವ ಕಷ್ಟ ಗೊತ್ತಿಲ್ಲ. ನಮ್ಮ ಭಾಗದಲ್ಲಿ ಬರವಿದೆ, ನೀರಿಗೆ ಸಮಸ್ಯೆ ಇದೆ. ಭದ್ರಾ ಮೇಲ್ಡಂಡೆ ಯೋಜನೆಗೆ 16,125 ಕೋಟಿ ಅನುಮೋದನೆ ನೀಡಿದ್ದಾರೆ. ನಮಗೆ ಹೇಳಿದ್ದು 21 ಸಾವಿರ ಕೋಟಿ. ಆರ್ಥಿಕ ಇಲಾಖೆಗೆ ಇಷ್ಟು ವೆಚ್ಚ ಖರ್ಚು ಮಾಡಿದ್ರೆ, ಉಳಿದ ಹಣ ನೀಡೋದಾಗಿ ಹೇಳಿದ್ದಾರೆ. ಕಿಕ್ ಬ್ಯಾಕ್ ಆರೋಪವಿದ್ದರೆ ಸಿಬಿಐಗೆ ಕೊಡಲಿ ಎಂದು ರಾಜುಗೌಡ ಸವಾಲು ಹಾಕಿದ್ದಾರೆ.

ಓದಿ: ಬೆಂಗಳೂರು ವೀಕೆಂಡ್ ಕರ್ಫ್ಯೂನಲ್ಲಿ ಯಾವುದೇ ಬದಲಾವಣೆ ಇಲ್ಲ

ABOUT THE AUTHOR

...view details