ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ: ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ - ವಿಧಾನಸಭೆಯಲ್ಲಿ ಬಿಜೆಪಿ ಶಾಸಕರ ತೀವ್ರ ಪ್ರತಿಭಟನೆ

ಸ್ಪೀಕರ್ ಪೀಠದತ್ತ ಪೇಪರ್​ ಎಸೆದು ಬಿಜೆಪಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಇಂದು ವಿಧಾನಸಭೆಯಲ್ಲಿ ನಡೆದಿದೆ.

ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ ಕೂಗಿದ ಸದಸ್ಯರು
ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ ಕೂಗಿದ ಸದಸ್ಯರು

By

Published : Jul 19, 2023, 4:20 PM IST

ಸ್ಪೀಕರ್ ಪೀಠದತ್ತ ಪೇಪರ್ ಎಸೆದು ಘೋಷಣೆ ಕೂಗಿದ ಸದಸ್ಯರು

ಬೆಂಗಳೂರು: ಪ್ರತಿಪಕ್ಷ ಬಿಜೆಪಿ ಶಾಸಕರ ಪ್ರತಿಭಟನೆ ತೀವ್ರಗೊಂಡು ವಿಧೇಯಕಗಳ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದತ್ತ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಧಾನಸಭೆಯಲ್ಲಿ ಇಂದು ನಡೆಯಿತು. ರಾಜಕೀಯ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಗಣ್ಯರ ಆತಿಥ್ಯಕ್ಕೆ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಇದರ ಮಧ್ಯೆ ಸ್ಪೀಕರ್ ಯು ಟಿ ಖಾದರ್, ಪ್ರತಿಪಕ್ಷದ ಶಾಸಕರಿಗೆ ಕಲಾಪದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪಟ್ಟುಬಿಡದ ಬಿಜೆಪಿ ಎಂಎಲ್​ಎಗಳು ಧರಣಿ ಮುಂದುವರಿಸಿ ದೋಖಾ ಸರ್ಕಾರ ಎಂದು ಘೋಷಣೆ ಕೂಗಿದರು. ಈ ಮಧ್ಯೆ ಸ್ಪೀಕರ್ ವಿಧೇಯಕಗಳನ್ನು ಕೈಗೆತ್ತಿಕೊಂಡರು.

ಐದು ವಿಧೇಯಕಗಳು ಸದನದಲ್ಲಿ ಅಂಗೀಕಾರಗೊಂಡ ನಂತರ ಸ್ಪೀಕರ್ ಯು ಟಿ ಖಾದರ್ ಅವರು ಊಟಕ್ಕೆ ಬಿಡದೆ ಸದನವನ್ನು ಮುಂದುವರಿಸಿದರು. ಬಜೆಟ್ ಮೇಲಿನ ಚರ್ಚೆ ಮುಂದುವರೆದು ಆಡಳಿತ ಪಕ್ಷದ ಶಾಸಕ ನರೇಂದ್ರ ಸ್ವಾಮಿ ಮಾತನಾಡುತ್ತಿದ್ದರು. ಈ ವೇಳೆ ಯು ಟಿ ಖಾದರ್ ಪೀಠದಿಂದ ತೆರಳಿದರು. ಆಗ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು ಪೀಠದಲ್ಲಿ ಕುಳಿತರು. ಇದರಿಂದ ಕೆರಳಿದ ಬಿಜೆಪಿ ಶಾಸಕರು, ವಿಧೇಯಕಗಳ ಪ್ರತಿಯನ್ನು ಹರಿದು ಸ್ಪೀಕರ್ ಪೀಠದ ಮುಂದೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಉಪಸಭಾಧ್ಯಕ್ಷರ ಮುಖದ ಮೇಲೆಯೇ ಹರಿದ ಪೇಪರ್ ಅನ್ನು ಎಸೆದಿದ್ದು, ತಕ್ಷಣ ಮಾರ್ಷಲ್​ಗಳು ಉಪ ಸಭಾಧ್ಯಕ್ಷರ ರಕ್ಷಣೆಗೆ ಧಾವಿಸಿ ಪೇಪರ್ ಎಸೆಯುವುದನ್ನು ತಡೆದರು. ಇದರಿಂದ ಸಿಟ್ಟಾದ ಉಪ ಸಭಾಧ್ಯಕ್ಷರು, ಬಿಜೆಪಿ ಶಾಸಕರನ್ನು ಹೊರಗೆ ಹಾಕಿ ಎಂದು ಮಾರ್ಷಲ್​ಗಳಿಗೆ ಸೂಚಿಸಿದರು. ಈ ವೇಳೆ ಕೂಗಾಟ ಹೆಚ್ಚಾಗಿದ್ದರಿಂದ ಸದನವನ್ನು 3 ಗಂಟೆಗೆ ಮುಂದೂಡಿದರು.

ಪೇಪರ್ ಎಸೆದ ಬಿಜೆಪಿ ಸದಸ್ಯರ ವಿರುದ್ಧ ಕಾಂಗ್ರೆಸ್ ಸದಸ್ಯರು ಆಕ್ಷೇಪ : ಪೇಪರ್ ಎಸೆದ ಬಿಜೆಪಿ ಸದಸ್ಯರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು, ಬಿಜೆಪಿ ಸದಸ್ಯರ ವಿರುದ್ಧ ಘೋಷಣೆ ಕೂಗಿದರು. ದಲಿತ ಡೆಪ್ಯುಟಿ ಸ್ಪೀಕರ್​ಗೆ ಬಿಜೆಪಿಯವರು ಅಪಮಾನ ಮಾಡಿದ್ದೀರಿ ಎಂದು ಸಚಿವ ಕೃಷ್ಣಬೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾರ್ಷಲ್ ಮೇಲೆ ಆಕ್ರೋಶ ಹೊರ ಹಾಕಿದ ಆಡಳಿತ ಪಕ್ಷದ ನಾಯಕರು, ವಿಧೇಯಕ ಹರಿದು ಹಾಕಿದ್ರು ಸುಮ್ಮನೆ ಇದ್ದೀರಾ ?. ಸ್ಪೀಕರ್ ಮುಖಕ್ಕೆ ಎಸೆಯುತ್ತಿದ್ದಾರೆ. ನೀವು ನೋಡಿಕೊಂಡು ಸುಮ್ಮನಿದ್ದೀರಾ? ಎಂದು ಆಕ್ರೋಶ ಹೊರಹಾಕಿದ್ರು.

ಮೊದಲು ನಿಮ್ಮನ್ನ ಸಸ್ಪೆಂಡ್ ಮಾಡಬೇಕು. ನೋಡಿಕೊಂಡು ಸುಮ್ಮನೆ ಇದ್ದೀರಾ? ಎಂದು ಮಾರ್ಷಲ್ ವಿರುದ್ಧ ಜೋರು ಧ್ವನಿಯಲ್ಲಿ ಸಚಿವರಾದ ಕೃಷ್ಣಭೈರೇಗೌಡ ಹಾಗೂ ಭೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು. ಸದನ ಮುಂದೂಡಿದ ಬಳಿಕ ವಿಧೇಯಕ ಪತ್ರ ಹರಿದು ಹಾಕಿರುವ ದೃಶ್ಯವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಮೊಬೈಲ್​​ನಲ್ಲಿ ವಿಡಿಯೋ ಮಾಡಿಕೊಂಡರು.

ಇದನ್ನೂ ಓದಿ:ಪ್ರತಿಪಕ್ಷಗಳ ಸಭೆಯಲ್ಲಿ IAS ಅಧಿಕಾರಿಗಳ ಬಳಕೆಗೆ ಆಕ್ಷೇಪ: ವಿಧಾನಸಭೆಯಲ್ಲಿ ಬಿಜೆಪಿ- ಕಾಂಗ್ರೆಸ್‌ ವಾಗ್ವಾದ

ABOUT THE AUTHOR

...view details