ಕರ್ನಾಟಕ

karnataka

ETV Bharat / state

ಸಿಎಂ ಪರಿಹಾರ ನಿಧಿಗೆ ಪೇಸಿಎಂ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಿ: ಪರಿಷತ್‌ನಲ್ಲಿ ಪ್ರಾಣೇಶ್ ಸಲಹೆ - Chief Minister Relief Fund

ಬೆಂಗಳೂರು ನಗರದ ಹಲವೆಡೆ ಪೇ ಸಿಎಂ ಎಂಬ ಅಭಿಯಾನದಡಿ ಪೋಸ್ಟರ್ ಅಂಟಿಸಿ ಸಿಎಂಗೆ ಅವಮಾನ ಮಾಡಿರುವುದನ್ನು ಬಿಜೆಪಿ ಸದಸ್ಯ ಪ್ರಾಣೇಶ್ ಖಂಡಿಸಿದ್ದಾರೆ. ಅಲ್ಲದೇ ಸಿಎಂ ಪರಿಹಾರ ನಿಧಿಗೆ ಡಿಜಿಟಲ್​​ ಮೂಲಕ ದೇಣಿಗೆ ಸಂಗ್ರಹಿಸಲು ಅವಕಾಶ ಮಾಡಿಕೊಡುವಂತೆ ಒತ್ತಾಯ ಮಾಡಿದ್ದಾರೆ.

ಬಿಜೆಪಿ ಸದಸ್ಯ ಪ್ರಾಣೇಶ್
ಬಿಜೆಪಿ ಸದಸ್ಯ ಪ್ರಾಣೇಶ್

By

Published : Sep 22, 2022, 2:24 PM IST

ಬೆಂಗಳೂರು: ಪೇ ಸಿಎಂ ಹೆಸರಿನಲ್ಲಿ ಕ್ಯೂಆರ್ ಕೋಡ್ ಇರುವ ಪೋಸ್ಟರ್ ಹಾಕಿ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡಿದ ಘಟನೆಯನ್ನೇ, ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಪೇ ಸಿಎಂ ಹೆಸರಿನಲ್ಲೇ ಆ್ಯಪ್ ಅಭಿವೃದ್ಧಿಪಡಿಸಿ, ಮುಖ್ಯಮಂತ್ರಿ ಪರಿಹಾರ ನಿಧಿಗೆ ಡಿಜಿಟಲ್ ಮೂಲಕ ದೇಣಿಗೆ ಸಂಗ್ರಹಕ್ಕೆ ಅವಕಾಶ ಮಾಡಿಕೊಡುವಂತೆ ಬಿಜೆಪಿ ಸದಸ್ಯ ಪ್ರಾಣೇಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವಿಧಾನಪರಿಷತ್ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರು ನಗರದ ಹಲವೆಡೆ ಪೇ ಸಿಎಂ ಎಂಬ ಅಭಿಯಾನದಡಿ ಪೋಸ್ಟರ್ ಅಂಟಿಸಿ ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿರುವುದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ಡಿಜಿಟಲ್ ಮಾಡುವ ಮುಖಾಂತರ PayCM Pay to Chief Minister Relief Fund (CMRF) ಎಂಬ ಹೆಸರಿನಲ್ಲಿ ಕಿಯೋನಿಕ್ಸ್‌ನಂತಹ ಸಂಸ್ಥೆ ವತಿಯಿಂದ ಒಂದು ಡಿಜಿಟಲ್ ಪೇಮೆಂಟ್ ಆ್ಯಪ್​ನನ್ನು ಸಿದ್ಧಪಡಿಸಬೇಕಾಗಿದೆ. ಇದರ ಮೂಲಕ ಹಣವನ್ನು ಹಾಕಲು ಅವಕಾಶ ಕಲ್ಪಿಸುವಂತೆ ಪ್ರಾಣೇಶ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಪರಿಷತ್ ನಲ್ಲಿ ಕುರುಕ್ಷೇತ್ರ ಪ್ರಸ್ತಾಪ, ಮೋದಿ ಶ್ರೀಕೃಷ್ಣನ ಅವತಾರವೆಂದ ಪ್ರಾಣೇಶ್..!

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸರ್ಕಾರ ನೊಂದ ಕುಟುಂಬಗಳಿಗೆ ನೆರವು ನೀಡುತ್ತಾ ಬಂದಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರಾಜ್ಯದ ಐಟಿ/ಬಿಟಿ ಕಂಪನಿಗಳಿಂದ, ಸಿ.ಎಸ್‌.ಆರ್. ಫಂಡ್‌ನಿಂದ ಮತ್ತು ದಾನಿಗಳಿಂದ ದೇಣಿಗೆ ಸಂದಾಯವಾಗುತ್ತದೆ. ಭವಿಷ್ಯದ ದೃಷಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿಯನ್ನು ಡಿಜಿಟಲ್ ವ್ಯಾಪ್ತಿಗೆ ತರಲು ಕ್ರಮ ಕೈಗೊಂಡಲ್ಲಿ, ಹೆಚ್ಚಿನ ದೇಣಿಗೆ ಸಂಗ್ರಹಿಸಲು ಅನುಕೂಲವಾಗುವಂತೆ ಪೇಸಿಎಂ ಎಂಬ ಡಿಜಿಟಲ್ ಆ್ಯಪ್​ ಅನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ABOUT THE AUTHOR

...view details