ಕರ್ನಾಟಕ

karnataka

ETV Bharat / state

ವೀಕೆಂಡ್ ಕರ್ಫ್ಯೂ ಎಫೆಕ್ಟ್ : ನಂದಿಬೆಟ್ಟದಲ್ಲಿ ಶನಿವಾರ ನಡೆಯಬೇಕಿದ್ದ ಬಿಜೆಪಿ ಚಿಂತನಾ ಸಭೆ ಸೋಮವಾರಕ್ಕೆ ಮುಂದೂಡಿಕೆ

ಶುಕ್ರವಾರ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವುದರಿಂದ ಎಲ್ಲಾ ರೀತಿಯ ಸಭೆ-ಸಮಾರಂಭಗಳಿಗೆ ನಿರ್ಬಂಧವಿರಲಿದೆ. ಹಾಗಾಗಿ, ಬಿಜೆಪಿಯ ಚಿಂತನ-ಮಂಥನ ಸಭೆಯನ್ನು ಶನಿವಾರದ ಬದಲು ಸೋಮವಾರದಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ..

bjp
ಬಿಜೆಪಿ

By

Published : Jan 5, 2022, 4:10 PM IST

ಬೆಂಗಳೂರು :ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದಲ್ಲಿ ಜನವರಿ 8 ಮತ್ತು 9ರಂದು ಎರಡು ದಿನಗಳ ಕಾಲ ನಡೆಯಬೇಕಿದ್ದ ರಾಜ್ಯ ಬಿಜೆಪಿಯ ಚಿಂತನ-ಮಂಥನ ಸಭೆಯನ್ನು ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಜನವರಿ 10 ಮತ್ತು 11ಕ್ಕೆ ಮುಂದೂಡಿಕೆ ಮಾಡಲಾಗಿದೆ.

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ರಾಜ್ಯಾದ್ಯಂತ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿರುವುದರಿಂದ ಎಲ್ಲಾ ರೀತಿಯ ಸಭೆ- ಸಮಾರಂಭಗಳಿಗೆ ನಿರ್ಬಂಧವಿರಲಿದೆ. ಹಾಗಾಗಿ, ಬಿಜೆಪಿಯ ಚಿಂತನ-ಮಂಥನ ಸಭೆಯನ್ನು ಶನಿವಾರದ ಬದಲು ಸೋಮವಾರದಿಂದ ನಡೆಸಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬೆಂಗಳೂರು ಹೊರ ವಲಯದ ನಂದಿಬೆಟ್ಟದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್ ಸಂತೋಷ್, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಪುಟ ಸಹೋದ್ಯೋಗಿಗಳು, ರಾಜ್ಯ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಉತ್ತರ ಭಾರತದ ರಾಜ್ಯಗಳತ್ತ ಚಿತ್ತ ಹರಿಸಿದ್ದ ವರಿಷ್ಠರು ಇದೀಗ ಕರ್ನಾಟಕದಲ್ಲಿ ಪಕ್ಷದ ಸಾಧನೆಗೆ ಅಸಮಾಧಾನಗೊಂಡಿದ್ದಾರೆ. ಕಡೆಗೂ ದಕ್ಷಿಣ ಭಾರತದ ಹೆಬ್ಬಾಗಿಲ ಕಡೆ ದೃಷ್ಟಿ ಹರಿಸಿದ್ದಾರೆ. ಎರಡು ದಿನಗಳ ಚಿಂತನ-ಮಂಥನ ನಡೆಸಿ ಪಕ್ಷ ಸಂಘಟನೆ, ಇತ್ತೀಚಿನ ಚುನಾವಣೆಗಳಲ್ಲಿ ಹಿನ್ನಡೆಗೆ ಕಾರಣ, ಸಂಪುಟದಲ್ಲಿ ಬದಲಾವಣೆ ಸೇರಿ ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.

ಓದಿ:2 ವಾರ ಟಫ್​ ರೂಲ್ಸ್​.. ಕೋವಿಡ್ ತಡೆ ಬಗ್ಗೆ ಜಾಗೃತಿ ಮೂಡಿಸಲು ಜನಪ್ರತಿನಿಧಿಗಳಿಗೆ ಸಿಎಂ ಸೂಚನೆ

ABOUT THE AUTHOR

...view details