ಕರ್ನಾಟಕ

karnataka

ETV Bharat / state

ನಾಡಿನ ಜನತೆಗೆ ಯುಗಾದಿ ಹಬ್ಬಕ್ಕೆ ಶುಭ ಕೋರಿದ ಬಿಜೆಪಿ ನಾಯಕರು - ಬಿಜೆಪಿ ನಾಯಕರು

ಇಂದು ಎಲ್ಲೆಡೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಿಜೆಪಿ ನಾಯಕರು ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ಬಿ ಎಸ್ ಯಡಿಯೂರಪ್ಪ

By

Published : Apr 6, 2019, 5:16 PM IST

ಬೆಂಗಳೂರು:ನಾಡಿನ ಸಮಸ್ತ ಜನತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಯುಗಾದಿ ಹಬ್ಬದ ಶುಭಾಷಯ ಕೋರಿದ್ದಾರೆ. ಟ್ವೀಟ್ ಮೂಲಕ ಶುಭ ಸಂದೇಶಗಳನ್ನು ಕಳುಹಿಸಿದ್ದಾರೆ.

ಯಡಿಯೂರಪ್ಪ ಟ್ವೀಟ್...

ಜೀವನದ ಪಯಣದಲ್ಲಿ ಯುಗಾದಿ ಹರುಷ ತರಲಿ. ನೋವುಗಳೆಲ್ಲ ತೊಲಗಲಿ, ಸಂತಸದ ದಿನಗಳು ಬರಲಿ. ಸದಾ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ತುಂಬಿದ ಬದುಕು ನಿಮ್ಮದಾಗಲಿ. ನಾಡಿನ ಎಲ್ಲ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು.

ಡಿ.ವಿ. ಸದಾನಂದಗೌಡ ಟ್ವೀಟ್...

ಶ್ರೀ ವಿಕಾರಿ ನಾಮ ಸಂವತ್ಸರ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ|ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಮ್||"

ಜಗದೀಶ್ ಶೆಟ್ಟರ್ ಟ್ವೀಟ್...

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬ ಹಾಗೂ ಹೊಸ ವರ್ಷದ ಹಾರ್ಧಿಕ ಶುಭಾಶಯಗಳು. ಈ ದಿನ ನಾವೆಲ್ಲರೂ ಬೇವು ಬೆಲ್ಲ ಸವಿಯುತ್ತ ಹೊಸ ವಿಚಾರಗಳೊಂದಿಗೆ ಹೊಸ ಯುಗಕ್ಕೆ ಕಾಲಿಡೋಣ.

ಸಿ.ಟಿ. ರವಿ ಟ್ವೀಟ್...

ಹೊಸತು ಎಂದರೆ ಸಂಭ್ರಮ, ಉಲ್ಲಾಸ, ಉತ್ಸಾಹ, ಉತ್ಸವ. ಈ ಯುಗಾದಿ ಎಲ್ಲ ಹೊಸತನಕ್ಕೆ ಮುನ್ನುಡಿಯಾಗಲಿ, ನಿಮ್ಮ ಬದುಕು ನವೀನವಾಗಲಿ, ನಲಿವು ನಿರಂತರವಾಗಲಿ. ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು ಎಂದು ಬಿಜೆಪಿ ನಾಯಕರು ಶುಭ ಕೋರಿದ್ದಾರೆ.

ABOUT THE AUTHOR

...view details