ಕರ್ನಾಟಕ

karnataka

ETV Bharat / state

ಸೋಂಕಿನ ಸುಳಿಗೆ ಕೇಂದ್ರ'ಗೃಹ' ಸಚಿವ.. ಶಾ ಶೀಘ್ರ ಚೇತರಿಕೆಗಾಗಿ ರಾಜ್ಯ ಬಿಜೆಪಿ ನಾಯಕರ ಹಾರೈಕೆ - ಅಮಿತ್ ಶಾಗೆ ಕೊರೊನಾ ಸುದ್ದಿ

ಡಿಸಿಎಂ ಡಾ.ಅಶ್ವತ್ಥ್‌ ನಾರಾಯಣ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆದಷ್ಟು ಬೇಗ ಸೋಂಕಿನಿಂದ ಗುಣಮುಖರಾಗಿ ಇಡೀ ದೇಶವೇ ನಿಮ್ನೊಂದಿಗಿದೆ ಎಂದು ಟ್ವೀಟ್ ಮಾಡಿದ್ದಾರೆ..

BJP leaders
ಬಿಜೆಪಿ ನಾಯಕ

By

Published : Aug 2, 2020, 7:53 PM IST

ಬೆಂಗಳೂರು :ಕೋವಿಡ್-19 ಸೋಂಕಿಗೆ ತುತ್ತಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀಘ್ರ ಗುಣಮುಖರಾಗಲಿ ಎಂದು ಸಿಎಂ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಹಾರೈಸಿದ್ದಾರೆ.

ಟ್ವೀಟ್​ ಮೂಲಕ ಹಾರೈಸಿದ ಸಿಎಂ ಬಿಎಸ್​ವೈ

ಗೃಹ ಸಚಿವ ಅಮಿತ್ ಶಾ ಸ್ವತಃ ಟ್ವೀಟ್ ಮೂಲಕ ಕೊರೊನಾ ಪಾಸಿಟಿವ್ ಬಂದಿರುವ ಮಾಹಿತಿ ಹಂಚಿಕೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ರಾಜ್ಯ ಸಚಿವ ಸಂಪುಟ ಸದಸ್ಯರು ರೀ ಟ್ವೀಟ್ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಟ್ವೀಟ್​ ಮೂಲಕ ಹಾರೈಸಿದ ಶೋಭಾ ಕರಂದ್ಲಾಜೆ

ಡಿಸಿಎಂ ಡಾ.ಅಶ್ವತ್ಥ್‌ ನಾರಾಯಣ್, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಆದಷ್ಟು ಬೇಗ ಸೋಂಕಿನಿಂದ ಗುಣಮುಖರಾಗಿ ಇಡೀ ದೇಶವೇ ನಿಮ್ನೊಂದಿಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ನೀವು ಹೋರಾಟಗಾರರು, ಸದಾ ನಮ್ಮನ್ನು ಮುನ್ನಡೆಸಿದವರು, ಕೊರೊನಾ ವಿರುದ್ಧದ ಯುದ್ಧವನ್ನು ನೀವು ಗೆದ್ದು ಇಡೀ ದೇಶಕ್ಕೆ ಮಾದರಿಯಾಗುತ್ತೀರಿ ಎನ್ನುವ ವಿಶ್ವಾಸ ನನಗಿದೆ. ಇಡೀ ರಾಷ್ಟ್ರದ ಪ್ರಾರ್ಥನೆ ನಿಮ್ಮೊಂದಿಗಿದೆ, ಶೀಘ್ರ ಗುಣಮುಖರಾಗಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟಿಸಿದ್ದಾರೆ.

ABOUT THE AUTHOR

...view details