ಕರ್ನಾಟಕ

karnataka

ETV Bharat / state

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಟ್ವೀಟ್ ವಾರ್! - undefined

ವಿಶ್ವಾಸಮತ ಯಾಚನೆ ಮಾಡಲು ಮೈತ್ರಿ ಸರ್ಕಾರ  ವಿಳಂಬ ಮಾಡುತ್ತಿದೆ ಎಂದು ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬಿಜೆಪಿ ನಾಯಕರು ಟ್ವೀಟರ್​​ ವಾರ್ ನಡೆಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಟ್ವೀಟ್ ವಾರ್!

By

Published : Jul 20, 2019, 4:46 PM IST

ಬೆಂಗಳೂರು:ಮೈತ್ರಿ ಸರ್ಕಾರ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ವಿಳಂಬವಾಗುವಂತೆ ಮಾಡುತ್ತಿದೆ ಎಂದು ಟೀಕಿಸಿ ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಬಿಜೆಪಿ ನಾಯಕರು ಟ್ವೀಟ್​ ವಾರ್ ನಡೆಸಿದ್ದಾರೆ.

ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಟ್ವೀಟ್ ವಾರ್!

ವಿಧಾನಸಭಾ ಚುನಾವಣೆಯಲ್ಲಿ-120 ಕ್ಷೇತ್ರಗಳಲ್ಲಿ ಠೇವಣಿ ಇಲ್ಲ, ಲೋಕಸಭಾ ಚುನಾವಣೆಯಲ್ಲಿ -1 ಸೀಟ್, ಹೀಗೆ ಜನರು ತಿರಸ್ಕರಿಸಿರುವ ಪಕ್ಷದಿಂದ ಬಂದ ಮುಖ್ಯಮಂತ್ರಿಗಳು, ಅಪವಿತ್ರ ಮೈತ್ರಿಯಿಂದ ಸರ್ಕಾರ ರಚನೆ ಮಾಡಿ ಈಗ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಿಸಿದ ಬಿಜೆಪಿಗೆ ಸದನದಲ್ಲಿ ದಿನವಿಡೀ ಪ್ರಜಾಪ್ರಭುತ್ವದ ಪಾಠ ಮಾಡುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಟ್ವೀಟ್ ಮೂಲಕ ಜೆಡಿಎಸ್​ ಹಾಗೂ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಸ್ವಾಮಿ ಮುಖ್ಯಮಂತ್ರಿಗಳೇ, ರಾಜಧರ್ಮ ಪಾಲನೆ ಮಾಡಿ-ಈಶ್ವರಪ್ಪ
ಮೈತ್ರಿ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಟ್ವೀಟ್ ವಾರ್!

ಸ್ವಾಮಿ ಮುಖ್ಯಮಂತ್ರಿಗಳೇ, ಜಡ್ಜ್​ಮೆಂಟ್ ಡೇ ಅಷ್ಟೇ ಅಲ್ಲ ಕರ್ನಾಟಕದ ಪ್ರತಿಯೊಬ್ಬರು ನಿಮಗೆ ಡೇ ಅಂಡ್ ನೈಟ್ ಹೇಳುತ್ತಿರುವುದು ಸತ್ಯ, ಧರ್ಮ ಇರುವ ರಾಜಧರ್ಮ ಪಾಲನೆ ಮಾಡಿ ಅಂತ. ನೀವು ನೋಡಿದರೆ ರೈತರ ಸಾಲ ಮನ್ನಾ ಮಾಡದೇ ಅನ್ನದಾತರ ಪಾಲಿನ "ಯಮಧರ್ಮ" ನ ತರಹ ಆಡುತ್ತಿದ್ದೀರಾ ಎಂದು ಮತ್ತೊಂದು ಟ್ವೀಟ್ ಮಾಡಿ ಸಿಎಂ ಟ್ವೀಟ್ ಗೆ ತಿರುಗೇಟು ನೀಡಿದ್ದಾರೆ.

ಅಷ್ಟಕ್ಕೆ ನಿಲ್ಲದೆ, ನಿಮಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದ್ದಿದ್ದರೆ ಈ ಅನೈತಿಕ ಸರ್ಕಾರವನ್ನು ರಚಿಸುತ್ತಿರಲಿಲ್ಲ. ಮಾಡಬಾರದ ಅನಾಚಾರಗಳನ್ನು ಮಾಡಿ ಈಗ ಮನೆಯ ಮುಂದೆ ಬೃಂದಾವನ ಕಟ್ಟಲು ಹೊರಟರೆ ನಿಮ್ಮನ್ನು ನಂಬಲು ರಾಜ್ಯದ ಜನತೆ ಏನು ಮೂರ್ಖರೆ ಎಂದು ಮಾಜಿ ಸಚಿವ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details