ಕರ್ನಾಟಕ

karnataka

ETV Bharat / state

ಬಿಎಸ್​​​​​ವೈ ಶೀಘ್ರ ಗುಣಮುಖರಾಗಲಿ: ಬಿಜೆಪಿ ನಾಯಕರಿಂದ ಟ್ವೀಟ್ - corona latest news

ಸಿಎಂಗೆ ಕೊರೊನಾ ಅಂಟಿರುವ ಹಿನ್ನೆಲೆ ನಾಡಿನ ಎಲ್ಲರೂ ಕೂಡ ಸಿಎಂ ಬೇಗ ಗುಣಮುಖರಾಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ಅದೇ ರೀತಿ ರಾಜ್ಯ ಬಿಜೆಪಿ ನಾಯಕರು ಕೂಡ ಸಿಎಂ ಗುಣಮುಖರಾಗಿ ಬೇಗ ಕೆಲಸಕ್ಕೆ ಮರಳಲಿ ಎಂದು ಟ್ವೀಟ್​ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

BJP leaders tweet for get well soon of CM from corona
ಬಿಜೆಪಿ ನಾಯಕರಿಂದ ಟ್ವೀಟ್

By

Published : Aug 3, 2020, 12:13 PM IST

ಬೆಂಗಳೂರು: ಕೊರೊನಾ ಸೋಂಕಿಗೆ ಒಳಗಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲಿ ಎಂದು ಸಚಿವರು, ಬಿಜೆಪಿ ನಾಯಕರು ಹಾರೈಸಿ ಟ್ವೀಟ್ ಮಾಡಿದ್ದಾರೆ.

ನಾಡಿನ ಜನಪ್ರಿಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಟ್ವೀಟ್ ಮಾಡಿದ್ದಾರೆ.

ನಮ್ಮ ಜನನಾಯಕ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ನಾಡಿನ ಮಹಾಜನತೆಯ ಆಶೀರ್ವಾದ ನಿಮ್ಮ ಮೇಲಿದೆ. ಗೆಟ್​ ವೆಲ್ ಸೂನ್ ಸರ್ ಎಂದು ಡಿಸಿಎಂ ಅಶ್ವತ್ಥ ನಾರಾಯಣ ಟ್ವೀಟ್ ಮಾಡಿದ್ದಾರೆ.

ಆದಷ್ಟು ಶೀಘ್ರವಾಗಿ, ಸಂಪೂರ್ಣವಾಗಿ ಗುಣಮುಖರಾಗಿ ಬನ್ನಿ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ‌. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳೂ ಶ್ರಮಿಸುತ್ತಿರುವ ಮುಖ್ಯಮಂತ್ರಿಯವರು ಶೀಘ್ರ ಗುಣಮುಖರಾಗಿ ಜನಸೇವೆಗೆ ಲಭ್ಯರಾಗುವಂತಾಗಲಿ ಎಂದು ಹಾರೈಸುತ್ತೇನೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು, ಕೋಟಾ ಶೀನಿವಾಸ ಪೂಜಾರಿ, ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದಾರೆ.

ಆದಷ್ಟು ಬೇಗ ಗುಣಮುಖರಾಗಿ ಚೇತರಿಸಿಕೊಂಡು ಮತ್ತೆ ಕಾರ್ಯೋನ್ಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ ಕೋವಿಡ್-19 ದೃಢಪಟ್ಟಿರುವುದು ದುಃಖದ ವಿಚಾರ. ರೈತಮಿತ್ರ - ಬಡವರ ಬಂಧು ಯಡಿಯೂರಪ್ಪ ಅವರು ಅತೀ ಶೀಘ್ರದಲ್ಲಿ ಗುಣಮುಖರಾಗಿ ನಿರಂತರ ಜನಸೇವೆಗೆ ಹಿಂತಿರುಗಲಿ ಎಂದು ಉಡುಪಿ ಶ್ರೀ ಕೃಷ್ಣ ಹಾಗು ಮುಖ್ಯಪ್ರಾಣನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details