ಕರ್ನಾಟಕ

karnataka

ETV Bharat / state

ಪಾಕ್‌ ಪರ ಘೋಷಣೆ: ಟ್ವೀಟ್ ಮೂಲಕ ಆಕ್ರೋಶ ಹೊರಹಾಕುತ್ತಿರುವ ಬಿಜೆಪಿ ನಾಯಕರು! - ಡಿಸಿಎಂ ಅಶ್ವತ್ಥ್ ನಾರಾಯಣ್ ಟ್ವಿಟರ್

ಸಿಎಎ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳ ವಿರುದ್ಧ ಬಿಜೆಪಿ ನಾಯಕರು ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

bjp-leaders-outraged-by-tweet-for-pro-pak-slogan-by-amulya
ಪಾಕ್‌ ಪರ ಘೋಷಣೆ: ಟ್ವೀಟ್ ಮೂಲಕ ಆಕ್ರೋಶ ಹೊರಹಾಕುತ್ತಿರುವ ಬಿಜೆಪಿ ನಾಯಕರು

By

Published : Feb 21, 2020, 12:46 PM IST

ಬೆಂಗಳೂರು: ಸಿಎಎ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಬಿಜೆಪಿ ನಾಯಕರು ಟ್ವೀಟ್ ಮಾಡಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಟ್ವೀಟ್ ಮೂಲಕ ಪಾಕ್ ಪರ ಘೋಷಣೆಯನ್ನು ಖಂಡಿಸಿದ್ದಾರೆ. ಸಿಎಎ ವಿರೋಧಿ ರ್ಯಾಲಿಗಳು ಭಾರತ ವಿರೋಧಿ ಪ್ರತಿಭಟನೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಆ ಯುವತಿ ಒಂದು ಮುಖವಾಣಿಯಷ್ಟೆ ಎಂದು ಟೀಕಿಸಿದ್ದಾರೆ. ಪರದೆ ಹಿಂದೆ ಇದರ ಅಸಲಿ ಮುಖ ಇದೆ. ದೇಶವಿರೋಧಿ ಕೃತ್ಯಗಳಲ್ಲಿ ತೊಡಗುವ ವ್ಯವಸ್ಥೆಯನ್ನು ಭೇದಿಸುವ ಸಮಯ ಬಂದಿದೆ ಎಂದು ತಿಳಿಸಿದ್ದಾರೆ.

ಆಘಾತಕಾರಿ ವಿಚಾರ: ನಮ್ಮ ಬೆಂಗಳೂರಿನಲ್ಲಿ ಒಂದು ವಿದ್ಯಾರ್ಥಿನಿಯಿಂದ ಸದಾ ಭಾರತದ ಅಧಃಪತನವನ್ನು ಬಯಸುವ ರಾಷ್ಟ್ರವಾದ ಪಾಕಿಸ್ತಾನಕ್ಕೆ ಜೈಕಾರ ಬಂದಿದೆ ಎಂಬುದು ಒಂದು ಆಘಾತಕಾರಿ ವಿಚಾರ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಟ್ವಿಟರ್ ನಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಅಂತಹ ದೇಶದ್ರೋಹಿ ಹೇಳಿಕೆಗಳನ್ನು ಖಂಡಿಸುತ್ತೇನೆ. ಈ ರೀತಿ ಬೆಳವಣಿಗೆಗಳನ್ನು ಯಾರೂ ಬೆಂಬಲಿಸಬಾರದು. ಸಮಾಜದ ಹಿತ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದಿದ್ದಾರೆ.

ಪಾಕ್ ನರಕಕ್ಕೆ ಹೋಗಲಿ:ಭಾರತೀಯರಿಗೆ ಯಾವ ರೀತಿಯಲ್ಲೂ ತೊಂದರೆಯೇ ಆಗದ ಸಿಎಎ ವಿರುದ್ಧ ಪ್ರತಿಭಟನೆ ಮಾಡುವುದು ಮೂರ್ಖತನ, ಆ ಪ್ರತಿಭಟನೆಯ ಹೆಸರಿನಲ್ಲಿ ದೇಶ ವಿರೋಧಿಯಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವುದು ಮಾತೃ ದ್ರೋಹ. ಇಂತಹ ಮಾತೃ ವಂಚಕರು ಭಾರತವೆಂಬ ಸ್ವರ್ಗವನ್ನು ಬಿಟ್ಟು ಪಾಕಿಸ್ತಾನವೆಂಬ ನರಕಕ್ಕೆ ಹೋಗಲಿ ಎಂದು ಸಚಿವ ಸಿ.ಟಿ.ರವಿ ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ. ಫ್ರೀಡಂ ಪಾರ್ಕ್ ನಲ್ಲಿ ದೇಶವಿರೋಧಿ ಪ್ರತಿಭಟನೆಕಾರರ ಮೇಲೆ ಪೊಲೀಸರು ತಕ್ಷಣವೇ ಕ್ರಮ ವಹಿಸಲಿ ಎಂದು ಆಗ್ರಹಿಸಿದ್ದಾರೆ.

ಹುಚ್ಚುತನದ ಪರಮಾವಧಿ:ಸಿಎಎ ವಿರೋಧಿ ಪ್ರತಿಭಟನೆ ಎಂಬ ಹುಚ್ಚುತನವನ್ನು ನೋಡಿ. ಎಡಪಂಥೀಯರು ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗುತ್ತಿದ್ದಾರೆ ಎಂದು ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.ದುಷ್ಕರ್ಮಿಗಳು ಈ ಪ್ರತಿಭಟನೆಯನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇನ್ನು ಸಾಕು ಎಂದು ಹೇಳುವ ಸಮಯ ಬಂದಿದೆ ಎಂದು ಕರೆ ನೀಡಿದ್ದಾರೆ.

ABOUT THE AUTHOR

...view details