ಕರ್ನಾಟಕ

karnataka

ETV Bharat / state

ಕುಮಾರಸ್ವಾಮಿ ವರ್ಚಸ್ಸು ತಗ್ಗಿಸೋ ಪ್ರಯತ್ನ ಮಾಡೋದಾದ್ರೆ ಮಾಡಲಿ: ಮಾಜಿ ಪ್ರಧಾನಿ ಗುಟುರು - H D Devegowda

ಫೋನ್ ಟ್ಯಾಪಿಂಗ್ ವಿಚಾರವಾಗಿ ಮಾತನಾಡಿದ ಅವರು, ಕುಮಾರಸ್ವಾಮಿ ವರ್ಚಸ್ಸನ್ನು ತಗ್ಗಿಸಲು ಪ್ರಕರಣದ ತನಿಖೆ ಮಾಡಲಾಗುತ್ತಿದೆ ಎಂದು ಸಿಡಿಮಿಡಿಗೊಂಡರು.

ಕುಮಾರಸ್ವಾಮಿ ವರ್ಚಸ್ಸು ತಗ್ಗಿಸೋ ಪ್ರಯತ್ನ ಮಾಡೋದಾದ್ರೆ ಮಾಡಲಿ: ಮಾಜಿ ಪಿಎಂ ಆಕ್ರೋಶ

By

Published : Aug 20, 2019, 8:42 PM IST

ಬೆಂಗಳೂರು:ಫೋನ್ ವಿಚಾರವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ ಅವರ ವರ್ಚಸ್ಸನ್ನು ತಗ್ಗಿಸಲು ಪ್ರಕರಣದ ತನಿಖೆಯನ್ನು ಸಿಬಿಐ ಮೂಲಕ ಮಾಡಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಕಚೇರಿ ಜೆ.ಪಿ ಭವನದಲ್ಲಿ ನಡೆದ ಮಂಡ್ಯ ಜಿಲ್ಲಾ ಮುಖಂಡರ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪ್ರತ್ರಿಕ್ರಿಯೆ

ಇದೇ ವೇಳೆ ನೆರೆ ಪರಿಹಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಕೇಂದ್ರದಿಂದ ಅನುದಾನ ತರುತ್ತಾರೆ ಬಿಡಿ ಎಂದು ಪರೋಕ್ಷ ಟೀಕೆ ಮಾಡಿದ್ರು.

ನೂತನ ಸಂಪುಟದ ಬಗ್ಗೆ ಮಾತನಾಡಿದ ಗೌಡರು, ಕ್ಯಾಬಿನೆಟ್ ರಚನೆ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆ ಬಗ್ಗೆ ಬೇರೆ ಯಾರನ್ನಾದರೂ ಕೇಳಿಕೊಳ್ಳಿ ಎಂದು ಕಟುವಾಗಿಯೇ ನುಡಿದರು.

ABOUT THE AUTHOR

...view details