ಬೆಂಗಳೂರು:ರಮಡ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ಶಾಸಕರು ಇಂದು ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಕಡೆಗೆ ಮೂರು ಬಸ್ಗಳಲ್ಲಿ ಹೊರಟಿದ್ದಾರೆ.
ಯಡಿಯೂರಪ್ಪ ಪಡೆ ವಿಧಾನಸೌಧದ ಕಡೆ: 3 ಬಸ್ಗಳ ಮೂಲಕ ಶಕ್ತಿ ಸೌಧಕ್ಕೆ - Kannada news
ಸಿಎಂ ವಿಶ್ವಾಸ ಮತ ಯಾಚನೆ ಹಿನ್ನೆಲೆ ಬಿಜೆಪಿ ಶಾಸಕರು ಸದನದಲ್ಲಿ ಹೇಗೆ ವರ್ತಿಸಬೇಕು. ಎಂತಹ ಸಂದರ್ಭ ಎದುರಾದರೂ ತಾಳ್ಮೆ ಕಳೆದುಕೊಳ್ಳಬಾರದು ಎಂದು ಫರ್ಮಾನು ಹೊರಡಿಸಿ ಶಾಸಕರನ್ನು ಮಾನಸಿಕವಾಗಿ ಸಜ್ಜು ಗೊಳಿಸಿಕೊಂಡು ಸದನಕ್ಕೆ ಕರೆತರಲಾಗುತ್ತಿದೆ ಎನ್ನಲಾಗಿದೆ.

ವಿಧಾನಸೌಧದ ಕಡೆ ಹೊರಟ ಬಿಜೆಪಿ ಶಾಸಕರು
ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್, ಸೇರಿದಂತೆ 105 ಶಾಸಕರು ಒಟ್ಟಾಗಿ ಹೊರಟಿದ್ದು. ಮೊದಲ ಬಸ್ ಬಿಎಸ್ವೈ ನೇತೃತ್ವದಲ್ಲಿ, ಎರಡನೆ ಬಸ್ ಶಾಸಕ ವಿ.ಸೋಮಣ್ಣ ನೇತೃತ್ವದಲ್ಲಿ, ಇನ್ನು, ಮೂರನೇ ಬಸ್ ನೇತೃತ್ವವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಹಿಸಿಕೊಂಡಿದ್ದಾರೆ.