ಕರ್ನಾಟಕ

karnataka

ETV Bharat / state

ರಂಜಾನ್ ಪ್ರಯುಕ್ತ ಬಿಜೆಪಿ ಮುಖಂಡನಿಂದ ದಿನಸಿ ಕಿಟ್​​ ವಿತರಣೆ - BJP leader Babu Selvam Ration kit distribution

ರಂಜಾನ್ ಹಬ್ಬದ ಪ್ರಯುಕ್ತ ಬಿಜೆಪಿ ಮುಖಂಡ ಬಾಬು ಸೆಲ್ವಂ ಎಂಬುವರು ಮುಸ್ಲಿಂ ಸಮುದಾಯದ ಸಾವಿರಾರು ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಸೋಪು, ಸಕ್ಕರೆ ಒಳಗೊಂಡ ದಿನಸಿ ಕಿಟ್ ಹಾಗೂ ತರಕಾರಿ ಕಿಟ್​ಗಳನ್ನು ನೀಡಿದರು.

Ration kit distribution
ಬಿಜೆಪಿ ಮುಖಂಡ ಬಾಬು ಸೆಲ್ವಂ ಅವರಿಂದ ರೇಷನ್ ಕಿಟ್ ವಿತರಣೆ

By

Published : May 20, 2020, 5:11 PM IST

ಕೆಆರ್​ಪುರ:ಕ್ಷೇತ್ರದಲ್ಲಿ ಲಾಕ್​ಡೌನ್ ಸಮಸ್ಯೆಗೆ ಬಡವರು ಸಿಲುಕಬಾರದೆಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ಸೂಚನೆ ನೀಡಿದ ಬಳಿಕ ಕ್ಷೇತ್ರದ ಪ್ರತಿಯೊಂದು ವಾರ್ಡ್​ನಲ್ಲಿ ಬಿಜೆಪಿ ಮುಖಂಡರು ಬಡವರಿಗೆ ದಿನಸಿ ಕಿಟ್, ತರಕಾರಿ, ಹಾಲು, ಬ್ರೆಡ್ ನೀಡುವ ಕೆಲಸ ಮಾಡಿದ್ದಾರೆ.

ಬಿಜೆಪಿ ಮುಖಂಡ ಬಾಬು ಸೆಲ್ವಂರಿಂದ ದಿನಸಿ ಕಿಟ್ ವಿತರಣೆ

ಅದೇ ರೀತಿ ವಿಜಿನಾಪುರ ಬಿಜೆಪಿ ಮುಖಂಡ ಬಾಬು ಸೆಲ್ವಂ ಸಚಿವರ ಸೂಚನೆ ಮೇರೆಗೆ ಲಾಕ್​ಡೌನ್ ಆದಾಗಿನಿಂದಲೂ ವಿಜಿನಾಪುರ ವಾರ್ಡ್​ನ ಬಡವರಿಗೆ ಸುಮಾರು 40 ದಿನಕ್ಕೂ ಹೆಚ್ಚು ಕಾಲ ಬೆಳಗ್ಗೆ ಹಾಲು ಹಾಗೂ ಬ್ರೆಡ್, ನಂತರ ತಿಂಡಿ, ಮಧ್ಯಾಹ್ನ ಊಟ ನೀಡುತ್ತಾ ಬಂದಿದ್ದಾರೆ. ಅಲ್ಲದೆ ಇಂದು ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಸಾವಿರಾರು ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಉಪ್ಪು, ಸೋಪು, ಸಕ್ಕರೆ ಒಳಗೊಂಡ ದಿನಸಿ ಕಿಟ್ ಹಾಗೂ ತರಕಾರಿ ಕಿಟ್​ಗಳನ್ನು ನೀಡಿದರು.

ಬಡವರ ಪರ ಕೆಲಸ ಮಾಡುತ್ತಿರುವ ಬಾಬು ಸೆಲ್ವಂ ಕಾರ್ಯಕ್ಕೆ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಜಿನಾಪುರ ವಾರ್ಡ್​ನಲ್ಲಿ ಲಾಕ್​ಡೌನ್ ಸಮಸ್ಯೆಗೆ ಸಿಲುಕಿದ ಬಡವರಿಗೆ ಬಾಬು ಸೆಲ್ವಂ ಅವಶ್ಯಕ ಸಾಮಾಗ್ರಿಗಳನ್ನು ನೀಡುವ ಮೂಲಕ ಬಡವರ ಪರ ನಿಂತಿದ್ದಾರೆ ಎಂದು ಅಭಿನಂದಿಸಿದರು.

ABOUT THE AUTHOR

...view details