ಯಲಹಂಕ:ಬ್ಯಾಟರಾಯನಪುರದ ಬಿಜೆಪಿ ಮುಖಂಡ ಎ ರವಿ ಅವರ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದರು. ಯಲಹಂಕ ಏರ್ಪೋರ್ಟ್ ರಸ್ತೆ ಹುಣಸಮಾರನಹಳ್ಳಿ ಬಳಿ ಎ ರವಿ ಹುಟ್ಟುಹಬ್ಬದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 25 ಸಾವಿರ ಜನರಿಗೆ ಬಾಡೂಟವನ್ನು ಜನರಿಗೆ ಆಯೋಜನೆ ಮಾಡಲಾಗಿತ್ತು.
ಚುನಾವಣೆ ಹತ್ತಿರ ಇರುವ ಹಿನ್ನೆಲೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಈಗಾಗಲೇ ಮೂವರು ಆಂಕಾಕ್ಷಿಗಳ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೆಯುತ್ತಿದೆ. ಬಿಬಿಎಂಪಿ ಸದಸ್ಯ ಮುನಿಂದ್ರ, ತಮ್ಮೇಶ್ ಗೌಡ, ಎ ರವಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಹಿನ್ನೆಲೆ ಹಿಂದೆ ಕಡಿಮೆ ಅಂತರದಲ್ಲಿ ಸೋತಿದ್ದ ರವಿ ಈ ಬಾರಿಯೂ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಸಚಿವ ಆರ್ ಅಶೋಕ್ ಹಾಗೂ ಡಾ ಕೆ ಸುಧಾಕರ್ ಸೇರಿದಂತೆ ಹಲವು ಮಠಗಳ ಸ್ವಾಮಿಗಳು ಭಾಗಿಯಾಗಿದ್ದರು.