ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಮುಖಂಡ ಎ. ಮಂಜು ; ಕಾಂಗ್ರೆಸ್ ಸೇರಲು ಕಸರತ್ತು ?

ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎ. ಮಂಜು ಪುತ್ರ ಮಂಥರ್ ಗೌಡ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದರು. ಎ. ಮಂಜು ಪುತ್ರನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಪಕ್ಷ ವಿರೋಧಿ ಚಟುವಟಿಕೆಯ ಅನುಮಾನಾಸ್ಪದ ನಡೆ ಹಿನ್ನೆಲೆ ಎ. ಮಂಜು ಅವರನ್ನು ಪಕ್ಷದ‌ ಎಲ್ಲಾ ಹುದ್ದೆಗಳಿಂದ ಬಿಜೆಪಿ ಮುಕ್ತಿಗೊಳಿಸಿತ್ತು..

bjp-leader-a-manju-meets-siddaramaiah
ಸಿದ್ದರಾಮಯ್ಯ ಭೇಟಿಯಾದ ಬಿಜೆಪಿ ಮುಖಂಡ ಎ. ಮಂಜು

By

Published : Dec 31, 2021, 10:12 PM IST

ಬೆಂಗಳೂರು :ಬಿಜೆಪಿ ಮುಖಂಡ ಮಾಜಿ ಸಚಿವ ಎ. ಮಂಜು ಮರಳಿ ಕಾಂಗ್ರೆಸ್​ಗೆ ಬರಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅವರಿಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಅರಕಲಗೂಡು ಮಾಜಿ ಶಾಸಕರಾಗಿದ್ದ ಎ. ಮಂಜು ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದೇ ಚುನಾವಣೆಗೆ ಹಾಸನದಿಂದ ಸ್ಪರ್ಧಿಸಿ ಸೋತಿದ್ದರು.

ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಿಂದ ಮತ್ತೆ ಕಾಂಗ್ರೆಸ್​ಗೆ ತೆರಳಲು ಮುಂದಾಗಿದ್ದಾರೆ. ಇಂದು ಬೆಂಗಳೂರು ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಭೇಟಿ ವೇಳೆ ಕಾಂಗ್ರೆಸ್ ಅಧಿಕೃತ ಸೇರ್ಪಡೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಕಳೆದ ಬಾರಿ ಭೇಟಿಗೆ ಬಂದಾಗ ಸಿದ್ದರಾಮಯ್ಯ ಭೇಟಿಗೆ ನಿರಾಕರಿಸಿದರು. ಆದರೆ, ಇದೀಗ ಮಂಜು ಜೊತೆ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಕಾಂಗ್ರೆಸ್ ಸೇರ್ಪಡೆಗೆ ಕಸರತ್ತು ನಡೆಸುತ್ತಿದ್ದಾರೆ.

ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಎ. ಮಂಜು ಪುತ್ರ ಮಂಥರ್ ಗೌಡ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದರು. ಎ. ಮಂಜು ಪುತ್ರನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಪಕ್ಷ ವಿರೋಧಿ ಚಟುವಟಿಕೆಯ ಅನುಮಾನಾಸ್ಪದ ನಡೆ ಹಿನ್ನೆಲೆ ಎ. ಮಂಜು ಅವರನ್ನು ಪಕ್ಷದ‌ ಎಲ್ಲಾ ಹುದ್ದೆಗಳಿಂದ ಬಿಜೆಪಿ ಮುಕ್ತಿಗೊಳಿಸಿತ್ತು.

ಓದಿ:ಗಂಗಾವತಿಯಲ್ಲಿ ಹನುಮ ಜಯಂತಿ ವಿಶೇಷ : ಒಂದು ತಿಂಗಳಲ್ಲಿ 18 ಲಕ್ಷ ರೂ. ಸಂಗ್ರಹ..

ABOUT THE AUTHOR

...view details