ಕರ್ನಾಟಕ

karnataka

ETV Bharat / state

ಮುಂದೊಂದು ದಿನ ಡಿಕೆಶಿ ಮುಕ್ತ ಕಾಂಗ್ರೆಸ್​ ಆಗಲಿದೆ: ನಳಿನ್ ಕುಮಾರ್ ಕಟೀಲ್ ವ್ಯಂಗ್ಯ - BJP Karnataka state President Nalin Kumar Kateel news

ಬಿಜೆಪಿ ಮುಕ್ತ ಅಲ್ಲ, ಅದು ಡಿಕೆಶಿ ಮುಕ್ತ ಕಾಂಗ್ರೆಸ್ ಆಗಲಿದೆ. ಕಾಂಗ್ರೆಸಿನವರೇ ಸೇರಿ ಡಿ.ಕೆ.ಶಿವಕುಮಾರ್​ ಅವರನ್ನು ಮುಕ್ತರಾಗಿಸುತ್ತಾರೆ ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಣಕವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

By

Published : Jul 4, 2020, 11:50 PM IST

Updated : Jul 5, 2020, 12:57 PM IST

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ಆರಂಭಿಕ ಶೂರತ್ವಕ್ಕೆ ಸೀಮಿತವಷ್ಟೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದರು.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಡಿಕೆಶಿ ಪದಗ್ರಹಣ ಕಾರ್ಯಕ್ರಮ ಮಾಡಿ ಆರಂಭದ ಶೂರತ್ವ ಮೆರೆದಿದ್ದಾರೆ. ಕಾಂಗ್ರೆಸ್ ಪಕ್ಷ ವ್ಯಕ್ತಿಯಾಧರಿತ ಪಕ್ಷವಾಗಿದೆ. ನಮ್ಮದು ಕೇಡರ್ ಬೇಸ್ ಪಾರ್ಟಿ. ಮುಳಗುವ ಹಡುಗನ್ನು ಡಿಕೆಶಿಯವರು ಹತ್ತಿದ್ದಾರೆ ಎಂದರು.

ಬಿಜೆಪಿ ಮುಕ್ತ ಅಲ್ಲ, ಅದು ಡಿಕೆಶಿ ಮುಕ್ತ ಕಾಂಗ್ರೆಸ್ ಆಗಲಿದೆ. ಕಾಂಗ್ರೆಸಿನ ಎಲ್ಲರೂ ಸೇರಿ ಡಿ.ಕೆ. ಶಿವಕುಮಾರ್​ ಅವರನ್ನು ಮುಕ್ತರಾಗಿಸುತ್ತಾರೆ ನೋಡಿ ಎಂದು ಅಣಕವಾಡಿದರು.

ನಮ್ಮ ಸಚಿವರಲ್ಲಿ ಯಾವುದೇ ಗೊಂದಲ ಇಲ್ಲ. ಸಿಎಂ ನೇತೃತ್ವದಲ್ಲಿ ಕೊರೊನಾ ನಿರ್ವಹಣೆ ಮಾಡಲಾಗುತ್ತಿದೆ. ಆರ್.ಅಶೋಕ್ ಅವರು ಬೆಂಗಳೂರು ಕೇಂದ್ರೀತವಾಗಿ ಕೊರೊನಾ ನಿಯಂತ್ರಣ ಮಾಡುತ್ತಿದ್ದಾರೆ. ಹೀಗಾಗಿ ಹೊಂದಾಣಿಕೆ ಕೊರತೆಯ ಪ್ರಶ್ನೆ ಉದ್ಭವವಾಗಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

Last Updated : Jul 5, 2020, 12:57 PM IST

ABOUT THE AUTHOR

...view details