ಕರ್ನಾಟಕ

karnataka

ETV Bharat / state

ಬೇಗ್​​ಗೆ ಮುಳುವಾದ ಐಎಂಎ: 17 ಅನರ್ಹ ಶಾಸಕರ ಪೈಕಿ 16 ಮಂದಿ ನಾಳೆ ಬಿಜೆಪಿಗೆ - ಬಿಜೆಪಿ ಸೇರಲಿರುವ ಅನರ್ಹ ಶಾಸಕರ ಪಟ್ಟಿ ಬಿಡುಗಡೆ

17 ಅನರ್ಹ ಶಾಸಕರಲ್ಲಿ ಯಾರೆಲ್ಲಾ ನಾಳೆ ಬಿಜೆಪಿ ಸೇರಲಿದ್ದಾರೆ ಎಂಬ ಅಧಿಕೃತ ಪಟ್ಟಿಯನ್ನು ಬಿಜೆಪಿ ಪ್ರಕಟಗೊಳಿಸಿದೆ.

ಬಿಜೆಪಿ ಸೇರಲಿರುವ 16 ಅನರ್ಹ ಶಾಸಕರ ಪಟ್ಟಿ ಪ್ರಕಟ

By

Published : Nov 13, 2019, 11:11 PM IST

ಬೆಂಗಳೂರು: 17 ಅನರ್ಹ ಶಾಸಕರಲ್ಲಿ ಯಾರೆಲ್ಲಾ ನಾಳೆ ಬಿಜೆಪಿ ಸೇರಲಿದ್ದಾರೆ ಎಂಬ ಪಟ್ಟಿಯನ್ನು ಕಡೆಗೂ ಬಿಜೆಪಿ ಬಿಡುಗಡೆ ಮಾಡಿದೆ. ಮೊದಲು ಹಲವು ಮಾಜಿ ಶಾಸಕರು ಎಂದು ನಂತರ ಕೆಲ ಅನರ್ಹ ಶಾಸಕರು ಎಂದು ಪ್ರಕಟಣೆ ಹೊರಡಿಸಿದ್ದ ಬಿಜೆಪಿ 16 ಅನರ್ಹ ಶಾಸಕರ ಪಟ್ಟಿ ಬಿಡುಗಡೆಗೊಳಿಸಿದೆ.

ಬಿಜೆಪಿ ಸೇರಲಿರುವ 16 ಅನರ್ಹ ಶಾಸಕರ ಪಟ್ಟಿ ಪ್ರಕಟ

ನಾಳೆ ಬಿಜೆಪಿ ಸೇರುವ ಅನರ್ಹ‌ ಶಾಸಕರ ಪಟ್ಟಿ:

1. ಹೆಚ್ ವಿಶ್ವನಾಥ
2. ಮಹೇಶ್ ಕುಮಟಳ್ಳಿ
3. ರಮೇಶ್​​ ಜಾರಕಿಹೊಳಿ
4. ಶಂಕರ್
5. ಆನಂದ್ ಸಿಂಗ್
6. ಪ್ರತಾಪ್‌ ಗೌಡ ಪಾಟೀಲ್
7. ಬಿ.ಸಿ ಪಾಟೀಲ್
8. ಶಿವರಾಂ ಹೆಬ್ಬಾರ್
9. ನಾರಾಯಣಗೌಡ
10. ಸೋಮಶೇಖರ್
11. ಗೋಪಾಲಯ್ಯ
12. ಬೈರತಿ ಬಸವರಾಜ್
13. ಮುನಿರತ್ನ
14, ಎಂ.ಟಿ.ಬಿ ನಾಗರಾಜ್
15. ಸುಧಾಕರ್
16. ಶ್ರೀಮಂತ್ ಪಾಟೀಲ್

ಈ 16 ಅನರ್ಹ ಶಾಸಕರು ನಾಳೆ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ರಾಜ್ಯ ಉಸ್ತುವಾರಿ ಮುರುಳಿಧರ್ ರಾವ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಪಟ್ಟಿಯಲ್ಲಿ ರೋಷನ್ ಬೇಗ್ ಹೆಸರಲಿಲ್ಲ:

ಬಿಜೆಪಿ ಸೇರುವ ಅನರ್ಹ ಶಾಸಕರ ಪಟ್ಟಿಯಿಂದ ರೋಷನ್ ಬೇಗ್ ಹೆಸರನ್ನು ಕೈ ಬಿಡಲಾಗಿದೆ. ಐಎಂಎ ಹಗರಣ ಕಾರಣದಿಂದಾಗಿ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಬೇಗ್ ಬಿಜೆಪಿ ಸೇರ್ಪಡೆ ತಡೆ ಹಿಡಿಯಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ. ಪುತ್ರ ಹಾಗು ಬೆಂಬಲಿಗರೊಂದಿಗೆ ನಾಳೆ ಬಿಜೆಪಿ ಸೇರಲು ರೋಷನ್ ಬೇಗ್ ಸಿದ್ಧವಾಗಿರುವುದಾಗಿ ಹೇಳಿದ್ದರೂ ಬಿಜೆಪಿ ನಾಯಕರು ಸದ್ಯಕ್ಕೆ ಬೇಗ್ ಸೇರ್ಪಡೆಗೆ ಬ್ರೇಕ್ ಹಾಕಿದ್ದಾರೆ.

ABOUT THE AUTHOR

...view details