ಕರ್ನಾಟಕ

karnataka

ETV Bharat / state

ಉಮೇಶ್‌ ಕತ್ತಿ ನಿಧನ: ಬಿಜೆಪಿ ಜನೋತ್ಸವ ಮತ್ತೆ ಮುಂದೂಡಿಕೆ ಸಾಧ್ಯತೆ - ರಾಜ್ಯದಲ್ಲಿ ಶೋಕಾಚರಣೆ

ಸಚಿವ ಉಮೇಶ್ ಕತ್ತಿ ಅವರ ನಿಧನ ಹಿನ್ನೆಲೆಯಲ್ಲಿ ಈ ಬಾರಿ ನಡೆಯುವ ಬಿಜೆಪಿ ಜನೋತ್ಸವ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

bjp Janostava Postpone  Minister Umesh Katti passed away  bjp Janostava news  ಸಚಿವ ಉಮೇಶ್ ಕತ್ತಿ ನಿಧನ  ಜನೋತ್ಸವ ಮತ್ತೆ ಮುಂದೂಡಿಕೆ  ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ  ರಾಜ್ಯದಲ್ಲಿ ಶೋಕಾಚರಣೆ  ಜನೋತ್ಸವ ಕಾರ್ಯಕ್ರಮವನ್ನ ದೊಡ್ಡಬಳ್ಳಾಪುರದಲ್ಲಿ ಅಯೋಜನೆ
ಸಚಿವ ಉಮೇಶ್ ಕತ್ತಿ ನಿಧನ

By

Published : Sep 7, 2022, 11:39 AM IST

ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಂ.):ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮ ಮತ್ತೆ ಮುಂದೂಡಿಕೆಯಾಗುವ ಸಾಧ್ಯತೆ ಗೋಚರಿಸುತ್ತಿದೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ 3 ವರ್ಷ ಮತ್ತು ಸಿಎಂ ಆಗಿ ಬಸವರಾಜ ಬೊಮ್ಮಾಯಿ ಒಂದು ವರ್ಷ ಪೂರೈಸಿದ್ದು ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಲು ಜನೋತ್ಸವವನ್ನು ನಾಳೆ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿದೆ.

ಕಳೆದ ರಾತ್ರಿ ಸಚಿವ ಉಮೇಶ್ ಕತ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಚಿವರ ಸಾವಿನಿಂದ ರಾಜ್ಯದಲ್ಲಿ ಒಂದು ದಿನದ ಶೋಕಾಚರಣೆಯನ್ನು ಸರ್ಕಾರ ಘೋಷಣೆ ಮಾಡಿದೆ. ಈ ಪರಿಸ್ಥಿತಿಯಲ್ಲಿ ಜನೋತ್ಸವ ಮಾಡುತ್ತಾ ಎಂಬ ಪ್ರಶ್ನೆ ಜನರದ್ದು.

ಇನ್ನೊಂದೆಡೆ, ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಮನೆ ಕಳೆದುಕೊಂಡು ಜನರು ನಿರಾಶ್ರಿತರಾಗಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರಕ್ಕೆ ಜನೋತ್ಸವ ಕಾರ್ಯಕ್ರಮ ಬೇಕಾ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ.

ಇದನ್ನೂ ಓದಿ:ಮಳೆ ಆತಂಕ.. ಬಿಜೆಪಿ ಸಾಧನಾ ಸಮಾವೇಶ ಮುಂದೂಡಲ್ಲ: ಬಿಜೆಪಿ ಸ್ಪಷ್ಟನೆ

ABOUT THE AUTHOR

...view details