ಬೆಂಗಳೂರು: ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಿಸುವ ಬದಲು ಬಿಜೆಪಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್ ಬಗ್ಗೆ ಬಿಜೆಪಿ ಆಕ್ರೋಶ... ದಿನೇಶ್ ಗುಂಡೂರಾವ್ ಟೀಕೆ - dinesh gundurao news
ಅತೃಪ್ತ ಶಾಸಕರ ವಿಚಾರದಲ್ಲಿ ಸ್ಪೀಕರ್ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಿಸುವ ಬದಲು ಬಿಜೆಪಿ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಶಾಸಕ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಬಿಜೆಪಿ ನಾಯಕರ ಹೇಳಿಕೆ ಗಮನಿಸಿದ್ದೇನೆ. ಸ್ಪೀಕರ್ ಆದೇಶದ ಬಗ್ಗೆ ಅವರು ಮಾತನಾಡಿದ್ದಾರೆ. ಅವರಿಗೆ ಯಾಕೆ ಅನರ್ಹಗೊಂಡ ಶಾಸಕರ ಬಗ್ಗೆ ಕಾಳಜಿ ಎಂದರು. ಕಾನೂನು ಪ್ರಕಾರವಾಗಿ ಸ್ಪೀಕರ್ ಕಾರ್ಯನಿರ್ವಹಣೆ ಮಾಡಿದ್ದಾರೆ, ಅದನ್ನ ಸ್ವಾಗತ ಮಾಡುವ ಬದಲು ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದರು.
ಸ್ಪೀಕರ್ ಆದೇಶದ ಬಗ್ಗೆ ಟೀಕೆ ಮಾಡಿದ್ದು ಸರಿಯಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಈ ಹಿಂದೆ ಬಿಜೆಪಿಯ ಸ್ಪೀಕರ್ ಮಾಡಿದ್ದು ಸರಿ ಅಂತ ನಾವು ಒಪ್ಪಿಕೊಳ್ಳಬೇಕಾ..? ಅಧಿಕಾರದ ದಾಹ ಬಿಜೆಪಿಗೆ ಇದೆ. ಸ್ಪೀಕರ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ. ವಿಪ್ ಉಲ್ಲಂಘನೆ ಮಾಡಿದ್ರೆ ಸುಮ್ಮನಿರುವುದಕ್ಕೆ ಸಾಧ್ಯವಿಲ್ಲ ,ಹೀಗಾಗಿ ಸ್ಪೀಕರ್ ತೀರ್ಮಾನ ಸರಿಯಾಗಿದೆ ಎಂದು ಸಮರ್ಥಿಸಿಕೊಂಡರು.