ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಆಡಳಿತರೂಢ ಬಿಜೆಪಿ ನಡುವಿನ ಟ್ವೀಟ್ ಸಮರ ಮುಂದುವರಿದಿದೆ.
ಮಾನ್ಯ ಸಿದ್ದರಾಮಯ್ಯನವರೇ, ಹಲವು ಭಾಗ್ಯಗಳನ್ನು ನೀಡಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನೀವು, ಕನ್ನಡಿಗರಿಗೆ ಸಾಲಭಾಗ್ಯ ನೀಡಿದ್ದರ ಬಗ್ಗೆ ಹೇಳಿಕೊಳ್ಳುವುದಿಲ್ಲವೇಕೆ ಎಂದು ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.
ರಾಜ್ಯ ಬಿಜೆಪಿ ಮುಖ್ಯಮಂತ್ರಿಯಾದ ಕೇವಲ 22 ತಿಂಗಳಲ್ಲಿಯೇ 39,161 ಕೋಟಿ ರೂ. ಸಾಲ ಮಾಡಿ ದುಂದು ವೆಚ್ಚ ಮಾಡಿದ್ದೇ ನಿಮ್ಮ ಸಾಧನೆ ಅಲ್ಲವೇ ಸಿದ್ದರಾಮಯ್ಯನವರೇ? ಉತ್ತರ ಕೊಡಿ ಸಿದ್ದರಾಮಯ್ಯ ಎಂಬ ಹ್ಯಾಷ್ ಟ್ಯಾಗ್ನೊಂದಿಗೆ ಪ್ರಶ್ನಿಸಲಾಗಿದೆ.
ಸಿದ್ದರಾಮಯ್ಯನವರೇ ಸಮಾಜವಾದಿ ಎಂದು ಬಿಂಬಿಸಿಕೊಂಡು ಅಧಿಕಾರಕ್ಕೇರಿದಿರಿ. ಅಧಿಕಾರಕ್ಕೇರಿದವರೇ ಹ್ಯೂಬ್ಲೆಟ್ ವಾಚ್ ಕಟ್ಟಿಕೊಂಡಿರಿದ್ದಾರೆ. ಸೋಪ್ ಬಾಕ್ಸ್ ಮತ್ತು ರೂಮ್ ಫ್ರೆಶ್‍ನರ್ 1 ಲಕ್ಷಕ್ಕೂ ಅಧಿಕ ಖರ್ಚು, ಪೇಪರ್ ಕಪ್‍ಗಳಿಗೆ 1,87,950 ರೂ. ಖರ್ಚು ಮಾಡಿದ್ದೀರಾ. ಆದರೆ, ರಾಜ್ಯದ ಜನತೆಯ ತಲೆಮೇಲೆ ಮಾತ್ರ ಸಾಲಭಾಗ್ಯ ಅಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದೆ.