ಕರ್ನಾಟಕ

karnataka

ETV Bharat / state

ನಂದಿ ಬೆಟ್ಟದಲ್ಲಿ ಜ. 8, 9ರಂದು ಬಿಜೆಪಿ ಹೈಕಮಾಂಡ್ ಜೊತೆ ಸಚಿವರ ಸಭೆ: ಸಂಪುಟ ಪುನಾರಚನೆ ಚರ್ಚೆ?

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ಪುನರ್ ರಚನೆ ಸುಳಿವು ಬೆನ್ನಲ್ಲೇ ಸಚಿವರ ಜೊತೆಗಿನ ಸಭೆ ಕುತೂಹಲ ಮೂಡಿಸಿದೆ.

ಬಿಜೆಪಿ ಹೈಕಮಾಂಡ್ ಜೊತೆ ಸಚಿವರ ಸಭೆ

By

Published : Jan 1, 2022, 1:04 PM IST

ಬೆಂಗಳೂರು:ಹೊಸ ವರ್ಷದಲ್ಲಿ ರಾಜ್ಯ ಸಚಿವರ ಜೊತೆ ಬಿಜೆಪಿ ಹೈಕಮಾಂಡ್ ಸಭೆ ನಡೆಸಲಿದ್ದು, ಕುತೂಹಲ ಮೂಡಿಸಿದೆ. ನಂದಿಬೆಟ್ಟದಲ್ಲಿ ಸಚಿವರ ಜೊತೆ ಹೈಕಮಾಂಡ್ ಸಭೆ ನಡೆಸಲಿದೆ.

ಜನವರಿ 8 ಮತ್ತು 9ರಂದು ಎರಡು ದಿನಗಳ ಕಾಲ ಸಚಿವರ ಜೊತೆಗೆ ಸಭೆ, ಬಿಜೆಪಿ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿ ಸಭೆ ನಡೆಯಲಿದೆ. ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರ ಕಾರ್ಯವೈಖರಿ ಹಾಗೂ ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಯಲಿದೆ.

ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಚಿವ ಸಂಪುಟ ಪುನಾರಚನೆ ಸುಳಿವು ಬೆನ್ನಲ್ಲೇ ಸಚಿವರ ಜೊತೆ ಸಭೆ ಕುತೂಹಲ ಮೂಡಿಸಿದೆ. ಚುನಾವಣೆ ವರ್ಷ ಬರುತ್ತಿರುವ ಕಾರಣ ಸಂಪುಟ ಪುನಾರಚನೆಯ ಕೂಗು ಬಲವಾಗಿ ಕೇಳಿ ಬರುತ್ತಿದೆ. ಹಿರಿಯರನ್ನು ಕೈ ಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕುವ ಸಂಬಂಧ ಒತ್ತಡ ಹೆಚ್ಚಾಗಿದೆ. ನಂದಿ ಬೆಟ್ಟದಲ್ಲಿ ನಡೆಯಲಿರುವ ಸಭೆಯಲ್ಲಿ ಈ ಎಲ್ಲ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್​​ಗೆ ಅತೃಪ್ತಿ ಇದ್ದು, ಈ ಸಂದರ್ಭ ನಡೆಯುತ್ತಿರುವ ಹೈಕಮಾಂಡ್ ಜೊತೆಗಿನ ಸಭೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ಪರಿಷತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಇದರ‌ ಜೊತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ, ಲಸಿಕೆ ಕಾರ್ಯಕ್ರಮದ ಬಗ್ಗೆ ಮೋದಿ ಸರ್ಕಾರದ ಸಾಧನೆಯನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಇದನ್ನೂ ಓದಿ:ಬೆಳಗಾವಿ ಕಮಿಷನರ್ ತ್ಯಾಗರಾಜನ್​​ ತಲೆದಂಡ.. ನೂತನ ಆಯುಕ್ತರಾಗಿ ಡಾ.ಬೋರಲಿಂಗಯ್ಯ

ABOUT THE AUTHOR

...view details