ಬೆಂಗಳೂರು : ರಾಜ್ಯದಲ್ಲಿ ಸಂಭವಿಸುತ್ತಿರುವ ಹತ್ಯೆಗಳ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಮಾಡುತ್ತಿರುವ ಒತ್ತಡಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಬೆಳಗಾವಿ ಜೈನ ಮುನಿಗಳಾದ ಕಾಮಕುಮಾರ ನಂದಿ ಮಹಾರಾಜರ ಹಾಗೂ ತಿ.ನರಸೀಪುರದ ಯುವ ಬಿಗ್ರೇಡ್ ಸಂಚಾಲಕ ವೇಣುಗೋಪಾಲ್ ನಾಯಕ ಹತ್ಯೆ ಸಂಬಂಧ ಈಗಾಗಲೇ ನಮ್ಮ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣವಾದ ಅಂಶವನ್ನು ಭೇದಿಸಿದ್ದಾರೆ. ಹೀಗಿರುವಾಗ ಸಿಬಿಐಗೆ ವಹಿಸುವಂತೆ ಬಿಜೆಪಿಯವರ ಒತ್ತಾಯವೇಕೆ? ಬಿಜೆಪಿಯವರಿಗೆ ಪೊಲೀಸರ ಸಾಮರ್ಥ್ಯದ ಮೇಲೆ ನಂಬಿಕೆಯಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೊಂದಡೆ ಕಾಂಗ್ರೆಸ್ ಪಕ್ಷ ಸಹ ಟ್ವೀಟ್ ಮಾಡಿ ಬಿಜೆಪಿಯ ನಿಲುವನ್ನು ಖಂಡಿಸಿದ್ದು, ಜೈನಮುನಿ ಹತ್ಯೆಯ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ಹಣದ ವ್ಯವಹಾರ. ವೇಣುಗೋಪಾಲ್ ಹತ್ಯೆಯ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ವೈಯುಕ್ತಿಕ ದ್ವೇಷ. ಬೆಂಗಳೂರಿನ ಜೋಡಿ ಕೊಲೆ ಪ್ರಕರಣ - 24 ಗಂಟೆಯೊಳಗೆ ಆರೋಪಿಗಳ ಬಂಧನ. ಕೊಲೆಗೆ ಕಾರಣ - ವೈಯುಕ್ತಿಕ ದ್ವೇಷ. ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿದ ನಮ್ಮ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಹೆಣ ಕಂಡೊಡನೆ ಹಾರಿ ಬರುವ ಬಿಜೆಪಿಗರಿಗೆ ತಮ್ಮ ಆಡಳಿತದಲ್ಲಿ ನಡೆದ ಹತ್ಯೆಗಳೆಷ್ಟು? ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ನೀಡಿದ್ದೇಕೆ ಎಂದು ಹೇಳುವರೇ? ಎಂದು ಪ್ರಶ್ನಿಸಿದೆ.