ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಆತ್ಮವಂಚಕ ಸಿದ್ದರಾಮಯ್ಯ ಎಂದು ಹ್ಯಾಷ್ ಟ್ಯಾಗ್ ಮಾಡಿ ಬಿಜೆಪಿ ಗೇಲಿ ಮಾಡಿದೆ.
'ಆತ್ಮವಂಚಕ ಸಿದ್ದರಾಮಯ್ಯ' .. ಬಿಜೆಪಿ ಗೇಲಿ - bjp hashtag
ಸಂಕಷ್ಟದ ಸಮಯದಲ್ಲಿ ಲೆಕ್ಕ ಕೇಳುವ ಮೂಲಕ ಸರ್ಕಾರದ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವುದೇಕೆ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿರುವ ಬಿಜೆಪಿ ಆತ್ಮವಂಚಕ ಸಿದ್ದರಾಮಯ್ಯ ಎಂದು ಹ್ಯಾಷ್ ಟ್ಯಾಗ್ ಮಾಡಿದೆ.
ಕೋವಿಡ್ ಎದುರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಲಸಿಕೆ ಉತ್ಪಾದನೆ & ವೈದ್ಯಕೀಯ ಮೂಲ ಸೌಕರ್ಯಕ್ಕೆ 35 ಸಾವಿರ ಕೋಟಿ ಮೀಸಲಿಟ್ಟಾಗ ವಿರೋಧಿಸಿದ್ದು ಯಾರು? ರಾಹುಲ್ ಗಾಂಧಿ, ಪ್ರಶಾಂತ್ ಭೂಷಣ್, ಸೀತಾರಾಂ ಯೆಚೂರಿ ಹಾಗೂ ನಿಮ್ಮಂಥ ಸಮಾನ ಮನಸ್ಕರು ಕೇಂದ್ರದ ಈ ನಡೆಯನ್ನು ವಿರೋಧಿಸಿದ್ದೇಕೆ? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಮೋದಿ ಸರ್ಕಾರ ಹಣ ಮೀಸಲಿಟ್ಟಾಗ ಕೋವಿಡ್ ನಿಯಂತ್ರಣಕ್ಕೆ ಬಂದ ಮೇಲೆ ಏಕೆ ಇಷ್ಟು ಹಣ ಮೀಸಲಿಟ್ಟಿರಿ ಎಂದು ಪ್ರಶ್ನಿಸಿದ್ದು ನಿಮ್ಮದೇ ಪಟಾಲಂ ಅಲ್ಲವೇ? ಈಗ ಸಂಕಷ್ಟದ ಸಮಯದಲ್ಲಿ ಲೆಕ್ಕ ಕೇಳುವ ಮೂಲಕ ಸರ್ಕಾರದ ಕಾರ್ಯಾಚರಣೆಗೆ ಅಡ್ಡಿಪಡಿಸುತ್ತಿರುವುದೇಕೆ? ಎಂದು ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಕಿಡಿಕಾರಿದೆ.