ಬೆಂಗಳೂರು : ಪ್ರಸಕ್ತ ವಿಧಾನಸಭೆ ಉಪಚುನಾವಣೆಯನ್ನು ರಾಜ್ಯ ಸರ್ಕಾರ ತನ್ನ ಹಣ, ತೋಳ್ಬಲದಿಂದ ಗೆದ್ದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದು, "ಆರ್.ಆರ್. ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಗೆಲುವು ಪ್ರಜಾಪ್ರಭುತ್ವದ ಗೆಲುವಲ್ಲ, ಭ್ರಷ್ಟಾಚಾರದ ಹಣದ ಗೆಲುವಾಗಿದೆ. ಬಿಜೆಪಿ ಪಕ್ಷವು ತಮ್ಮ ಸರ್ಕಾರದ ಅಧಿಕಾರದ ದುರುಪಯೋಗದಿಂದ, ಆಮಿಷಗಳಿಂದ, ಭ್ರಷ್ಟಾಚಾರದ ಹಣದಿಂದ ಹಾಗೂ ನಕಲಿ ಮತಗಳಿಂದ ಗೆದ್ದಿದೆ ಎಂದು ಆರೋಪಿಸಿದ್ದಾರೆ.
ಈ ಸೋಲಿಗೆ ಧೃತಿಗೆಡದೆ ಇದನ್ನು ಸವಾಲಾಗಿ ಸ್ವೀಕರಿಸಿ, ಮುಂಬರುವ ದಿನಗಳಲ್ಲಿ ಪಕ್ಷ ಸಂಘಟನೆಗೆ ಹಾಗೂ ಹೋರಾಟಕ್ಕೆ ನಾವೆಲ್ಲರೂ ಸಜ್ಜಾಗೋಣ ಎಂದು ರಾಜರಾಜೇಶ್ವರಿ ನಗರ ಸೇರಿದಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದಾರೆ.
ರಾಜ್ಯ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಹಣಬಲ, ತೋಳ್ಬಲ, ಅಧಿಕಾರ ಬಲದಿಂದ ಗೆದ್ದ ಮಾತ್ರಕ್ಕೆ ಅಹಂ ತಲೆಗೇರಿಸಿಕೊಳ್ಳಬೇಡಿ. ಇಂತಹ ಅಹಂಕಾರಗಳನ್ನ ಬಿಟ್ಟು ಕೊರೊನಾದಿಂದ ಕಂಗೆಟ್ಟ ಜನತೆಯ ಕಷ್ಟಕ್ಕೆ ಸ್ಪಂದಿಸಿ, ಜಿಎಸ್ಟಿ ಪಾಲು ತರಲಾಗದೆ ರಾಜ್ಯದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ, ಅದರತ್ತ ಗಮನಿಸಿ. ಗಾಂಭೀರ್ಯತೆ ಅರಿಯದ ನಿಮ್ಮ ಅಧ್ಯಕ್ಷ ನಳಿನ್ ಕುಮಾರ್ ಕಟೀಲರಿಗೆ ಪ್ರಜ್ಞಾವಂತಿಕೆಯ ಟ್ಯೂಷನ್ ಕೊಡಿಸಿ ಎಂದಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್