ಬೆಂಗಳೂರು:ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳಿಸಲು ಬಿಜೆಪಿ ಕೋಟ್ಯಾಂತರ ಹಣ ಹಂಚಿಕೆ ಮಾಡಿ ಶಾಸಕ, ಸಚಿವರನ್ನು ಖರೀದಿಸುವಾಗ ಐಟಿ, ಇಡಿ ಅಧಿಕಾರಿಗಳು ಸತ್ತು ಹೋಗಿದ್ದರಾ? ಬಿಜೆಪಿ ವಿರುದ್ಧ ಮಾತನಾಡಿದವರನ್ನು ಈ ರೀತಿ ಬಗ್ಗು ಬಡಿಯಲಾಗುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ. ನವ ಭಾರತ ನಿರ್ಮಾಣ ಬೇರೆ ಮಾಡ್ತಾರಂತೆ, ಸ್ವತಃ ಬಿಎಸ್ವೈ ಶಾಸಕರಿಗೆ ಹಣ ನೀಡಿರುವುದಾಗಿ ಈ ಹಿಂದೆ ಒಪ್ಪಿಕೊಂಡಿದ್ದಾರೆ. ಅವರನ್ನು ಐಟಿ, ಇಡಿ ಇಲಾಖೆ ಏನು ಮಾಡಿವೆ ಎಂದು ಪ್ರಶ್ನಿಸಿದರು.