ಕರ್ನಾಟಕ

karnataka

ETV Bharat / state

ಉದ್ದೇಶಪೂರ್ವಕ ಪ್ರಚೋದನೆ ನೀಡಿ ಬಿಜೆಪಿ ಗಲಭೆ ಸೃಷ್ಟಿಸಿದೆ: ಕಾಂಗ್ರೆಸ್ - Latest News For congress

ಅನಗತ್ಯವಾಗಿ ರಾಜ್ಯದಲ್ಲಿ ನಿಷೇಧಾಜ್ಞೆ ಹೇರಿ ಸರ್ಕಾರ ಗಲಭೆಗೆ ಪ್ರಚೋದನೆ ನೀಡಿದೆ ಎಂದು ಆರೋಪಿಸಿ ರಾಜ್ಯ ಕಾಂಗ್ರೆಸ್ ಟ್ವೀಟ್​

Congress  Tweet
ಉದ್ದೇಶಪೂರ್ವಕ ಪ್ರಚೋದನೆ ನೀಡಿ ಬಿಜೆಪಿ ಗಲಭೆ ಸೃಷ್ಟಿಸಿದೆ: ಕಾಂಗ್ರೆಸ್

By

Published : Dec 24, 2019, 5:18 PM IST

ಬೆಂಗಳೂರು: ಅನಗತ್ಯವಾಗಿ ರಾಜ್ಯದಲ್ಲಿ ನಿಷೇಧಾಜ್ಞೆ ಹೇರಿ ಸರ್ಕಾರ ಗಲಭೆಗೆ ಪ್ರಚೋದನೆ ನೀಡಿದೆ ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಪಕ್ಷ, ರಾಜ್ಯ ಬಿಜೆಪಿ ಸರ್ಕಾರ ಪ್ರತಿಭಟನೆಗಳನ್ನ ಹತ್ತಿಕ್ಕುವ ದುರುದ್ದೇಶದಿಂದಲೇ, ಶಾಂತಿಯುತವಾಗಿ ನಡೆಯುತ್ತಿದ್ದ ವೇಳೆಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ, ಪೊಲೀಸರ ಮೂಲಕ ಪ್ರಚೋದನೆ ಮಾಡಿಸಿ ಗಲಭೆಗಳನ್ನ ಸೃಷ್ಟಿಸಿದೆ ಎಂದು ಆರೋಪಿಸಿದೆ.

ರಾಜ್ಯದ ಎಲ್ಲಾ ಗಲಭೆಗಳಿಗೆ ಸಿಎಂ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ನೇರ ಹೊಣೆ, ಗೃಹ ಸಚಿವರು ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದೆ.

ಆರ್ಥಿಕತೆ ಹಾಗೂ ಮಾರುಕಟ್ಟೆ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವಾದ 'ಗ್ರಾಹಕ'ನ ಹಿತರಕ್ಷಣೆ, ದೋಷಪೂರಿತ ವಸ್ತುಗಳು, ಅತೃಪ್ತಿದಾಯಕ ಸೇವೆಗಳು, ಅನುಚಿತ ಪದ್ಧತಿಗಳು, ಇತರೆ ಶೋಷಣೆಯ ಬಗೆಗೆ ಅರಿವು ಮೂಡಿಸಲು ಆಚರಿಸಲಾಗುವ, ರಾಷ್ಟ್ರೀಯ 'ಗ್ರಾಹಕರ ದಿನ' ದಂದು ಎಲ್ಲಾ ಗ್ರಾಹಕರು ತಮ್ಮ ಹಕ್ಕುಗಳನ್ನು ಅರಿತುಕೊಳ್ಳಬೇಕು ಎಂಬ ಸಂದೇಶವನ್ನು ಕೊಡುವ ಟ್ವೀಟ್​ ಮಾಡಿದೆ.

ABOUT THE AUTHOR

...view details