ಕರ್ನಾಟಕ

karnataka

ETV Bharat / state

ಎಕ್ಸಿಟ್ ಪೋಲ್ ವರದಿ ಒಪ್ಪಲ್ಲ, ಬಿಜೆಪಿ ಸರ್ಕಾರವೇ ರಚನೆಯಾಗಲಿದೆ: ರವಿಕುಮಾರ್ - ಸುಕುಮಾರ್ ಶೆಟ್ಟಿ

ಸಮೀಕ್ಷೆಯ ತೀರ್ಪನ್ನು ನಾನು ಒಪ್ಪಲ್ಲ. ಬಿಜೆಪಿ ಸ್ಪಷ್ಟವಾದ ಬಹುಮತ ಪಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

By

Published : May 12, 2023, 3:06 PM IST

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್

ಬೆಂಗಳೂರು: ಮತದಾನೋತ್ತರ ಸಮೀಕ್ಷಾ ವರದಿಯ ತೀರ್ಪನ್ನು ಬಿಜೆಪಿ ಒಪ್ಪಲ್ಲ. ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲಿದೆ. ನಾವೇ ಈ ಬಾರಿಯೂ ಸರ್ಕಾರ ರಚನೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಿಎಸ್​ವೈ ಅಧಿಕೃತ ನಿವಾಸ ಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ 105ರ ಮೇಲೆ 120 ರ ಒಳಗಡೆ ನಮ್ಮ ಅಂಕಿ ಸಂಖ್ಯೆ ಬರಲಿದೆ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಕಲ್ಯಾಣ ಕರ್ನಾಟಕದಲ್ಲಿ 10 ಸ್ಥಾನ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಬಂದಿದೆ. ಆದರೆ ನಾವು 15 ತಲುಪುತ್ತೇವೆ. ಬೆಂಗಳೂರಿನಲ್ಲೂ ಎಕ್ಸಿಟ್ ಪೋಲ್ ನಲ್ಲಿ 10 ಎಂದಿದೆ. ಆದರೆ 15 ಬರುತ್ತೇವೆ. ಉಡುಪಿಯಲ್ಲಿ ಎಲ್ಲ ಸ್ಥಾನ, ಮಂಗಳೂರು 6, ಚಿಕ್ಕಮಗಳೂರು 4 ಸ್ಥಾನ ಪಡೆಯುತ್ತೇವೆ. ಬಳ್ಳಾರಿಯಲ್ಲಿ 5ಕ್ಕಿಂತ ಕಡಿಮೆ ಬರಲ್ಲ. ರಾಜ್ಯದಲ್ಲಿ ಒಟ್ಟಾರೆ ತೆಗೆದುಕೊಂಡಾಗ 105 ದಾಟಲಿದ್ದು, ಸ್ಪಷ್ಟ ಬಹುಮತ ಬರಲಿದೆ ಎಂದರು.

ಇದನ್ನೂ ಓದಿ:ನಾಳೆ ವಿಧಾನಸಭೆ ಚುನಾವಣಾ ಫಲಿತಾಂಶ; ಮತ ಎಣಿಕಾ ಕೇಂದ್ರಗಳಿಗೆ ಬಿಗಿ ಭದ್ರತೆ

ಬಿಜೆಪಿ ಸ್ಪಷ್ಟವಾದ ಬಹುಮತ ಪಡೆಯಲಿದೆ : ಕಾಂಗ್ರೆಸ್ ಪರವಾದ ಸಮೀಕ್ಷಾ ವರದಿ ಬಂದಿದೆ ಎನ್ನುತ್ತಿದ್ದಾರೆ. ಆದರೆ 7 ಸಮೀಕ್ಷೆ ಅತಂತ್ರ ಎಂದು ವರದಿ ನೀಡಿವೆ. 3 ಕಾಂಗ್ರೆಸ್ ಪರವಾಗಿ ಹೇಳಿದ್ದರೆ 2 ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಬಹುಮತ ಬರಲಿದೆ ಎಂದು ಬೀಗುತ್ತಿದ್ದಾರೆ. ಆದರೆ ಸಮೀಕ್ಷೆಯ ತೀರ್ಪನ್ನು ನಾನು ಒಪ್ಪಲ್ಲ. ಬಿಜೆಪಿ ಸ್ಪಷ್ಟವಾದ ಬಹುಮತ ಪಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ:ಎಡಗೈ ಊತ, ನೋವು; ತಪಾಸಣೆಗೆ ಒಳಗಾದ ಸಿದ್ದರಾಮಯ್ಯ: ಡಿಕೆಶಿ ಆರೋಗ್ಯ ಚೇತರಿಕೆ

ಎಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗಲ್ಲ: ಕಾಂಗ್ರೆಸ್​ಗೆ ಆತಂಕವಿದೆ. ಹಾಗಾಗಿ ಅವರು ಸ್ವತಂತ್ರ ಯಾರು ಬರುತ್ತಾರೆ ಎನ್ನುವ ಹುಡುಕಾಟ ನಡೆಸಿದ್ದಾರೆ. ಜೆಡಿಎಸ್ ಸಂಪರ್ಕ ಯತ್ನ ಮಾಡುತ್ತಿದ್ದಾರೆ. ಆದರೆ, ನಮಗೆ ಸರಳ ಬಹುಮತ ಬರಲಿದೆ. ಹಾಗಾಗಿ ನಾವು ಯಾರನ್ನೂ ಸಂಪರ್ಕ ಮಾಡುತ್ತಿಲ್ಲ. ಪ್ರತಿ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರು ವರದಿ ನೀಡಿದ್ದಾರೆ. ಕಳೆದ ಬಾರಿಗೆ ಹೋಲಿಸಿದಲ್ಲಿ ನಮಗೆ ಸ್ವಲ್ಪ ಹಿನ್ನಡೆ ಆಗಲಿದೆ. ಅದನ್ನ ನಾವು ಕಲ್ಯಾಣ ಕರ್ನಾಟಕ. ಹಳೆ ಮೈಸೂರು, ಬೆಂಗಳೂರು ಭಾಗದಲ್ಲಿ ತುಂಬಿಕೊಳ್ಳುತ್ತೇವೆ. ಆದರೆ, ಇನ್ನುಳಿದ ಕಡೆ ಎಲ್ಲಿಯೂ ಬಿಜೆಪಿಗೆ ಹಿನ್ನಡೆಯಾಗಲ್ಲ ಎಂದರು.

ಎಲ್ಲಾ ಕಡೆ ಓಡಾಡಿ ಪ್ರಚಾರ ನಡೆಸಿದ್ದಾರೆ: ಸುಕುಮಾರ್ ಶೆಟ್ಟಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಎಲ್ಲಾ ಕಡೆ ಓಡಾಡಿ ಪ್ರಚಾರ ನಡೆಸಿದ್ದಾರೆ. ಅವರ ವಿರುದ್ಧ ಹರಿದಾಡಿರುವುದು ನಕಲಿ ಪತ್ರ. ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಬರಲ್ಲ ಎಂದು ಹೇಳಿದರು.

ಇದನ್ನೂ ಓದಿ:ನಮ್ಮದೇ ಸರ್ಕಾರ ರಚನೆ, ಹೈಕಮಾಂಡ್ ನಾಯಕರಿಗೆ ಮಾಹಿತಿ ನೀಡಿದ್ದೇನೆ: ಸಿಎಂ ಬೊಮ್ಮಾಯಿ

ABOUT THE AUTHOR

...view details