ಬೆಂಗಳೂರು:5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ದಿನದಂದು ಶ್ವಾನಗಳ ಯೋಗ ಪ್ರದರ್ಶನ ಫೋಟೊಗೆ ನವ ಭಾರತ ಎಂದು ಟ್ವೀಟ್ ಮಾಡಿ ಕುಹಕವಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಟ್ವೀಟ್ ಮೂಲಕವೇ ಬಿಜೆಪಿ ಟಾಂಗ್ ನೀಡಿದೆ.
ರಾಹುಲ್ ನವಭಾರತ ಕುಹಕ ಟ್ವೀಟ್ಗೆ ರಾಜ್ಯ ಬಿಜೆಪಿಯಿಂದ ಟಾಂಗ್ - undefined
ಸೇನೆಯ ಶ್ವಾನ ದಳ ನಡೆಸಿದ್ದ ಯೋಗಾ ಕಾರ್ಯಕ್ರಮಕ್ಕೆ ಕುಹಕವಾಡಿದ್ದ ರಾಹುಲ್ ಗಾಂಧಿ ಬಿಜೆಪಿ ತಿರುಗೇಟು ಕೊಟ್ಟಿದೆ. ನೀವು ಇನ್ನೂ ಮನುಷ್ಯರಾಗಲು ವಿಕಾಸಗೊಳ್ಳುತ್ತಿದ್ದೀರಿ ಎಂದು ರಾಹುಲ್ ಗಾಂಧಿ ಅವರ ಟ್ವೀಟ್ ಕೋಟ್ ಮಾಡಿ ರಾಜ್ಯ ಬಿಜೆಪಿಯು ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡು ಟಾಂಗ್ ನೀಡಿದೆ.
ರಾಹುಲ್ ಗಾಂಧಿ
ನಿಜವಾಗಿಯೂ ಇದು ಹೊಸ ಭಾರತ. ವಿಶ್ವ ಯೋಗ ದಿನಾಚರಣೆಯಂದು ಶ್ವಾನಗಳು ಸಹ ತಮ್ಮ ಕೌಶಲವನ್ನು ಪ್ರದರ್ಶಿಸುತ್ತಿವೆ. ಆದರೆ ನೀವು ಇನ್ನೂ ಮನುಷ್ಯರಾಗಲು ವಿಕಾಸಗೊಳ್ಳುತ್ತಿದ್ದೀರಿ ಎಂದು ರಾಹುಲ್ ಗಾಂಧಿ ಅವರಿಗೆ ರಾಜ್ಯ ಬಿಜೆಪಿಯು ಅಧಿಕೃತ ಟ್ವಿಟ್ಟರ್ ಖಾತೆ ಮೂಲಕ ತಿರುಗೇಟು ಕೊಟ್ಟಿದೆ.
ಭಾರತೀಯ ಸೇನೆಯ ಶ್ವಾನದಳ ಇಂದು ಯೋಗ ದಿನಾಚರಣೆ ನಡೆಸಿತ್ತು. ತರಬೇತಿ ಪಡೆದ ಸೇನಾ ಶ್ವಾನಗಳು ತಮ್ಮ ತರಬೇತುದಾರರ ಜೊತೆ ಯೋಗಾಸನ ಮಾಡುತ್ತಿದ್ದ ಫೋಟೊಗಳನ್ನು ನವ ಭಾರತ ಎನ್ನುವ ತಲೆಬರಹದೊಂದಿಗೆ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.