ಕರ್ನಾಟಕ

karnataka

ETV Bharat / state

ಬಿಜೆಪಿ ಕಚೇರಿಯಲ್ಲಿ ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ - Former President Pranab Mukherjee news

ದೇಶದ ಬಹುದೊಡ್ಡ ಮುತ್ಸದ್ದಿ ರಾಜಕಾರಣಿ. ಭಾರತ ರತ್ನ, ಅಜಾತ ಶತ್ರು, ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ, ರಾಷ್ಟ್ರೀಯತೆ, ನೈತಿಕತೆ, ಪ್ರಾಮಾಣಿಕತೆ ಸೇರಿ ಅನೇಕ ಮೌಲ್ಯಗಳ ಪ್ರತಿರೂಪ..

ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ
ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ

By

Published : Sep 1, 2020, 9:15 PM IST

Updated : Sep 1, 2020, 9:31 PM IST

ಬೆಂಗಳೂರು: ಅಗಲಿದ ಹಿರಿಯ ಚೇತನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ರಾಜ್ಯ ಬಿಜೆಪಿ ಘಟಕದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ರಾಷ್ಟ್ರಕ್ಕೆ ಮುಖರ್ಜಿ ಅವರು ನೀಡಿದ ಸೇವೆಯನ್ನು ಈ ವೇಳೆ ಸ್ಮರಿಸಲಾಯಿತು.

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಭಾವಚಿತ್ರಕ್ಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್‌ ಹಾಗೂ ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಪುಷ್ಪಾರ್ಚನೆಯನ್ನು ಮಾಡಿ, ಶ್ರದ್ಧಾಂಜಲಿ ಸಲ್ಲಿಸಿದರು.

ಮಾಜಿ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಅವರಿಗೆ ಶ್ರದ್ಧಾಂಜಲಿ

ಬಳಿಕ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್‌ ಅವರು, ದೇಶದ ಬಹುದೊಡ್ಡ ಮುತ್ಸದ್ದಿ ರಾಜಕಾರಣಿ. ಭಾರತ ರತ್ನ, ಅಜಾತ ಶತ್ರು, ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ, ರಾಷ್ಟ್ರೀಯತೆ, ನೈತಿಕತೆ, ಪ್ರಾಮಾಣಿಕತೆ ಸೇರಿ ಅನೇಕ ಮೌಲ್ಯಗಳ ಪ್ರತಿರೂಪ ದೇಶದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ವಿಧಿವಶರಾಗಿದ್ದಾರೆ. ಅವರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಿದೆ. ಅಂತಹ ದೇಶದ ಒಬ್ಬ ಧೀಮಂತ ನಾಯಕನನ್ನು ಕಳೆದುಕೊಂಡು ಇಡೀ ದೇಶ ಬಡವಾಗಿದೆ ಎಂದರು.

"ಪ್ರಣಬ್ ದಾ" ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು, ಮುಖರ್ಜಿ ಅವರು ತಮ್ಮ ವೃತ್ತಿ ಜೀವನವನ್ನು ಅಂಚೆ ಇಲಾಖೆಯ ಗುಮಾಸ್ತನಾಗಿ, ರಾಜಕೀಯ ಶಾಸ್ತ್ರ ವಿಭಾಗದ ಉಪನ್ಯಾಸಕರಾಗಿ, ನಂತರ ರಾಜಕೀಯ ರಂಗವನ್ನು ಪ್ರವೇಶಿಸಿ, ಕೇಂದ್ರದ ಹಣಕಾಸು, ವಿದೇಶಾಂಗ, ರಕ್ಷಣಾ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಭಾರತದ ಪ್ರಥಮ ಪ್ರಜೆ ಆಗಿಯೂ ಸೇವೆ ಸಲ್ಲಿಸಿರುವುದು ಅತ್ಯಂತ ಅವಿಸ್ಮರಣೀಯ. ಅವರ ಸರಳತೆ, ಆಡಳಿತ ಶೈಲಿಯನ್ನು ಈ ದೇಶ ಸದಾ ಸ್ಮರಿಸುತ್ತದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಇವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲೆಂದು ರವಿಕುಮಾರ್ ಪ್ರಾರ್ಥಿಸಿದರು.

Last Updated : Sep 1, 2020, 9:31 PM IST

ABOUT THE AUTHOR

...view details