ಬೆಂಗಳೂರು: ಬಿಜೆಪಿ ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಬಿಜೆಪಿ ಎಲಚೇನಹಳ್ಳಿ ವಾರ್ಡ್ ಕಾರ್ಪೊರೇಟರ್ ವಿ ಬಾಲಕೃಷ್ಣಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾಲ್ಕು ಬಾರಿ ನಾನು ಕಾರ್ಪೊರೇಟರ್ ಆದವನು. ಅಲ್ಲದೆ ನನ್ನ ಪತ್ನಿ ಸಹ ಎರಡು ಬಾರಿ ಕಾರ್ಪೊರೇಟರ್ ಆಗಿ ಆಯ್ಕೆಯಾಗಿದ್ದವರು. ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನನ್ನನ್ನು ಪರಿಗಣಿಸುವಂತೆ ಬಿಜೆಪಿ ನಾಯಕರಿಗೆ ಲಿಖಿತ ರೂಪದಲ್ಲಿ ಮನವಿ ನೀಡಿದ್ದೆ. 1983 ರಿಂದ ಯಡಿಯೂರಪ್ಪನವರ ಜೊತೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಆದರೆ ಪಕ್ಷಕ್ಕೆ ದುಡಿದರು ನನಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಬಿಬಿಎಂಪಿ ಚುನಾವಣೆ ಚಟಾಪಟಿ ಈ ಬಾರಿ ಮೇಯರ್ ಆಯ್ಕೆ ವಿಚಾರದಲ್ಲಿ ಒಕ್ಕಲಿಗರ ಪ್ರಾಬಲ್ಯದಿಂದ ನನಗೆ ಮೋಸ ಮಾಡಿದ್ದಾರೆ. ಅವರದೇ ಒಂದು ಗ್ಯಾಂಗ್ ಇದೆ. ಅವರವರೇ ನಿರ್ಧಾರ ಮಾಡುತ್ತಾರೆ. ಈಗ ಸಭೆ ಕರೆದಿದ್ದು, ನಾನು ಸಭೆಗೆ ಹೋಗುತ್ತಿದ್ದೇನೆ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತೆ ಅಂತ ಕಾದು ನೋಡಬೇಕಿದೆ ಎಂದು ರಚನಹಳ್ಳಿ ವಾರ್ಡ್ ಕಾರ್ಪೊರೇಟರ್ ಬಾಲಕೃಷ್ಣ ಕಣ್ಣೀರು ಹಾಕಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಾರ್ಡ್ ನಂಬರ್ 89ರ ಜೋಗುಪಾಳ್ಯ ವಾರ್ಡ್ ಬಿಬಿಎಂಪಿ ಸದಸ್ಯ ಗೌತಮ್ ಕುಮಾರ್, ಬಿಜೆಪಿ ಅಭ್ಯರ್ಥಿಯಾಗಿ ಮುಖಂಡರು ಒಮ್ಮತದಿಂದ ನನ್ನನ್ನು ಆಯ್ಕೆ ಮಾಡಿದ್ದಾರೆ. ಈಗ ನಾನು ನಾಮಿನೇಷನ್ ಫೈಲ್ ಮಾಡಲು ಹೋಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.