ಕರ್ನಾಟಕ

karnataka

ETV Bharat / state

ಬಿಜೆಪಿ ಕೋರ್ ಕಮಿಟಿ‌ ಸಭೆ ದಿಢೀರ್ ಮುಂದೂಡಿಕೆ : ಕಾರಣ ಏನಂದ್ರೆ... - ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆ ಮುಂದೂಡಿಕೆ

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ಹಿನ್ನೆಲೆ ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆಯನ್ನು ದಿಢೀರ್ ಮುಂದೂಡಿಕೆ ಮಾಡಲಾಗಿದೆ.

bjp   core-comitee-meeting-postponed-
ಬಿಜೆಪಿ ಕೋರ್ ಕಮಿಟಿ‌ ಸಭೆ

By

Published : Jan 15, 2020, 5:42 PM IST

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ನಡೆಸಲು ಕರೆಯಲಾಗಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ‌ ಸಭೆಯನ್ನು ದಿಢೀರ್ ಮುಂದೂಡಿಕೆ ಮಾಡಲಾಗಿದೆ.

ಬಿಜೆಪಿ ಕೋರ್ ಕಮಿಟಿ‌ ಸಭೆ

ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸದ ನೆಪವೊಡ್ಡಿ ನಾಳಿನ ಸಭೆಯನ್ನು ಮುಂದೂಡಲಾಗಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಬಿಜೆಪಿ ಕಚೇರಿಗೆ ಆಗಮಿಸಲಿರುವ ಸಿಎಂ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ 11.30 ಕ್ಕೆ ವೇದಾಗಮ ಸಂಸ್ಕೃತ ಪಾಠಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭ,12.30 ಕ್ಕೆ ಖಾದಿ‌ ಉತ್ಸವ ಉದ್ಘಾಟನೆ ನೆರವೇರಿಸಿ ಮಧ್ಯಾಹ್ನ 3 ಗಂಟೆಗೆ ಅರಮನೆ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಸಿಎಂ ಭಾಗಿಯಾಗಲಿದ್ದಾರೆ. ಆದರೆ ಸಂಜೆ 5.30 ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ಇದ್ದರೂ ವಿಜಯಪುರ ಜಿಲ್ಲಾ ಪ್ರವಾಸಕ್ಕೆ ತೆರಳುತ್ತಿದ್ದು ಸಿಎಂ ಕಾರ್ಯಕ್ರಮ ಪಟ್ಟಿಯನ್ನು ಪರಿಷ್ಕರಿಸಿ ಕೋರ್ ಕಮಿಟಿ ಸಭೆ ಬದಲು ವಿಜಯಪುರ ಪ್ರವಾಸ ಎಂದು ಪ್ರಕಟಿಸಲಾಗಿದೆ.

ಸಿಎಂ ವಿಜಯಪುರ ಪ್ರವಾಸಕ್ಕೆ ತೆರಳುತ್ತಿರುವ ಹಿನ್ನೆಯಲ್ಲಿ ನಾಳೆ ಸಂಜೆ ಬಿಜೆಪಿ ಕಚೇರಿಯಲ್ಲಿ ನಡೆಯಬೇಕಿದ್ದ ಕೋರ್ ಕಮಿಟಿ‌ ಸಭೆಯನ್ನು ಮುಂದೂಡಿಕೆ ಮಾಡಲಾಗಿದ್ದು ಸದ್ಯದಲ್ಲೇ ಮತ್ತೊಂದು ದಿನಾಂಕ ಪ್ರಕಟಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ABOUT THE AUTHOR

...view details