ಕರ್ನಾಟಕ

karnataka

ETV Bharat / state

ಟಿಪ್ಪು ಜಯಂತಿ ರದ್ದತಿಗೆ ಪರ-ವಿರೋಧ: ಕೈ,ಕಮಲ ಮುಖಂಡರ ಅಭಿಪ್ರಾಯ - ಟಿಪ್ಪು ಜಯಂತಿ ಆಚರಣೆ

ಟಿಪ್ಪು ಜಯಂತಿ ಆಚರಣೆ ರದ್ದತಿ ನಿರ್ಧಾರದಲ್ಲಿ ಆರ್​ಎಸ್​ಎಸ್​ ಕೈವಾಡವಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಟೀಕಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ: ಪರ ವಿರೋಧ ಅಭಿಪ್ರಾಯ ಹೊರಹಾಕಿದ ಕೈ- ಕಮಲ ಮುಂಖಂಡರು

By

Published : Jul 30, 2019, 11:35 PM IST

ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರದಲ್ಲಿ ಆರ್​ಎಸ್​ಎಸ್​ ಮುಖ ಎದ್ದು ಕಾಣುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ವಾಜಿದ್ ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿ ಆಚರಣೆ: ಪರ ವಿರೋಧ ಅಭಿಪ್ರಾಯ

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದ ಪ್ರಧಾನಿಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದಿದ್ರು. ಇದು ಬಹುಶ: ಯಡಿಯೂರಪ್ಪನವರಿಗೆ ಅರ್ಥವಾಗಿಲ್ಲ ಅನ್ನಿಸುತ್ತೆ. ಒಂದು ಸಮುದಾಯಕ್ಕೆ ನೋವುಂಟಾಗುವಂತೆ ಅವರು ನಡ್ಕೊಂಡಿದ್ದಾರೆ ಎಂದರು. ಇದೇ ರೀತಿ ಇವರು ಎಷ್ಟು ಜಯಂತಿ ರದ್ದುಪಡಿಸೋಕೆ ಹೋಗಿದ್ದಾರೆ? ಅಧಿಕಾರ ವಹಿಸಿಕೊಂಡ ಎರಡೇ ದಿನದಲ್ಲೇ ತರಾತುರಿಯಲ್ಲಿ ಈ ನಿರ್ಧಾರ ಕೈಗೊಳ್ಳುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ರು.

ಬಿಜೆಪಿ ಮುಖಂಡ ಪದ್ಮನಾಭ ರೆಡ್ಡಿ ಮಾತನಾಡಿ, ಸಾವಿರಾರು ಜನರನ್ನು ಹತ್ಯೆ ಮಾಡಿದ್ದ ಮತಾಂಧನ ಜಯಂತಿಯನ್ನು ರದ್ದು ಮಾಡಿರುವುದನ್ನು ಸ್ವಾಗತಾರ್ಹ ಎಂದರು.

ABOUT THE AUTHOR

...view details