ಬೆಂಗಳೂರು:ಸಾಹಿತಿಬರಗೂರು ರಾಮಚಂದ್ರಪ್ಪ ಅವರುಕಳೆದ 37 ವರ್ಷಗಳ ಹಿಂದೆ ಬರೆದಿದ್ದ ಪುಸ್ತಕ ಇದೀಗ ಹೊಸ ವಿವಾದ ಹುಟ್ಟುಹಾಕಿದೆ. ರಾಷ್ಟ್ರಗೀತೆಯನ್ನು ಅವರು ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಆಯುಕ್ತರಿಗೆ ಬಿಜೆಪಿ ಪರಿಷತ್ ಸದಸ್ಯ ರವಿಕುಮಾರ್ ನೇತೃತ್ವದ ನಿಯೋಗ ದೂರು ನೀಡಿದೆ. ಈ ಸಂದರ್ಭದಲ್ಲಿ ಛಲವಾದಿ ನಾರಾಯಣಸ್ವಾಮಿ ಇದ್ದರು.
ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಆರೋಪ: ಬರಗೂರು ವಿರುದ್ಧ ಬಿಜೆಪಿ ದೂರು
37 ವರ್ಷಗಳ ಹಿಂದೆ ಸಾಹಿತಿ ಬರಗೂರು ರಾಮಚಂದ್ರಪ್ಪ ಬರೆದಿದ್ದ ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಪೊಲೀಸರಿಗೆ ದೂರು ನೀಡಿದೆ.
1983ರಲ್ಲಿ ಭರತನಗರಿ ಕಾದಂಬರಿ ಬರೆದಿರುವ ಬರಗೂರು ಸಾಹಿತ್ಯದಲ್ಲಿ 'ಜನಗಣಮನ ಜಡಭಾರತ ಜಯಹೇ ಬಡವರ ಬಾಳಿನ ಭೂತ' ಎಂಬ ಸಾಲುಗಳಿವೆ. 2016ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದ ಬರಗೂರು ಅವರ ಕುರಿತಂತೆ ಲೇಖಕ ಮಾರುತಿ ಎಂಬುವರು ಭರತನಗರಿ ಕಾದಂಬರಿಯಲ್ಲಿ ರಾಷ್ಟ್ರಗೀತೆಗೆ ಸಂಬಂಧಿಸಿದ ಸಾಲುಗಳನ್ನು ಅವಹೇಳನಕಾರಿಯಾಗಿ ಉಲ್ಲೇಖಿಸಿದ್ದು ಇದೀಗ ಗಮನಕ್ಕೆ ಬಂದಿದೆ. ಹೀಗಾಗಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ ಎಂದು ನಿಯೋಗದ ಸದಸ್ಯರು ತಿಳಿಸಿದರು.
ಇದನ್ನೂ ಓದಿ:ನಾಡಗೀತೆ, ಕುವೆಂಪು ಅವಮಾನಿಸಿದವರನ್ನು ಒದ್ದು ಒಳಕ್ಕೆ ಹಾಕಬೇಕು : ಚಕ್ರತೀರ್ಥ ವಿರುದ್ಧ ಹೆಚ್ಡಿಕೆ ಕಿಡಿ