ಕರ್ನಾಟಕ

karnataka

ETV Bharat / state

ಪ್ರಲ್ಹಾದ್‌ ಜೋಶಿ, ಬಿ ಎಲ್‌ ಸಂತೋಷ ಫಸ್ಟ್‌.. ಉಳಿದವರು ಸಿಎಂ ರೇಸ್‌ನಲ್ಲಿ ಲಾಸ್ಟ್‌.. - ಬಿಜೆಪಿಯ ಸಿಎಂ ರೇಸ್​​​ನ ಮೂಂಚುಣಿ ನಾಯಕರು

ಈ ಮಧ್ಯೆ ಸಿಎಂ ಹುದ್ದೆಯ ರೇಸಿನಲ್ಲಿ ಬಹಳಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಶಿವಕುಮಾರ್ ಉದಾಸಿ, ಲಕ್ಷ್ಮಣ ಸವದಿ, ಸೋಮಣ್ಣ, ಒಕ್ಕಲಿಗ ಸಮುದಾಯದ ಸಿ ಟಿ ರವಿ, ಡಾ. ಸಿ ಎನ್ ಅಶ್ವತ್ಥ್‌ ನಾರಾಯಣ ಅವರ ಹೆಸರುಗಳು ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿವೆ. ಪ್ರಮುಖವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹೆಸರು ಸಂಘ ಪರಿವಾರದ ನಾಯಕರಿಂದ ಕೇಳಿ ಬಂದಿದೆ..

ಇವರೇ ನೋಡಿ ಸಿಎಂ ರೇಸ್​​​ನ ಮೂಂಚುಣಿ ನಾಯಕರು.
ಇವರೇ ನೋಡಿ ಸಿಎಂ ರೇಸ್​​​ನ ಮೂಂಚುಣಿ ನಾಯಕರು

By

Published : Jul 26, 2021, 7:48 PM IST

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ಪ್ರಲ್ಹಾದ್ ಜೋಷಿ ನೇಮಕವಾಗುವ ಸಾಧ್ಯತೆ ಇದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಪಕ್ಷದ ವರಿಷ್ಠ ಮಂಡಳಿ ಮುಂದಿನ ನಾಯಕತ್ವದ ಬಗ್ಗೆ ಚರ್ಚಿಸಿದ್ದು, ಈ ಚರ್ಚೆಯ ಸಂದರ್ಭದಲ್ಲಿ ಪ್ರಲ್ಹಾದ್ ಜೋಷಿ ಅವರ ಹೆಸರು ಮುಂಚೂಣಿಗೆ ಬಂದಿದೆ.

ಆದರೆ, ಈ ಕುರಿತ ಅಧಿಕೃತ ಸೂಚನೆ ಈವರೆಗೂ ಬಂದಿಲ್ಲವಾದರೂ ಮೂಲಗಳ ಪ್ರಕಾರ, ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಲ್ಹಾದ್ ಜೋಷಿ ಅವರು ನೇಮಕವಾಗುವ ಸಾಧ್ಯತೆಗಳು ಹೆಚ್ಚಿವೆ. ಇದರ ಮಧ್ಯೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್ ಅವರ ಹೆಸರು ಬಲವಾಗಿ ಕೇಳಿ ಬರುತ್ತಿದೆ‌.

ಜೋಷಿ ಹಾಗೂ ಬಿ ಎಲ್‌ ಸಂತೋಷ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಈ ಮಧ್ಯೆ ಅಚ್ಚರಿಯ ಬೆಳವಣಿಗೆಯಲ್ಲಿ ವಿಧಾನಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿದ್ದು, ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಬಂದ ಬೆಳವಣಿಗೆ ಹಲವು ಬಗೆಯ ಚರ್ಚೆಗಳಿಗೆ ಕಾರಣವಾಗಿದೆ.

ಇನ್ನು, ಗಣಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರು ರೇಸಿನಲ್ಲಿದ್ದು, ನಿನ್ನೆಯಷ್ಟೇ ದೆಹಲಿಗೆ ಹೋಗಿ ಬಂದಿದ್ದಾರೆ. ಅಮಿತ್ ಶಾ ಅವರಿಗೆ ಹತ್ತಿರವಾಗಿರುವ ನಿರಾಣಿ ಅವರು ಸಿಎಂ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಸಿಎಂ ಹುದ್ದೆಯ ರೇಸಿನಲ್ಲಿ ಬಹಳಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ. ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ, ಅರವಿಂದ್ ಬೆಲ್ಲದ್, ಶಿವಕುಮಾರ್ ಉದಾಸಿ, ಲಕ್ಷ್ಮಣ ಸವದಿ, ಸೋಮಣ್ಣ, ಒಕ್ಕಲಿಗ ಸಮುದಾಯದ ಸಿ ಟಿ ರವಿ, ಡಾ. ಸಿ ಎನ್ ಅಶ್ವತ್ಥ್‌ ನಾರಾಯಣ ಅವರ ಹೆಸರುಗಳು ಸಿಎಂ ರೇಸ್‌ನಲ್ಲಿ ಕೇಳಿ ಬರುತ್ತಿವೆ. ಪ್ರಮುಖವಾಗಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ಹೆಸರು ಸಂಘ ಪರಿವಾರದ ನಾಯಕರಿಂದ ಕೇಳಿ ಬಂದಿದೆ.

ಆದರೆ, ದೆಹಲಿ ಹೈಕಮಾಂಡ್ ಇವರಲ್ಲೇ ಯಾರನ್ನಾದ್ರೂ ಆಯ್ಕೆ ಮಾಡುತ್ತಾ ಅಥವಾ ಅಚ್ಚರಿ ಎಂಬಂತೆ ಹೊಸಬರನ್ನು ಸಿಎಂ ಹುದ್ದೆಗೆ ತಂದು ಕೂರಿಸುತ್ತಾ ಎಂಬುದು ನಿಗೂಢ. ಇದೀಗ ಎಲ್ಲರ ಚಿತ್ತ ದೆಹಲಿಯತ್ತ ನೆಟ್ಟಿದೆ.

ಇದನ್ನೂ ಓದಿ : ನಿರ್ಗಮನದ ವೇಳೆ ಬಿಎಸ್​ವೈ ಭರ್ಜರಿ ಗಿಫ್ಟ್​: ರಾಜ್ಯ ಸರ್ಕಾರಿ ನೌಕರರ ಡಿಎ ಹೆಚ್ಚಳ

ABOUT THE AUTHOR

...view details