ಬೆಂಗಳೂರು: ಬೆಂಗಳೂರು ಹೊರ ವಲಯದಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಶನಿವಾರ ಒಟ್ಟು 20 ಜಿಲ್ಲೆಗಳ ಸಭೆ ನಡೆಸಲಾಯಿತು. ಭಾನುವಾರವೂ ಸಭೆ ನಡೆಯಲ್ಲಿದೆ.
ನಾಲ್ಕು ಜಿಲ್ಲೆಗಳ ಒಂದೊಂದು ತಂಡವಾಗಿ ಒಟ್ಟು ಐದು ಸಭೆಗಳನ್ನು ನಡೆಸಲಾಗುತ್ತಿದೆ. ತುಮಕೂರು, ಮಧುಗಿರಿ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಒಂದು ತಂಡ, ಹುಬ್ಬಳ್ಳಿ ಧಾರವಾಡ - ಧಾರವಾಡ ಗ್ರಾಮಾಂತರ - ಗದಗ - ಹಾವೇರಿ ಜಿಲ್ಲೆಗಳ ತಂಡ, ಬಾಗಲಕೋಟೆ - ವಿಜಯಪುರ - ಬೆಳಗಾವಿ ನಗರ - ಗ್ರಾಮಾಂತರ ಜಿಲ್ಲೆಗಳ ತಂಡ, ಚಿಕ್ಕೋಡಿ - ರಾಯಚೂರು - ಕೊಪ್ಪಳ - ಬಳ್ಳಾರಿ ಜಿಲ್ಲೆಗಳ ತಂಡ ಹಾಗೂ ವಿಜಯನಗರ - ಉತ್ತರ ಕನ್ನಡ - ಶಿವಮೊಗ್ಗ - ಚಿಕ್ಕಮಗಳೂರು ಜಿಲ್ಲೆಗಳ ಐದು ತಂಡಗಳಾಗಿ ವಿಂಗಡಿಸಿ ಸಭೆ ನಡೆಸಲಾಗುತ್ತಿದೆ. ಜಿಲ್ಲಾ ಕೋರ್ ಕಮಿಟಿ ಸದಸ್ಯರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ.
ಮಾಡಾಳ್ಗೆ ಟಿಕೆಟ್ ನೀಡಲು ಆಕ್ಷೇಪ:ದಾವಣಗೆರೆ ಜಿಲ್ಲಾ ಕೋರ್ ಕಮಿಟಿ ಸದಸ್ಯರಿಂದ ಬಿಜೆಪಿ ನಾಯಕರು ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈ ಬಾರಿ ಚೆನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಟಿಕೆಟ್ ನೀಡುವ ಬಗ್ಗೆಯೂ ಅಭಿಪ್ರಾಯ ಸಲ್ಲಿಕೆ ಮಾಡಲಾಯಿತು. ಆದ್ರೆ ಮಾಡಾಳ್ ಅವರಿಗೆ ಟಿಕೆಟ್ ಆಕ್ಷೇಪ ವ್ಯಕ್ತವಾಗಿದೆ ಎನ್ನಲಾಗಿದೆ.
ಬೆಂಬಲಿಗರಿಂದ ಲಾಬಿ, ಜಯಘೋಷ:ಗೋಲ್ಡನ್ ಪಾಮ್ಸ್ ರೆಸಾರ್ಟ್ ಬಳಿ ಬಿಜೆಪಿ ಆಕಾಂಕ್ಷಿಗಳ ಬೆಂಬಲಿಗರೂ ಜಮಾಯಿಸಿದ್ದರು. ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಆಕಾಂಕ್ಷಿ ಆಗಿರುವ ಎಂ.ಆರ್ ಪಾಟೀಲ್ ಬೆಂಬಲಿಗರು ಜಮಾಯಿಸಿ ಜಯಘೋಷ ಕೂಗಿದರು. ಈ ಕ್ಷೇತ್ರದ ಇಬ್ಬರು ಆಕಾಂಕ್ಷಿಗಳ ಬೆಂಬಲಿಗರು ಪರಸ್ಪರ ಜಯಘೋಷ ಕೂಗಿದರು. ಧಾರವಾಡದ ಕುಂದಗೋಳ ಕ್ಷೇತ್ರಕ್ಕೆ ಎಂ ಆರ್ ಪಾಟೀಲ್ ಮತ್ತು ಚಿಕ್ಕನಗೌಡ ಆಕಾಂಕ್ಷಿಗಳಾಗಿದ್ದು, ರೆಸಾರ್ಟ್ ಬಳಿ ಈ ಇಬ್ಬರು ಆಕಾಂಕ್ಷಿಗಳ ಬೆಂಬಲಿಗರ ಬಣ ಜಮಾವಣೆಯಾಗಿದ್ದರು. ಎರಡೂ ಬಣಗಳಿಂದ ತಮ್ಮ ತಮ್ಮ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದರು.
ಆಕಾಂಕ್ಷಿ ಎಂ.ಆರ್.ಪಾಟೀಲ್ ಪ್ರಹ್ಲಾದ್ ಜೋಷಿ ಆಪ್ತರಾಗಿದ್ದರೆ, ಮತ್ತೊಬ್ಬ ಆಕಾಂಕ್ಷಿ ಚಿಕ್ಕನಗೌಡ ಯಡಿಯೂರಪ್ಪ ಅವರ ಸಂಬಂಧಿಯಾಗಿದ್ದಾರೆ. ಕುಂದಗೋಳದ ಎರಡೂ ಬಣಗಳು ಒಟ್ಟಿಗೆ ಟಿಕೆಟ್ಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಇದೇ ವೇಳೆ ಮಾತನಾಡಿದ ಕುಂದಗೋಳ ಟಿಕೆಟ್ ಆಕಾಂಕ್ಷಿ ಎಂಆರ್ ಪಾಟೀಲ್, ನಮ್ಮ ಹಿರಿಯರ ನಾಯಕರ ಜೊತೆ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಗುತ್ತೆ ಎನ್ನುವ ಭರವಸೆ ಇದೆ. ಸಿಗದೇ ಹೋದರು ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಟಿಕೆಟ್ ಸಿಗದಿದ್ದರೇ ಸಹಜವಾಗೇ ಬೇಸರ ಆಗುತ್ತೆ. ಅದು ಮನುಷ್ಯನ ಗುಣವಾಗಿರುತ್ತೆ. ಬೇರೆಯವರಿಗೆ ಟಿಕೆಟ್ ಸಿಕ್ಕಿದ್ರು ನಾನು ಬೆಂಬಲಿಸುತ್ತೇನೆ. ಯಾವುದೇ ಬಂಡಾಯದ ಮೊರೆಹೋಗದೆ ಕೆಲಸ ಮಾಡುತ್ತೇನೆ ಎಂದರು. ಇತ್ತ ಟಿಕೆಟ್ ನನಗೇ ಸಿಕ್ತು ಅಂತ ರೆಸಾರ್ಟ್ನಿಂದ ಆಚೆ ಬಂದು ಕುಂದಗೋಳ ಆಕಾಂಕ್ಷಿ ಚಿಕ್ಕನಗೌಡ ಕುಣಿದು ಕುಪ್ಪಳಿಸಿದರು.
ಬೆಂಗಳೂರು ಬಿಜೆಪಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ:
- ಯಲಹಂಕ- ಎಸ್.ಆರ್.ವಿಶ್ವನಾಥ್
- ಯಶವಂತಪುರ- ಎಸ್.ಟಿ ಸೋಮಶೇಖರ್
- ರಾಜರಾಜೇಶ್ವರಿ ನಗರ- ಮುನಿರತ್ನ
- ಪದ್ಮನಾಭನಗರ- ಆರ್ ಅಶೋಕ್
- ಬೆಂಗಳೂರು ದಕ್ಷಿಣ- ಎಂ.ಕೃಷ್ಣಪ್ಪ
- ಬೊಮ್ಮನಹಳ್ಳಿ- ಸತೀಶ್ ರೆಡ್ಡಿ
- ಕೆ.ಆರ್ ಪುರ- ಬೈರತಿ ಬಸವರಾಜ್
- ಮಹದೇವಪುರ- ಅರವಿಂದ್ ಲಿಂಬಾವಳಿ
- ಸಿ.ವಿ ರಾಮನ್ ನಗರ- ಎಸ್ ರಘು.ಲ
- ರಾಜಾಜಿ ನಗರ- ಸುರೇಶ್ ಕುಮಾರ್
- ಮಹಾಲಕ್ಷ್ಮಿ ಲೇಔಟ್- ಗೋಪಾಲಯ್ಯ
- ಮಲ್ಲೇಶ್ವರಂ- ಅಶ್ವಥ್ ನಾರಾಯಣ್
- ಗೋವಿಂದರಾಜನಗರ- ವಿ.ಸೋಮಣ್ಣ
- ವಿಜಯನಗರ- ರವೀಂದ್ರ / ಉಮೇಶ್ ಶೆಟ್ಟಿ
- ಬಸವನಗುಡಿ- ರವಿಸುಬ್ರಹ್ಮಣ್ಯ / ತೇಜಸ್ವಿನಿ ಅನಂತ್ ಕುಮಾರ್
- ಜಯನಗರ- ಸಿ.ಕೆ ರಾಮಮೂರ್ತಿ/ ಎನ್.ಆರ್ ರಮೇಶ್/ ಎಸ್.ಕೆ ನಟರಾಜ್
- ಚಿಕ್ಕಪೇಟೆ- ಉದಯ್ ಗರುಡಾಚಾರ್/ ಹೇಮಚಂದ್ರ ಸಾಗರ್
- ಹೆಬ್ಬಾಳ- ಕಟ್ಟಾ ಸುಬ್ರಹ್ಮಣ್ಯ ನಾಯ್ಡು/ ನಾರಾಯಣಸ್ವಾಮಿ.
- ಶಿವಾಜಿನಗರ- ರುಮಾನ್ ಬೇಗ್ / ನಿರ್ಮಲ್ ಕುಮಾರ್ ಸುರಾನಾ/ ಸರವಣ.
- ಬ್ಯಾಟರಾಯನಪುರ- ತಮ್ಮೇಶ್ ಗೌಡ/ ಎ.ರವಿ/ ಮುನೀಂದ್ರ ಕುಮಾರ್.
- ಶಾಂತಿನಗರ- ಗೌತಮ್ ಕುಮಾರ್/ ವಾಸುದೇವ ಮೂರ್ತಿ
- ಗಾಂಧಿನಗರ- ಸಪ್ತಗಿರಿ ಗೌಡ/ ಶಿವಕುಮಾರ್.
- ದಾಸರಹಳ್ಳಿ- ಮುನಿರಾಜು/ ಲೋಕೇಶ್.
- ಚಾಮರಾಜಪೇಟೆ- ಬಾಸ್ಕರ್ ರಾವ್/ ಬಿ.ವಿ ಗಣೇಶ್/ ಲಹರಿ ವೇಲು
- ಬಿಟಿಎಂ ಲೇಔಟ್- ಅನಿಲ್ ಶೆಟ್ಟಿ/ ವಿವೇಕ್ ರೆಡ್ಡಿ
- ಆನೇಕಲ್- ಶಿವರಾಮ್/ ಶ್ರೀನಿವಾಸ್/ ಡಾ. ಸಂದೀಪ್
- ಸರ್ವಜ್ಞ ನಗರ- ಪದ್ಮನಾಭ ರೆಡ್ಡಿ
- ಪುಲಕೇಶಿ ನಗರ- ಸುಶೀಲಾ ದೇವರಾಜ್
ಇದನ್ನೂ ಓದಿ:ಜೆಡಿಎಸ್ ತೊರೆದಿದ್ದ ಎ ಟಿ ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ