ಕರ್ನಾಟಕ

karnataka

ETV Bharat / state

ವಿಜಯನಗರದ ಪರಾಜಿತ ಬಿಜೆಪಿ ಅಭ್ಯರ್ಥಿ ರವೀಂದ್ರಗೆ ಲಘು ಹೃದಯಾಘಾತ - ಲಘು ಹೃದಯಾಘಾತ

ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಹೆಚ್.ರವೀಂದ್ರ ಅವರಿಗೆ ಲಘು ಹೃದಯಾಘಾತವಾಗಿದೆ.

bjp-candidate-ravindra-got-mild-heart-attack
ವಿಜಯನಗರ : ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ರವೀಂದ್ರಗೆ ಲಘು ಹೃದಯಾಘಾತ

By

Published : May 13, 2023, 5:19 PM IST

ವಿಜಯನಗರ : ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ರವೀಂದ್ರ ಅವರಿಗೆ ಲಘು ಹೃದಯಾಘಾತವಾಗಿದೆ. ಮತ ಎಣಿಕೆಯ ಬಳಿಕ ಅನಾರೋಗ್ಯ ಉಂಟಾಗಿದ್ದು, ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ರವೀಂದ್ರ ಅವರು ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿ ಸೋಲು ಕಂಡಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಎಂ.ಕೃಷ್ಣಪ್ಪ ಅವರಿಗೆ ಗೆಲುವಾಗಿದೆ. ರವೀಂದ್ರ 8,000 ಮತಗಳಿಂದ ಪರಾಭವಗೊಂಡಿದ್ದಾರೆ. ಕೃಷ್ಣಪ್ಪ 80,157 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ 72,833 ಮತಗಳನ್ನು ಪಡೆದಿದ್ದಾರೆ.

ಇದನ್ನೂ ಓದಿ :ಮತ ಪ್ರಭುವಿನ ಮಹಾತೀರ್ಪು! 'ಕೈ' ವಶವಾದ ಕರ್ನಾಟಕ, ಬಿಜೆಪಿಗೆ ಮುಖಭಂಗ -​ ರಾಜ್ಯದ ಜನತೆಗೆ ಧನ್ಯವಾದ ಹೇಳಿದ ಸಿದ್ದು, ಡಿಕೆಶಿ

ABOUT THE AUTHOR

...view details