ಬೆಂಗಳೂರು :ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆದ ಬೆನ್ನಲ್ಲೇ ಉಪ ಸಭಾಪತಿ ಚುನಾವಣೆಗೂ ಚುನಾವಣೆ ಘೋಷಣೆಯಾಗಿದ್ದು, 2ನೇ ಬಾರಿಗೆ ವಿಧಾನ ಪರಿಷತ್ ಉಪ ಸಭಾಪತಿ ಚುನಾವಣೆಗೆ ಬಿಜೆಪಿ ಸದಸ್ಯ ಎಂ.ಕೆ. ಪ್ರಾಣೇಶ್ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಾಗಿ 2ನೇ ಬಾರಿ ಆಯ್ಕೆಯಾದ ಪ್ರಾಣೇಶ್ ಅವರನ್ನೇ ಉಪ ಸಭಾಪತಿ ಹುದ್ದೆಯಲ್ಲಿ ಮುಂದುವರೆಸುವಂತೆ ಆರ್.ಎಸ್.ಎಸ್. ಪ್ರಮುಖರು ಪಟ್ಟು ಹಿಡಿದಿದ್ದರ ಪರಿಣಾಮವಾಗಿ ಶುಕ್ರವಾರದಂದು ನಡೆಯುವ ಉಪ ಸಭಾಪತಿ ಚುನಾವಣೆಯಲ್ಲಿ ಪ್ರಾಣೇಶ್ ಅವಿರೋಧವಾಗಿ 2ನೇ ಬಾರಿಗೆ ಉಪ ಸಭಾಪತಿ ಹುದ್ದೆ ಅಲಂಕರಿಸುವುದು ಬಹುತೇಕ ನಿಶ್ಚಿತವಾಗಿದೆ.