ಬೆಂಗಳೂರು: ಆರ್.ಆರ್. ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಮುನಿರತ್ನ ಅವರಿಗೆ ಮತದಾನ ಮಾಡುವ ಅವಕಾಶವಿಲ್ಲ.
ಬಿಜೆಪಿ ಅಭ್ಯರ್ಥಿ ಮುನಿರತ್ನಗಿಲ್ಲ ಮತದಾನದ ಅವಕಾಶ: ಕಾರಣ? - RR Nagar Voting
ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ನಿವಾಸ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಕಾರಣ ಅವರಿಗೆ ಆರ್.ಆರ್. ನಗರದಲ್ಲಿ ಮತದಾನದ ಅವಕಾಶ ಇಲ್ಲದಂತಾಗಿದೆ.
ಬಿಜೆಪಿ ಅಭ್ಯರ್ಥಿ ಮುನಿರತ್ನಗಿಲ್ಲ ಮತದಾನದ ಅವಕಾಶ
ಮುನಿರತ್ನ ನಿವಾಸ ವೈಯಾಲಿ ಕಾವಲ್ನಲ್ಲಿದ್ದು, ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ, ಅವರಿಗೆ ತಾನು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಮತದಾನ ಮಾಡುವ ಅವಕಾಶ ಇಲ್ಲದಂತಾಗಿದೆ.
ಇಂದು ಮತದಾನ ನಡೆಯುತ್ತಿರುವ ಹಿನ್ನೆಲೆ, ಮುನಿರತ್ನ ನಿವಾಸದಲ್ಲೇ ಇದ್ದು, ಶುಭ ಮುಹೂರ್ತ ನೋಡಿಕೊಂಡು ವೈಯಾಲಿಕಾವಲ್ ನಲ್ಲಿರುವ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ದೇಗುಲ ದರ್ಶನದ ಬಳಿಕ ಜೆ.ಪಿ. ಪಾರ್ಕ್ ಸೇರಿದಂತೆ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಲಿದ್ದಾರೆ.